ಪಟ್ನಾ:ಪ್ರೀತಿ, ಪ್ರೇಮ ಅನ್ನೋದೇ ವಿಚಿತ್ರ. ಯಾರಿಗೆ ಯಾರ ಮೇಲೆ ಅದ್ಹೇಗೆ ಲವ್​ ಆಗುತ್ತದೆಯೋ ಕೆಲವೊಮ್ಮೆ ಇದು ವಿಚಿತ್ರ ಎನಿಸುತ್ತದೆ. ಇಂಥದ್ದೇ ಒಂದು ವಿಚಿತ್ರ ಸನ್ನಿವೇಶಕ್ಕೆ ಸಿಲುಕಿದ ವ್ಯಕ್ತಿಯೊಬ್ಬ ಪತ್ನಿಯಿಂದಾಗಿ ತನ್ನ ಜೀವವನ್ನೇ ತೆಗೆದುಕೊಂಡು ಬಿಟ್ಟಿದ್ದಾನೆ!
ಪತ್ನಿ ಪಕ್ಕದ ಮನೆಯ ಯುವಕನನ್ನು ಮದುವೆಯಾಗಿರುವುದಕ್ಕೆ ನೊಂದುಹೋದ ಹೇಮಂತ್ ಗುಪ್ತಾ ಎಂಬುವವರು ಫೇಸ್‍ಬುಕ್ ಲೈವ್​ನಲ್ಲಿ ವಿಷಯವನ್ನೆಲ್ಲಾ ತಿಳಿಸಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇಂಥದ್ದೊಂದು ದುರ್ಘಟನೆ ನಡೆದಿರುವುದು ಬಿಹಾರದ ಆರಾರಿಯಾ ಕ್ಷೇತ್ರದ ಸಿಮರ್ಹದಲ್ಲಿ. ಹೇಮಂತ್ ದೆಹಲಿಯಲ್ಲಿ ವಾಸವಾಗಿದ್ದರು. ಪತ್ನಿ ಮುನ್ನಿದೇವಿ ಸಿಮರ್ಹದಲ್ಲಿ ನೆಲೆಸಿದ್ದರು. ಈ ಸಂದರ್ಭದಲ್ಲಿ ಪಕ್ಕದ ಮನೆಯ ರಾಕೇಶ್​ ಎಂಬುವವನ ಜತೆ ಮದುವೆಯಾಗಿದೆ.
ಮದುವೆ ವಿಷಯ ತಿಳಿದು ಗ್ರಾಮಕ್ಕೆ ಬಂದಿದ್ದ ಹೇಮಂತ್ ಪತ್ನಿಯನ್ನು ವಾಪಸ್ ಕರೆತರಲು ಬಹಳ ಪ್ರಯತ್ನಿಸಿದ್ದರು. ಆದರೆ ಪತ್ನಿ ಹಿಂದಿರುಗಿರಲಿಲ್ಲ. ಇದರಿಂದ ನೊಂದುಹೋದ ಹೇಮಂತ್​ ಅವರು, ವಿಷ ಸೇವನೆ ಮಾಡಿಕೊಂಡಿದ್ದಾರೆ. ರಾಕೇಶ್ ಎಂಬಾತ ನನ್ನ ಪತ್ನಿಯನ್ನು ಬಲವಂತವಾಗಿ ನ್ಯಾಯಾಲಯದಲ್ಲಿ ಮದುವೆ ಆಗಿದ್ದಾನೆ. ಇದನ್ನು ನಾನು ನೋಡಲಾರೆ. ಸಾಯುವುದೊಂದೇ ನನಗಿರುವ ಮಾರ್ಗ ಎಂದು ಫೇಸ್​ಬುಕ್​ ಲೈವ್​ನಲ್ಲಿ ಹೇಮಂತ್​ ಹೇಳಿದ್ದಾರೆ.
ಇದನ್ನೂ ಓದಿ:ಮದ್ಯದ ದೊರೆಯ ವಿರುದ್ಧ ಲಂಡನ್​ನಲ್ಲಿ ನಡೀತಿದೆ ರಹಸ್ಯ ಕಾರ್ಯಾಚರಣೆ: ಸುಪ್ರೀಂಗೆ ಕೇಂದ್ರದ ಮಾಹಿತಿ
ನನ್ನ ಸಾವಿಗೆ ನ್ಯಾಯ ಸಿಗಬೇಕು, ನಾನು ವಿಷ ಸೇವಿಸುತ್ತಿದ್ದು, ಸತ್ತ ಮೇಲಾದರೂ ನ್ಯಾಯ ಸಿಗುತ್ತದೆ ಎಂದುಕೊಂಡಿದ್ದೇನೆ ಎಂದಿದ್ದಾರೆ.
ವಿಡಿಯೋ ನೋಡಿದ ಹಲವರು ಗಾಬರಿಯಿಂದ ಮನೆಗೆ ಬಂದಿದ್ದಾರೆ. ಕೆಲವರು ಪೊಲೀಸರಿಗೂ ಮಾಹಿತಿ ನೀಡಿದ್ದಾರೆ. ಬಾಗಿಲು ಒಡೆದು ನೋಡಿದಾಗ ಹೇಮಂತ್ ಪ್ರಜ್ಞೆ ಕಳೆದುಕೊಂಡ ಸ್ಥಿತಿಯಲ್ಲಿ ನೆಲದ ಮೇಲೆ ಬಿದ್ದಿದ್ದರು. ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಅದಾಗಲೇ ಹೇಮಂತ್​ ಮೃತಪಟ್ಟಿದ್ದರು. ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ.
ಪಾಕ್​-ಚೀನಾ ಏಕಕಾಲದಲ್ಲಿ ದಾಳಿ ಮಾಡಿದರೂ ಎದುರಿಸಲು ನಾವು ಸಿದ್ಧ- ಭಾರತೀಯ ಸೇನೆ

ನೋಟು ಮುಟ್ಟುವಿರಾ? ಹುಷಾರ್​! ಹುಷಾರ್​! ಆರ್​ಬಿಐನಿಂದ ಬಂದಿದೆ ಆತಂಕದ ವರದಿ

ಚುನಾವಣಾಧಿಕಾರಿಯಾಗಿ ತೃತೀಯ ಲಿಂಗಿ: ಇತಿಹಾಸ ಸೃಷ್ಟಿಸಿದ ಬಿಹಾರ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:twelve + ten =
Remember me
