ಚೆನ್ನೈ:ಕಳ್ಳತನಕ್ಕೆ ಕಾರಣಗಳು ನೂರಾರು. ಆದರೆ ಏನು ಮಾಡಿದರೂ ಕಳ್ಳತನ ಅಪರಾಧವೇ. ಆದರೆ ಎಷ್ಟೋ ಸಂದರ್ಭಗಳಲ್ಲಿ ತುತ್ತು ಕೂಳಿಗಾಗಿ ಇಲ್ಲವೇ ಇನ್ನಾವುದೋ ಕಾರಣಕ್ಕೆ ಮಕ್ಕಳು ಅರಿಯದೇ ಚಿಕ್ಕಪುಟ್ಟ ಕಳ್ಳತನ ಮಾಡುವುದು ಉಂಟು. ಅಂಥ ಸಂದರ್ಭದಲ್ಲಿ ಅವರಿಗೆ ತಿಳಿಹೇಳದೇ ಅವರಿಗೆ ಶಿಕ್ಷೆ ನೀಡಿದರೆ ಮುಂದೆ ಅವರು ಮಹಾನ್​ ಕಳ್ಳರಾಗಿ ರೂಪುಗೊಳ್ಳುತ್ತಾರೆ ಎಂದು ಇದಾಗಲೇ ಹಲವಾರು ಉದಾಹರಣಗಳು ಇವೆ.
ಆದರೆ ಇಲ್ಲೊಬ್ಬ ಲೇಡಿ ಇನ್ಸ್​ಪೆಕ್ಟರ್​ ಮಾತ್ರ ಮೊಬೈಲ್​ ಕದ್ದ 13 ವರ್ಷದ ಬಾಲಕನಿಗೆ ನಡೆಸಿಕೊಂಡ ರೀತಿ ಇದೀಗ ವೈರಲ್​ ಆಗಿದ್ದು, ಇನ್ಸ್​ಪೆಕ್ಟರ್​ ಅವರಿಗೆ ಶ್ಲಾಘನೆಗಳ ಮಹಾಪೂರವೇ ಹರಿದುಬಂದಿದೆ.
ಅಷ್ಟಕ್ಕೂ ಆಗಿದ್ದೇನೆಂದರೆ, ಚೆನ್ನೈನ ಶಾಲೆಯಲ್ಲಿ ಓದುತ್ತಿರುವ 13 ವರ್ಷದ ಬಾಲಕನ ಶಾಲೆಯಲ್ಲಿ ಆನ್​ಲೈನ್​ ತರಗತಿ ಶುರು ಮಾಡಿದ್ದಾರೆ. ಆದರೆ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿರುವ ಬಾಲಕನ ಪಾಲಕರಿಗೆ ಮೊಬೈಲ್​ ಫೋನ್​ ಕೊಡಿಸುವಷ್ಟು ಶಕ್ತಿ ಇರಲಿಲ್ಲ.
ತೀರಾ ಖಿನ್ನತೆಗೆ ಜಾರಿದ್ದ ಬಾಲಕನನ್ನು ಕಂಡ ಅಕ್ಕಪಕ್ಕದ ಇಬ್ಬರು ವ್ಯಕ್ತಿಗಳು (ಇವರು ಅಪರಾಧ ಚಟುವಟಿಕೆಯಲ್ಲಿ ಭಾಗಿಯಾಗುತ್ತಿರುವವರು) ನೋಡಿ ಬೆಟ್​ ಕಟ್ಟಿದ್ದಾರೆ. ತಮ್ಮ ಜತೆ ಕಳ್ಳತನಕ್ಕೆ ಬಂದರೆ ನಿನಗೆ ಮೊಬೈಲ್​ ಕೊಡಿಸುವುದಾಗಿ ಆಮಿಷ ಒಡ್ಡಿದ್ದಾರೆ. ಕಳ್ಳತನ ಮಾಡುವಾಗ ಸಿಕ್ಕಿಬಿದ್ದರೆ ತಾವು ತಪ್ಪಿಸಿಕೊಂಡು ಬಾಲಕನನ್ನು ಹಿಡಿಸಿ ಹಾಕುವ ಯೋಚನೆಯೂ ಈ ಖದೀಮರದ್ದಾಗಿತ್ತು.
ಇದನ್ನೂ ಓದಿ:ನಿಮ್ಮ ವಸ್ತುಗಳು ಕಳೆದುಹೋಗಿವ್ಯಾ? ಇನ್ಮುಂದೆ ಮನೆಯಲ್ಲೇ ಕೂತು ಕಂಪ್ಲೇಟ್​ ಕೊಡ್ಬೋದು!
ಮೊಬೈಲ್​ ಆಸೆಗೆ ಬಿದ್ದ ಬಾಲಕ ಟ್ರಕ್​ ಡ್ರೈವರ್​ ಒಬ್ಬರ ಫೋನ್​ ಕಳುವು ಮಾಡಿದ್ದಾರೆ. ಈ ಇಬ್ಬರು ಚಾಲಾಕಿಗಳೂ ಜತೆಯಲ್ಲಿ ಇದ್ದರು. ಟ್ರಕ್​ ಡ್ರೈವರ್​ ಹಾಗೂ ಇತರರು ಸೇರಿ ಈ ಮೂವರನ್ನೂ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಇವರನ್ನು ನೇರವಾಗಿ ಕರೆದುಕೊಂಡು ಬಂದಿದ್ದು ಪೊಲೀಸ್ ಇನ್ಸ್‌ಪೆಕ್ಟರ್ ಎಸ್. ಭುವನೇಶ್ವರಿ ಅವರ ಬಳಿ. ಅವರು ಬಾಲಕನನ್ನು ಪ್ರಶ್ನಿಸಿದಾಗ ಆತ ಕಥೆಯನ್ನೆಲ್ಲಾ ಹೇಳಿದ್ದಾನೆ.
ಇದನ್ನು ಕೇಳಿದ ಭುವನೇಶ್ವರಿ ಅವರಿಗೆ ಬಹಳ ದುಃಖವಾಗಿದೆ. ಈತನನ್ನು ಶಿಕ್ಷಿಸಿದರೆ ಮುಂದೆ ದೊಡ್ಡ ಅಪರಾಧಿಯಾಗುತ್ತಾನೆ ಎಂದು ಭಾವಿಸಿದ ಅವರು, ಬಾಲಕನಿಗೆ ಬುದ್ಧಿಮಾತು ಹೇಳಿದ್ದಾರೆ. ಅಷ್ಟೇ ಅಲ್ಲ. ತಮ್ಮ ಮಗಳಿಗೆ ಮೊಬೈಲ್​ ಖರೀದಿ ಮಾಡುವ ಸಂಬಂಧ ತೆಗೆದಿರಿಸಿದ್ದ ದುಡ್ಡಿನಿಂದ ಹೊಸ ಸ್ಮಾರ್ಟ್​ಫೋನ್​ ತಂದು ಬಾಲಕನಿಗೆ ನೀಡಿದ್ದಾರೆ.
“ಆನ್​ಲೈನ್​ ಕ್ಲಾಸ್​ಗಾಗಿ ಸ್ಮಾರ್ಟ್​ಫೋನ್​ ಇಲ್ಲದೇ ಪರದಾಡುವವರನ್ನು ನಾನು ನೋಡಿದ್ದೇನೆ. ಬಾಲಕನ ಮನೆಯ ಸ್ಥಿತಿ ಅವನನ್ನು ಹೀಗೆ ಮಾಡಿಸಿದೆ. ಅವನಿಗೆ ಶಿಕ್ಷೆ ನೀಡುವುದು ಯಾವ ರೀತಿಯಿಂದಲೂ ಸರಿಯಲ್ಲ ಎಂದು ನನಗೆ ಅನ್ನಿಸಿತು. ಆದ್ದರಿಂದ ಅವನಿಗೆ ಸಾಕಷ್ಟು ಬುದ್ಧಿ ಹೇಳಿ ಫೋನ್​ ಕೊಡಿಸಿದ್ದೇನೆ. ಇದರಿಂದ ನನಗೆ ತುಂಬಾ ಸಂತೃಪ್ತಿ ಇದೆ’ ಎಂದಿದ್ದಾರೆ. ಇವರ ಈ ಕಾರ್ಯಕ್ಕೆ ಹಲವಾರು ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಹೊಡಿತಾಳೆ, ಬಡಿತಾಳೆ ನನ್​ ಹೆಂಡ್ತಿ: ಕುಡುಕಿಯಿಂದ ಪೊಲೀಸ್​ ರಕ್ಷಣೆ ಕೋರಿದ ಪತಿರಾಯ!

ದೈಹಿಕ ಸಂಬಂಧವೇ ಆಗದಿದ್ದರೆ ವಿಚ್ಛೇದನ ಬೇಗ ಸಿಗತ್ತಾ?

ಕರೊನಾ ಕಾರಣ, ಮೊಬೈಲ್​ನಲ್ಲೇ ಆಡ್ಕೋ ಮಗನೇ ಅಂದಳು ತಾಯಿ- ಮಗ ಮಾಡಿದ್ದೇನು ನೋಡಿ…

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:twenty + 17 =
Remember me
