ಹೈದರಾಬಾದ್:‘ಅದೇನದೋ ನಿನ್ನ ಇನ್​ಸ್ಟಾಗ್ರಾಂನಲ್ಲಿ ಇರೋ ಡೇಟು? ನಿನ್ನ ಹುಟ್ಟಿದ ಹಬ್ಬ ಅಂತೂ ಅಲ್ಲ, ಮತ್ಯಾಕೆ ಆ ದಿನಾಂಕ ಬರೆದುಕೊಂಡಿರುವಿ?’ ಎಂದು 10 ನೇ ತರಗತಿ ವಿದ್ಯಾರ್ಥಿ ಶಿವಲೋಕೇಶ್​ನನ್ನು ಆತನ ಸ್ನೇಹಿತ ಕೇಳಿದ್ದ. ಆಗ ಶಿವಲೋಕೇಶ್​ ಅದು ನನ್ನ ಬರ್ತ್​ಡೇಟ್​ ಅಲ್ಲವೋ, ಡೆತ್​ ಡೇಟ್​ ಎಂದಿದ್ದ. ಆ ಸ್ನೇಹಿತನ ಹುಟ್ಟುಹಬ್ಬ ಇದ್ದುದರಿಂದ ಆತನಿಗೆ ಶುಭಾಶಯ ಕೂಡ ಕೋರಿದ್ದ.
ಮಾರನೆಯ ದಿನವೇ ಬಂದ ಸುದ್ದಿ ಕೇಳಿ ಆ ಸ್ನೇಹಿತನಿಗೆ ಆಕಾಶವೇ ಕಳಚಿ ಬಿದ್ದಂತಾಯಿತು. ಏಕೆಂದರೆ ಹಿಂದಿನ ದಿನವಷ್ಟೇ ತನಗೆ ವಿಷ್​ ಮಾಡಿದ್ದ ಸ್ನೇಹಿತ ಶಿವಲೋಕೇಶ್​ ಆತ್ಮಹತ್ಯೆ ಮಾಡಿಕೊಂಡಿರುವ ವಿಷಯ ತಿಳಿಯಿತು! ಮತ್ತೊಮ್ಮೆ ಆತನ ಇನ್​ಸ್ಟಾಗ್ರಾಂ ನೋಡಿದಾಗ ಅಲ್ಲಿ ನಮೂದಾಗಿದ್ದ ದಿನಾಂಕವೇ ಆತನ ಸಾವಿನ ದಿನ ಎಂದು ತಿಳಿಯುವಷ್ಟರಲ್ಲಿ ಎಲ್ಲವೂ ಮುಗಿದು ಹೋಗಿತ್ತು. ಅದು ತನ್ನ ಡೆತ್​ಡೇಟ್​ ಎಂದು ಶಿವಲೋಕೇಶ್​ ಹೇಳಿದ್ದಾಗ ಅದನ್ನು ತಮಾಷೆ ಎಂದುಕೊಂಡು ನಕ್ಕಿದ್ದ ಸ್ನೇಹಿತನಿಗೆ ಈ ವಿಷಯ ಜೀರ್ಣಿಸಿಕೊಳ್ಳಲು ಆಗಲಿಲ್ಲ.
ಈ ದುರ್ಘಟನೆ ನಡೆದಿರುವುದು ತೆಲಂಗಾಣದ ಭದ್ರಾದ್ರಿ ಕೊತಗುಡೆಂನಲ್ಲಿ. 14 ವರ್ಷದ ಶಿವಲೋಕೇಶ್​ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸಾವಿಗೆ ನಿಖರ ಕಾರಣ ಏನೆಂದು ತಿಳಿದುಬಂದಿಲ್ಲ. ಆದರೆ ಹಿಂದಿನ ದಿನವಷ್ಟೇ (ಜುಲೈ 19) ಸ್ನೇಹಿತನಿಗೆ ಹುಟ್ಟುಹಬ್ಬದ ಶುಭಾಶಯ ಹೇಳುವಾಗಲೂ ಸರಿಯಾಗಿಯೇ ಇದ್ದಂತೆ ತೋರುತ್ತಿದ್ದ ಈ ಬಾಲಕ, ಕೆಲ ದಿನಗಳ ಹಿಂದೆಯೇ ತನ್ನ ಸಾವಿನ ದಿನವನ್ನು (20-07-22) ಏಕೆ ಬರೆದಿಟ್ಟ ಎನ್ನುವುದು ಮಾತ್ರ ನಿಗೂಢವಾಗಿಯೇ ಉಳಿದಿದೆ. ಇನ್​ಸ್ಟಾಗ್ರಾಮ್​ನ ಪ್ರೊಫೈಲ್​ನಲ್ಲಿ ಈ ದಿನಾಂಕವನ್ನು ನಮೂದು ಮಾಡಲಾಗಿದೆ.
ಶಿವಲೋಕೇಶ್ ಮೊಬೈಲ್​ ಗೀಳು ಹಚ್ಚಿಕೊಂಡಿದ್ದ. ಸಾಮಾಜಿಕ ಜಾಲತಾಣದಲ್ಲಿ ಸದಾ ಮುಳುಗಿರುತ್ತಿದ್ದ. ಸ್ನೇಹಿತರ ಬಳಿಯೂ ಅಷ್ಟೆಲ್ಲಾ ಸರಿಯಾಗಿ ವರ್ತಿಸುತ್ತಿರಲಿಲ್ಲ. ಯಾವಾಗ ನೋಡಿದರೂ ಮೊಬೈಲ್​ ಗುಂಗಿನಲ್ಲಿ ಇರುತ್ತಿದ್ದ. ಇದೇ ಆತನ ಸಾವಿಗೆ ಕಾರಣ ಆಗಿರಬಹುದು, ಮೊಬೈಲ್​ನಲ್ಲಿ ಯಾವುದೋ ಆಟದ ಹುಚ್ಚು ಇಲ್ಲವೇ ವಿಡಿಯೋ ನೋಡಿ ಸಾವಿನ ಹಾದಿ ತುಳಿದಿರಬಹುದು ಎಂದು ಸ್ನೇಹಿತರು ಶಂಕೆ ವ್ಯಕ್ತಪಡಿಸಿದ್ದಾರೆ. ಸದ್ಯ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ನಡೆಸುತ್ತಿದ್ದಾರೆ.(ಏಜೆನ್ಸೀಸ್​)
ಕೂಡ್ಲಿಗಿಯಲ್ಲೊಂದು ಬೆಚ್ಚಿಬೀಳೋ ಘಟನೆ: ಮದುವೆಗೆ ಒಪ್ಪಲಿಲ್ಲವೆಂದು ರುಂಡ ಕಡಿದು ಪೊಲೀಸ್​ ಠಾಣೆಗೆ ತಂದ!

ಕಂಕುಳಿನ ಕೂದಲಿನಿಂದ ಕೋಟಿ ಕೋಟಿ ರೂ. ಗಳಿಸ್ತಾಳೆ ಈಕೆ- ಬೆವರೇ ಈಕೆಯ ಆದಾಯದ ಮೂಲವಂತೆ!

ಛೇ… ಇದೆಂಥ ದುರಂತ! ಅಪಘಾತದಲ್ಲಿ ಪ್ರಾಣ ಬಿಡುತ್ತಲೇ ನಡುರಸ್ತೆಯಲ್ಲಿ ಮಗುವಿಗೆ ಜನ್ಮ ನೀಡಿದ ಅಮ್ಮ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − 7 =
Remember me
