ವನಪರ್ತಿ (ಆಂಧ್ರಪ್ರದೇಶ):ಡ್ಯೂಟಿಯ ವೇಳೆ ವಿವಾಹಿತೆಯ ಮನೆಗೆ ಹೋಗಿ ಇಲ್ಲಸಲ್ಲದ ಕೆಲಸ ಮಾಡುತ್ತಿದ್ದ ವನಪರ್ತಿ ಗ್ರಾಮಾಂತರ ಪೊಲೀಸ್ ಠಾಣೆಯ ಸಬ್​​​ಇನ್ಸ್​​ಪೆಕ್ಟರ್​​​ ಶೇಖ್‌​​ ಶಾಪಿ ಇದೀಗ ಕೆಲಸ ಕಳೆದುಕೊಂಡಿದ್ದಾರೆ.
ಮಹಿಳೆಯ ಜತೆ ಅಕ್ರಮ ಸಂಬಂಧ ಹೊಂದಿದ್ದ ಶೇಖ್‌​​ ಶಾಪಿ, ಆಕೆಯ ಗಂಡ ಮನೆಯಲ್ಲಿ ಇಲ್ಲದ ವೇಳೆ ಅಲ್ಲಿಗೆ ಹೋಗುತ್ತಿದ್ದರು. ಇದನ್ನು ಅಕ್ಕಪಕ್ಕದ ಮನೆಯವರು ಗಮನಿಸುತ್ತಿದ್ದರು. ಕಳೆದ ವಾರ, ಇವರಿಬ್ಬರೂ ಏಕಾಂತದಲ್ಲಿ ಇದ್ದಾಗ ಯಾರೋ ಕದ್ದು ವಿಡಿಯೋ ಮಾಡಿ, ಇನ್ಸ್‌ಪೆಕ್ಟರ್‌ನನ್ನು ಥಳಿಸಿದ್ದಾರೆ, ಇದನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸ್ ಇಲಾಖೆ ಅವರನ್ನು ಅಮಾನತು ಮಾಡಿದೆ.
ಪೆಬ್ಬೇರ್ ಎಂಬ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಈ ಮಹಿಳೆಯ ಸಂಪರ್ಕವಾಗಿತ್ತು. ನಂತರ ಇಬ್ಬರೂ ಫೋನ್‌ನಲ್ಲಿ ಮಾತುಕತೆ ನಡೆಸಿದ್ದರು. ಈ ಮಾತುಕತೆ ಸ್ನೇಹಕ್ಕೆ ತಿರುಗಿ ದೈಹಿಕ ಸಂಬಂಧದವರೆಗೂ ಮುಂದುವರೆದಿತ್ತು. ಮಹಿಳೆಯ ಗಂಡ ಕೆಲಸಕ್ಕಾಗಿ ಹೋದ ವೇಳೆ ಇವರನ್ನು ಕರೆಯುತ್ತಿದ್ದಳು. ಹೀಗೆ ಇವರು ತಮ್ಮ ಕೆಲಸ ನಿರಾತಂಕವಾಗಿ ಮುಂದುವರೆಸಿದ್ದರು.
ಅಕ್ಕಪಕ್ಕದ ಮನೆಯವರಿಂದಾಗಿ ಈ ವಿಷಯ ಗಂಡನಿಗೆ ತಲುಪಿತ್ತು. ತನಗೆ ತುರ್ತು ಕೆಲಸ ಇರುವ ಕಾರಣ ಬೇರೆ ಊರಿಗೆ ಹೋಗುವುದಾಗಿ ಗಂಡ ಹೇಳಿದ್ದ. ಸಿಕ್ಕಿದ್ದೇ ಛಾನ್ಸ್‌ ಎಂದುಕೊಂಡ ಪತ್ನಿ, ಸಬ್‌ ಇನ್ಸ್‌ಪೆಕ್ಟರ್‌ನನ್ನು ಕರೆದಿದ್ದಳು. ಕೂಡಲೇ ಗಂಡ ಮನೆಗೆ ಬಂದಾಗ ಇಬ್ಬರೂ ವೇಳೆ ರೆಡ್​​ಹ್ಯಾಂಡ್​​ ಆಗಿ ಸಿಕ್ಕಿಬಿದ್ದಿದ್ದಾರೆ.
ಅಧಿಕಾರಿಗಳ ಎಡವಟ್ಟು: ರಾಜ್ಯಪಾಲರು ವಾಪಸ್‌ ಹೋದಾಗ ಧುಮ್ಮಿಕ್ಕಿ ಹರಿಯಿತು ಜೋಗದ ಜಲಪಾತ!

ಬಾಡಿಗೆ ಮನೆ ಕೇಳಿ ಬಲೆ ಬೀಸಿದ್ದ ಎಸಿಬಿ ಅಧಿಕಾರಿಗಳು: ಶಿವಮೊಗ್ಗದ ಕೃಷಿ ಅಧಿಕಾರಿಯ ಬೇಟೆಯಾಡಿದ್ದೇ ರೋಚಕ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:2 × 2 =
Remember me
