ನವದೆಹಲಿ:ಕರೊನಾದಿಂದಾಗಿ ಬಹುತೇಕ ಎಲ್ಲಾ ಪರೀಕ್ಷೆಗಳೂ ರದ್ದುಗೊಂಡಿವೆ. ಇದರಿಂದ ವಿದ್ಯಾರ್ಥಿಗಳಿಗಂತೂ ಖುಷಿಯೋ ಖುಷಿ. ಆದರೆ ಕೆಲವು 10 ಮತ್ತು 12ನೇ ತರಗತಿಯ ವಿದ್ಯಾರ್ಥಿಗಳಿಗೆ ಅದರಲ್ಲಿಯೂ ವಿದ್ಯಾರ್ಥಿನಿಯರಿಗೆ ಬಹಳ ದುಃಖವಾಗಿದೆ. ಇದಕ್ಕೆ ಕಾರಣ ಪರೀಕ್ಷೆ ಕ್ಯಾನ್ಸಲ್‌ ಆಗಿದೆ ಅಥವಾ ಕ್ಯಾನ್ಸಲ್‌ ಮಾಡುವ ನಿರ್ಧಾರ ತೆಗೆದುಕೊಳ್ಳಬಹುದು ಎಂಬ ಕಾರಣಕ್ಕೆ ಅಲ್ಲ. ಬದಲಿಗೆ ಶಾಲೆ- ಕಾಲೇಜುಗಳಿಂದ ಅಂತಿಮವಾಗಿ ಸಿಗುವ ಫೇರ್‌ವೆಲ್‌ ಫಂಕ್ಷನ್‌ ಮಿಸ್‌ ಆಗಿ ಹೋಯಿತಲ್ಲ ಎಂಬ ದುಃಖ.
ಫೇರ್‌ವೆಲ್‌ನಲ್ಲಿ ಚೆಂದ ಚೆಂದದ ಸೀರೆ ಉಡುತ್ತಾ, ಸುಂದರವಾಗಿ ಡ್ರೆಸ್‌ ಮಾಡಿಕೊಂಡು ಶಾಲೆ-ಕಾಲೇಜಿಗೆ ಹೋಗುವುದು ಎಂದರೆ ಬಾಲಕಿಯರಿಗಂತೂ ಸಕತ್‌ ಖುಷಿ. ಅದಕ್ಕಾಗಿಯೇ ಈ ಕಾರ್ಯಕ್ರಮ ಮಿಸ್‌ ಆಗಿದೆ ಎಂಬ ಬೇಸರವಿದೆ. ಇದು ವಿದ್ಯಾರ್ಥಿನಿಯರ ಬೇಸರವಾದರೆ, ತಮ್ಮ ಇಷ್ಟದ ಹುಡುಗಿಯನ್ನು ಸೀರೆಯಲ್ಲಿ ನೋಡಬೇಕೆಂಬ ಹಂಬಲ ವಿದ್ಯಾರ್ಥಿನಿಯರಿಗೆ. ಅದು ಮಿಸ್‌ ಆಗಿ ಹೋಗಿದೆ ಎಂಬ ಬೇಸರ ಕೆಲವರಿಗೆ.
Government of India has decided to cancel the Class XII CBSE Board Exams. After extensive consultations, we have taken a decision that is student-friendly, one that safeguards the health as well as future of our youth.https://t.co/vzl6ahY1O2
— Narendra Modi (@narendramodi)June 1, 2021

ಆದ್ದರಿಂದ ಇದೇ ರೀತಿ ಬೇಸರ ಪಟ್ಟುಕೊಂಡಿರುವ ವಿದ್ಯಾರ್ಥಿಯೊಬ್ಬ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾನೆ. ದೇಶದಲ್ಲಿ ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿ (ಸಿಬಿಎಸ್‍ಇ) 12ನೇ ತರಗತಿ ಪರೀಕ್ಷೆಗಳನ್ನು ಕೇಂದ್ರ ಸರ್ಕಾರ ರದ್ದು ಮಾಡಿದೆ. ಈ ಕುರಿತು ಪ್ರಧಾನಿ ವಿಷಯವನ್ನು ತಿಳಿಸುತ್ತಿದ್ದಂತೆ, 12ನೇ ತರಗತಿ ವಿದ್ಯಾರ್ಥಿಯೊಬ್ಬ ಪರೀಕ್ಷೆ ಕ್ಯಾನ್ಸಲ್‌ ಆದ್ರೂ ಪರವಾಗಿಲ್ಲ. ತನ್ನ ಕ್ಲಾಸ್‌ಮೇಟ್‌ ನೇಹಾಳನ್ನು ಸೀರೆಯಲ್ಲಿ ನೋಡಬೇಕು ಎಂಬ ಆಸೆಯಿದೆ. ಅದಕ್ಕೆ ಫೇರ್‌ವೆಲ್‌ಗೆ ಅವಕಾಶ ಕೊಡಿ ಎಂದು ಮನವಿ ಮಾಡಿಕೊಂಡಿದ್ದಾನೆ!
ಕುಕಿ ಅಗರ್‌ವಾಲ್‌ ಎಂಬ ವಿದ್ಯಾರ್ಥಿಯ ಟ್ವಿಟರ್‌ ಪತ್ರ ಸಾಮಾಜಿಕ ಜಾಲತಾಣದಲ್ಲಿ ಸಕತ್‌ ವೈರಲ್‌ ಆಗಿದ್ದು, ನೋಡಿದರನ್ನು ನಗೆಗಡಲಿನಲ್ಲಿ ತೇಲಿಸುತ್ತಿದೆ.
ಪ್ರಪೋಸ್‌ ಮಾಡುವಾಗ ಲಂಡನ್‌ ನದಿಗೆ ಬಿದ್ದ ವಜ್ರದುಂಗರ- ಭಾರತದ ಈ ಜೋಡಿಗೆ ವಾಪಸ್‌ ಸಿಕ್ಕಿದ್ದೇ ರೋಚಕ

VIDEO: ಗಂಡ- ಹೆಂಡಿರ ಜಗಳ ಬಾಲ್ಕನಿ ಗ್ರಿಲ್‌ ಸಹಿತ ದೊಪ್ಪನೆ ಕೆಳಗೆ ಬೀಳುವತನಕ!

ಗಂಡ ಇರಲ್ಲ, ಮಜ ಮಾಡೋಣ ಎಂಬ ಪತ್ನಿಯ ಮೆಸೇಜ್‌ ನೋಡಿ ಗರಬಡಿದಂತಾಗಿದೆ, ಏನು ಮಾಡಲಿ ನಾನು?

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:11 − nine =
Remember me
