ತಿರುನೆಲ್ವೇಲಿ (ತಮಿಳುನಾಡು):ತಮಿಳುನಾಡಿನ ತಿರುನೆಲ್ವೇಲಿ ನಗರದ ಬಹುತೇಕ ಮನೆಗಳ ಗೇಟ್​ ಮೇಲೆ ಚಿತ್ರ-ವಿಚಿತ್ರ ರೀತಿಯ ನಿಗೂಢ ಬರಹಗಳು ಕಾಣಿಸಿಕೊಳ್ಳುತ್ತಿದ್ದು ನಗರದ ಜನರು ಬೆಚ್ಚಿ ಬಿದ್ದಿದ್ದಾರೆ.
ವಿ.ಎಂ.ಚತ್ರಮ್ ಮತ್ತು ಅರೋಕ್ಯ ನಗರದಲ್ಲಿ ಎಣ್ಣೆಯಲ್ಲಿ ಕೆಲವು ಮಾರ್ಕ್​ ಮಾಡಿ ಹೋಗಲಾಗಿದೆ. ಈ ಪ್ರದೇಶದಲ್ಲಿ ಮನೆಗಳು ಕಡಿಮೆ ಇರುವ ಹಿನ್ನೆಲೆಯಲ್ಲಿ, ಬಹುತೇಕ ಎಲ್ಲ ಮನೆಗಳ ಮೇಲೆ ಬೇರೆ ಬೇರೆ ರೀತಿಯ ಗುರುತುಗಳನ್ನು ಮಾಡಿ ಹೋಗಲಾಗಿದೆ.
ಕಳೆದ ವಾರದಿಂದ ಇದು ಶುರುವಾಗಿದ್ದು, ಪ್ರತಿದಿನವೂ ಗುರುತು ಮಾಡಿ ಹೋಗಲಾಗುತ್ತಿದೆ. ಈ ಗುರುತುಗಳೊಂದಿಗೆ ಜನರು ಪೊಲೀಸ್​ ಠಾಣೆಗೆ ದೌಡಾಯಿಸಿ, ಅದರ ರಹಸ್ಯ ಬಯಲು ಮಾಡುವಂತೆ ಕೋರತೊಡಗಿದ್ದಾರೆ.
ಇದನ್ನೂ ಓದಿ:ರಕ್ಷಣಾ ತಂತ್ರಜ್ಞಾನದಲ್ಲಿ ಭಾರತದ ಮೈಲಿಗಲ್ಲು: ಆತ್ಮನಿರ್ಭರ್​ ಭಾರತದತ್ತ ದಿಟ್ಟ ಹೆಜ್ಜೆ
ಈ ಎಲ್ಲಾ ಗುರುತುಗಳನ್ನು ಒಂದೆಡೆ ಕಲೆ ಹಾಕಿದ ನಂತರ ಪೊಲಿಸರಿಗೆ ಇದು ಕಳ್ಳರು ಕಳ್ಳತನ ಮಾಡಲು ಬರುವ ಮುನ್ನ ಆಯಾ ಮನೆಗಳ ಕುರಿತು ಇನ್ನೊಬ್ಬ ಕಳ್ಳರಿಗೆ ನೀಡುವ ಸೂಚನೆ ಎಂದು ಹೇಳಿದ್ದಾರೆ. ಅಂದರೆ, ಒಂದು ಮನೆಯ ಮೇಲೆ ತೀವ್ರವಾಗಿ ನಿಗಾ ಇಡುವ ಕಳ್ಳರು, ಆ ಮನೆಯವರು ಎಷ್ಟು ಸಿರಿವಂತರು, ಅವರ ಮನೆಯಲ್ಲಿ ಎಷ್ಟು ಚಿನ್ನಾಭರಣ ಇಟ್ಟಿರಬಹುದು, ಮನೆಯಲ್ಲಿ ಕಳ್ಳತನ ಮಾಡಿದರೆ ನಮಗೆ ಪ್ರಯೋಜನ ಇದೆಯೆ, ಇಲ್ಲವೇ ಎಂಬಿತ್ಯಾದಿಯಾಗಿ ಗುರುತು ಮಾಡಿ ಹೋಗುತ್ತಾರೆ.
ಈ ಗುರುತನ್ನು ನೋಡಿ ಇನ್ನೊಂದು ಗುಂಪಿನವರು ಅ ಮನೆಯಲ್ಲಿ ಹೇಗೆ ಕಳ್ಳತನ ಮಾಡಬಹುದು ಎಂದು ಸಂಚು ರೂಪಿಸುತ್ತಾರೆ ಎಂದಿದ್ದಾರೆ.
ಈ ಪ್ರದೇಶದಲ್ಲಿ ಜನಸಂಖ್ಯೆ ತೀರಾ ಕಡಿಮೆ ಇದೆ. ಇಲ್ಲಿರುವವರಲ್ಲಿ ಬಹುತೇಕ ಮಂದಿ ಸ್ಥಿತಿವಂತರಾಗಿದ್ದರೂ ಬೇರೆಬೇರೆ ಕಡೆಗಳಲ್ಲಿ ಉದ್ಯೋಗ ಮಾಡುತ್ತಿದ್ದು, ವಾರಾಂತ್ಯದಲ್ಲಿ ಮಾತ್ರ ತಮ್ಮ ಮನೆಗಳಿಗೆ ಭೇಟಿ ಕೊಡುತ್ತಾರೆ. ಈ ಹಿನ್ನೆಲೆಯಲ್ಲಿ, ಇಂಥದ್ದೊಂದು ತಂತ್ರ ರೂಪಿಸಿದ್ದಾರೆ ಕಳ್ಳರು ಎಂದು ಪೊಲೀಸರು ಅಂದಾಜಿಸಿದ್ದಾರೆ.
ಸದ್ಯ ಯಾರೂ ಭಯಪಡಬೇಡಿ ಎಂದಿರುವ ಪೊಲೀಸರು, ಈ ಸ್ಥಳದಲ್ಲಿ ಸಿಸಿಟಿವಿ ಅಳವಡಿಕೆಗೆ ಮುಂದಾಗಿದ್ದಾರೆ, ಜತೆಗೆ ಪೊಲೀಸರನ್ನು ಸ್ಥಳದಲ್ಲಿ ನಿಯೋಜಿಸಲು ಚರ್ಚೆ ನಡೆದಿದೆ. ಬಹಳ ದಿನಗಳವರೆಗೆ ಮನೆಯಲ್ಲಿ ಇರದೇ ಹೋದರೆ, ಇಂಥದ್ದೇನಾದರೂ ಗುರುತುಗಳು ನಿಮ್ಮ ಮನೆಯ ಮುಂದೆ ಕಂಡರೆ ತಮಗೆ ತಿಳಿಸುವಂತೆ ಸ್ಥಳೀಯರಿಗೆ ಪೊಲೀಸರು ಸೂಚನೆ ನೀಡಿದ್ದಾರೆ.

ಯಾವ್ಯಾವ ಗುರುತು ಏನನ್ನು ಸೂಚಿಸುತ್ತದೆ? ಇಲ್ಲಿದೆ ಮಾಹಿತಿ:
* Alarmed house- ಅಪಾಯದ ಮುನ್ಸೂಚನೆ* occupants afraid- ಇಲ್ಲಿರುವವರು ಹೆದರುಪುಕ್ಕರು* previously burgled -ಈ ಮೊದಲೇ ಕಳ್ಳತನವಾಗಿದೆ* nothing worth stealing- ಮನೆಯಲ್ಲಿ ಕಳುವಾಗುವಂಥದ್ದು ಏನೂ ಇಲ್ಲ*good target- ಕದಿಯಲು ಅನುಕೂಲವಾಗಿದೆ* too risky-ಕದಿಯುವುದು ತುಂಬಾ ಅಪಾಯ* vulnerable occupant- ಮನೆಯಲ್ಲಿ ಇರುವವರು ದುರ್ಬಲರು * wealthy- ಸಿಕ್ಕಾಪಟ್ಟೆ ಸಿರಿವಂತರು
ನಟಿ ಕಂಗನಾಗೆ ಕೇಂದ್ರದಿಂದ ‘ವೈ ಪ್ಲಸ್’​ ಭದ್ರತೆ: ಏನಿದರ ವಿಶೇಷತೆ?

ಶಿಕ್ಷಕಿ ದೇಣಿಗೆ ಕೇಳಿದರೆ, ಅವರಿಂದಲೇ ₹48 ಲಕ್ಷ ದೋಚಿದ ಭೂಪ- ನಿಮಗೂ ಇದು ಪಾಠ!

ಶಾಸಕ ನೇಗಿ ವಿರುದ್ಧ ರೇಪ್​ ಕೇಸ್​: ನನ್ನ ಮಗಳ ತಂದೆ ಇವರೇ ಎಂದ ಮಹಿಳೆ- ಎಫ್​ಐಆರ್​ ದಾಖಲು

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:1 × 5 =
Remember me
