ರಾಯ್​ಪುರ (ಛತ್ತೀಸಗಢ):ಮಗುಬೇಕು ಎಂಬ ಆಸೆ ಪ್ರತಿಯೊಬ್ಬ ಹೆಣ್ಣಿಗೂ ಇರುತ್ತದೆ. ಆದರೆ ನಾನಾ ಕಾರಣಗಳಿಂದ ಎಷ್ಟೋ ಮಹಿಳೆಯರಿಗೆ ಗರ್ಭ ಧರಿಸಲು ಸಾಧ್ಯವಾಗುವುದಿಲ್ಲ. ಅಂಥ ಸಮಯದಲ್ಲಿ ತಪ್ಪು ದಂಪತಿಯಲ್ಲಿ ಯಾರದ್ದೇ ಇರಲಿ, ಮಹಿಳೆಯರು ಅನುಭವಿಸುವ ನೋವುಗಳು, ಚುಚ್ಚುಮಾತುಗಳು ಅಷ್ಟಿಷ್ಟಲ್ಲ.
ಗರ್ಭ ಧರಿಸದೇ ಇರುವ ಸಂದರ್ಭದಲ್ಲಿ ಎಲ್ಲಾ ರೀತಿಯ ಪ್ರಯತ್ನಗಳೂ ಸೋತ ತಕ್ಷಣ ಮಹಿಳೆಯರು ಕೊನೆಯದಾಗಿ ಮೊರೆ ಹೋಗುವುದು ದೇವರಿಗೆ. ಎಷ್ಟೇ ಕಷ್ಟವಾದರೂ ಸರಿ, ಆ ಹರಕೆಯನ್ನು ತೀರಿಸುವ ಪಣ ತೊಡುತ್ತಾರೆ.ಇಂಥ ಮುಗ್ಧ ಹೆಣ್ಣುಮಕ್ಕಳನ್ನು ಚಿತ್ರಹಿಂಸೆಗೆ ಗುರಿಪಡಿಸಿ, ಮೂಢ ನಂಬಿಕೆಗಳಿಗೆ ಒಳಪಡಿಸುವಂಥ ಆಚರಣೆಗಳು ಅಲ್ಲಲ್ಲಿ ಕಾಣಸಿಗುತ್ತದೆ.
ಅಂಥದ್ದೇ ಒಂದು ಕಠೋರ ಹಾಗೂ ಭಯಾನಕ ಆಚರಣೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಛತ್ತೀಸಗಢದ ರಾಯ್​ಪುರದಲ್ಲಿ ಈ ಘಟನೆ ನಡೆದಿದೆ.
ಈ ಹರಕೆಯ ವಿಡಿಯೋ ನೋಡಲು ಈ ಲಿಂಕ್​ ಕ್ಲಿಕ್​ ಮಾಡಿ:
https://www.facebook.com/VVani4U/videos/380014929885987/
ಪ್ರತಿ ವರ್ಷದಂತೆ ಈ ವರ್ಷವೂ ಇಂಥದ್ದೊಂದು ವಿಚಿತ್ರ ಹರಕೆ ತೀರಿಸುವ ಘಟನೆ ಕರೊನಾ ಮಧ್ಯೆಯೇ ನಡೆದಿದೆ. ಈ ಆಚರಣೆ ಎಂದರೆ ಮಕ್ಕಳು ಬಯಸುವ ಮಹಿಳೆಯರು ಮಲಗಿದರೆ ಅವರ ಮೇಲೆ ಪೂಜಾರಿಗಳು ಹಾಗೂ ಬೈರಾಗಿಗಳು ನಡೆದುಕೊಂಡು ಹೋಗಿದ್ದಾರೆ.
ಹೀಗೆ ಮಾಡಿದರೆ ಮಹಿಳೆಯರಿಗೆ ಮಕ್ಕಳಾಗುತ್ತದೆಯಂತೆ. ಕರೊನಾ ನಡುವೆಯೂ ಯಾವುದೇ ಕರೊನಾ ನಿಯಮ ಪಾಲನೆ ಮಾಡದೇ, ಮಾಸ್ಕ್​ ಧರಿಸದೇ ಮಹಿಳೆಯರ ಮೇಲೆ ಪೂಜಾರಿ ಹಾಗೂ ಬೈರಾಗಿಗಳು ನಡೆದುಕೊಂಡು ಹೋಗಿರುವ ವಿಡಿಯೋ ಜಾಲತಾಣದಲ್ಲಿ ಸದ್ದು ಮಾಡುತ್ತಿದ್ದು, ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.
ಮಗುವಿದ್ದರೂ ವಿವಾಹಿತನ ಸ್ನೇಹ ಬೆಳೆಸಿ ಹೆಣವಾದ ಗರ್ಭಿಣಿ- ಕೊಲೆ ಮಾಡಿ ಹೂತುಹಾಕಿದ ಪಾಪಿ!

ಮುಟ್ಟಿನ ಸಮಸ್ಯೆಯಿಂದ ಮುಕ್ತಿ ಹೊಂದಲು ಆಯುರ್ವೇದದಲ್ಲೇನು ಪರಿಹಾರ?

ಬೇರೆ ಹೆಣ್ಣಿನತ್ತ ಗಂಡ ಆಕರ್ಷಿತನಾಗುತ್ತಿದ್ದರೆ ಪತ್ನಿಗಿರುವ ದಾರಿಗಳಾವುವು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 + 7 =
Remember me
