ಅಹಮದಾಬಾದ್‌ (ಗುಜರಾತ್‌):ರಾತ್ರಿ ಭಯಾನಕ ಶಬ್ದವೊಂದು ಗುಜರಾತಿನಲ್ಲಿ ಕೇಳಿಬಂದಿದ್ದು, ಜನರು ಭಯಭೀತರಾಗಿರುವ ಘಟನೆ ನಡೆದಿದೆ. ಭೂಕಂಪ ಇರಬೇಕೆಂದು ಓಡಿ ಹೋದರೆ ಅವರಿಗೆ ಅಲ್ಲಿ ಕಂಡದ್ದು ವಿಚಿತ್ರವಾದ ಲೋಹದ ದೊಡ್ಡ ಚೆಂಡುಗಳು. ಇದರಿಂದ ಜನರು ಬೆಚ್ಚಿಬಿದ್ದಿದ್ದಾರೆ.
ಆಕಾಶದಿಂದ ವಿಚಿತ್ರವಾದ ಲೋಹದ ದೊಡ್ಡ ಚೆಂಡುಗಳು ಗುಜರಾತಿನ ಹಲವಾರು ಕಡೆಗಳಲ್ಲಿ ಬಿದ್ದಿರುವುದಾಗಿ ವರದಿಯಾಗಿದೆ.ಆನಂದ್ ಜಿಲ್ಲೆಯ ಭಲೇಜ್, ಖಂಭೋಲಾಜ್ ಮತ್ತು ರಾಂಪುರ ಎಂಬ ಮೂರು ಸ್ಥಳಗಳಲ್ಲಿ ಈ ಚೆಂಡುಗಳು ಕಾಣಿಸಿಕೊಂಡಿದ್ದು ಜನರು ಹೌಹಾರಿ ಹೋಗಿದ್ದಾರೆ.
ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಸದ್ಯ ಚೆಂಡುಗಳನ್ನು ಸಂಗ್ರಹಿಸುವ ಪೊಲಿಸರು ಅದನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಹೆಚ್ಚಿನ ಮಾಹಿತಿಗಾಗಿ ಕಳುಹಿಸಿಕೊಡಲಾಗಿದೆ.
ಈ ಚೆಂಡುಗಳು ಸುಮಾರು 5 ಕೆ.ಜಿ ತೂಕದ ಗಂಟೆಯಂತೆ ಕಾಣುತ್ತಿರುವುದಾಗಿ ವರದಿಯಾಗಿದೆ. ಹಲವೆಡೆಗಳಲ್ಲಿ ರಾತ್ರಿ ಆಕಾಶದಿಂದ ಇವು ಉದುರಿದರೆ ಕಪ್ಪು ಲೋಹದ ಚೆಂಡು ಗುರುವಾರ ಸಂಜೆ 4:45 ರ ಸುಮಾರಿಗೆ ಭಲೇಜ್‌ನಲ್ಲಿ ಬಿದ್ದಿತು. ಇದಾದ ನಂತರ ಖಂಭೋಲಾಜ್ ಮತ್ತು ರಾಂಪುರದಲ್ಲಿ ಇದೇ ರೀತಿಯ ವಿಚಿತ್ರವಾದ ಲೋಹದ ಚೆಂಡುಗಳು ಬಿದ್ದಿವೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಆನಂದ್ ನಗರದ ಪೊಲೀಸ್ ವರಿಷ್ಠಾಧಿಕಾರಿ ಅಜಿತ್ ರಜಿಯಾನ್ ಹೇಳಿದ್ದಾರೆ.
ಇವೆಲ್ಲವೂ ಮನೆಯಿಂದ ಸ್ವಲ್ಪ ದೂರ ಬಿದ್ದಿದ್ದರಿಂದ ಯಾವುದೇ ಅನಾಹುತ ಸಂಭವಿಸಿಲ್ಲ. ಆದರೆ ಇದು ವಿಚಿತ್ರವಾಗಿದ್ದು, ತನಿಖೆ ಆರಂಭಿಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
ವರದಿಗಳ ಪ್ರಕಾರ ಇಲ್ಲಿ ಹಿಂದೆಯೂ ಇಂತಹ ನಿಗೂಢ ಘಟನೆಗಳು ನಡೆದಿತ್ತು. ಈ ವರ್ಷ ಏಪ್ರಿಲ್‌ನಲ್ಲಿ ಮಹಾರಾಷ್ಟ್ರದಲ್ಲಿ `ಉಲ್ಕಾಶಿಲೆ’ ಆಕಾಶದಲ್ಲಿ ಕಾಣಿಸಿಕೊಂಡ ನಂತರ ಇದೇ ರೀತಿಯ ಘಟನೆ ಸಂಭವಿಸಿತ್ತು. ಏರೋಪ್ಲೇನ್‌ನಂತೆ ಸದ್ದು ಮಾಡಿದ ಶಬ್ದದ ನಂತರ ದೊಡ್ಡ ಸ್ಫೋಟ ಸಂಭವಿಸಿತ್ತು. ಆ ಉತ್ಕಾಶಿಲೆಯನ್ನು ನ್ಯೂಜಿಲೆಂಡ್‌ನಿಂದ ಉಡಾವಣೆಯಾದ ಉಪಗ್ರಹದ ತುಣುಕುಗಳು ಎಂದು ಮೂಲಗಳು ಖಚಿತಪಡಿಸಿದ್ದವು.
Mysterious metal balls fall from space in Gujarat, pics surfacehttps://t.co/6EUJAOE968-via@inshorts. STRANGE
— Syed Qadri (@SyedQad22698550)May 13, 2022

ವರ್ಕ್‌ ಫ್ರಂ ಹೋಂ: ಮನೆಯಲ್ಲಿ ಕುಳಿತು ಆದಾಯ ಗಳಿಸಲು ಹೋಗಿ 4.92 ಲಕ್ಷ ರೂ. ಪಂಗನಾಮ

ಶಾಸಕ ದೇವೇಗೌಡರ ಮೂರು ವರ್ಷದ ಮೊಮ್ಮಗಳ ನಿಧನ: ಆಸ್ಪತ್ರೆ ಸೇರಿಸಿದರೂ ಫಲಿಸದ ಚಿಕಿತ್ಸೆ

ಆ್ಯಸಿಡ್‌ ಹಾಕಿಬಂದೆ, ಪೊಲೀಸ್ರಿಗೆ ಇನ್ನೂ ಗೊತ್ತಾಗಿಲ್ಲ, ಪ್ಲೀಸ್ ಬೇಲ್‌ ಕೊಡಿಸಿ ಎಂದು ವಕೀಲರ ಬಳಿ ಓಡಿದ್ದ ನಾಗ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − 7 =
Remember me
