ಮುಂಬೈ:ಆಯಸ್ಸು ಗಟ್ಟಿಯಿದ್ದರೆ ಜಪ್ಪಯ್ಯ ಎಂದರೂ ಸಾವು ಬರುವುದಿಲ್ಲ ಎನ್ನುವುದಕ್ಕೆ ಇದಾಗಲೇ ಹಲವಾರು ಘಟನೆಗಳು ಸಂಭವಿಸಿಬಿಟ್ಟಿವೆ.
ಆದರೆ ಇಲ್ಲೊಂದು ಪ್ರಕರಣ ಮಾತ್ರ ತೀವ್ರ ಕುತೂಹಲ ತರುವಂಥದ್ದಾಗಿದೆ, ಮಾತ್ರವಲ್ಲದೇ ಸೈಬರ್‌ ಪೊಲೀಸರ ಕರ್ತವ್ಯ ಪ್ರಜ್ಞೆಯನ್ನು ಪ್ರಶಂಸಿಸುವಂಥದ್ದಾಗಿದೆ.
ಇದು ಪತ್ನಿ ಜತೆ ಜಗಳವಾಡಿ ಆತ್ಮಹತ್ಯೆಯ ಬಗ್ಗೆ ಯೋಚಿಸಿದ್ದ ವ್ಯಕ್ತಿಯೊಬ್ಬನಿಗೆ ಸಂಬಂಧಿಸಿದ ಘಟನೆ.
ಇದು ಶುರುವಾಗುವುದು ಕಳೆದ ಶನಿವಾರದಿಂದ. ದೆಹಲಿಯ ಮೊಬೈಲ್‌ ನಂಬರ್‌ ಇರುವ ಮಹಿಳೆಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ಯೋಚನೆ ಇರುವಂಥ ಪೋಸ್ಟ್‌ಗಳನ್ನು ಹಾಕಿರುವುದನ್ನು ಐರ್ಲೆಂಡ್‌ನಲ್ಲಿರುವ ಫೇಸ್‌ಬುಕ್‌ನ ಅಧಿಕಾರಿಯೊಬ್ಬರು ಗಮನಿಸಿದ್ದಾರೆ. ಅವರು ಕೂಡಲೇ ದೆಹಲಿಯ ದೆಹಲಿ ಪೊಲೀಸ್‌ ಸೈಬರ್‌ ಸೆಲ್‌ ಉಪ ಪೊಲೀಸ್‌ ಆಯುಕ್ತ ನ್ಯೇಷ್‌ ರಾಯ್‌ ಅವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಜತೆಗೆ, ಮಹಿಳೆಯ ಫೇಸ್‌ಬುಕ್‌ಖಾತೆ ವಿವರ ಹಾಗೂ ಮೊಬೈಲ್‌ ಸಂಖ್ಯೆಯನ್ನು ಮೇಲ್‌ ಮಾಡಿದ್ದಾರೆ.
ಅದರ ಜಾಡು ಹಿಡಿದು ಹೊರಟ ಪೊಲೀಸರು, ಮಹಿಳೆಯ ವಿಳಾಸ ಪತ್ತೆ ಹಚ್ಚುವಲ್ಲಿ ಯಶಸ್ವಿಯಾದರು. ಸ್ಥಳೀಯ ಪೊಲೀಸರ ನೆರವಿನೊಂದಿಗೆ ಮಹಿಳೆಯ ಮನೆಗೂ ಹೋದರು.
ಮೊಬೈಲ್‌ ನಂಬರ್‌ ಬಗ್ಗೆ ಮಹಿಳೆಗೆ ಕೇಳುತ್ತಿದ್ದಂತೆಯೇ, ಆಕೆ ಇದು ನನ್ನ ಹೆಸರಿನಲ್ಲಿ ಇರುವ ನಂಬರ್‌ ನಿಜ. ಆದರೆ ಅದು ನನ್ನ ಗಂಡ ರಾಜೇಶ್‌ ಬಳಿ ಇದೆ. ಅವರೇ ಇದರ ಖಾತೆ ನಿರ್ವಹಿಸುತ್ತಿದ್ದಾರೆ ಎಂದರು. ಗಂಡನ ಬಗ್ಗೆ ಕೇಳಿದಾಗ ಮಹಿಳೆ ಅವರ ವಿಳಾಸ ನನಗೆ ಗೊತ್ತಿಲ್ಲ. ನನ್ನ ಜತೆ ಜಗಳವಾಡಿಕೊಂಡು ಮುಂಬೈಗೆ ಹೋಗಿದ್ದಾರೆ. ಅಲ್ಲಿ ಬಾಣಸಿಗನಾಗಿ ಹೋಟೆಲ್‌ನಲ್ಲಿ ದುಡಿಯುತ್ತಿದ್ದಾರೆ ಎಂದಷ್ಟೇ ಹೇಳಿದಳು.
ಇದನ್ನೂ ಓದಿ:ಇಲ್ಲಿ ಹಸುವಲ್ಲ, ಸೆಗಣಿಯ ಮೇಲೆ ಕಳ್ಳರ ಕಣ್ಣು- 100 ಕೆ.ಜಿ ದಿಢೀರ್‌ ನಾಪತ್ತೆ
ಹಾಗಿದ್ದರೆ ಆತ್ಮಹತ್ಯೆಯ ಯೋಚನೆ ಮಾಡಿಕೊಂಡಿರುವ ವ್ಯಕ್ತಿ ರಾಜೇಶ್‌ ಎನ್ನುವುದು ಪೊಲೀಸರಿಗೆ ತಿಳಿಯಿತು. ಆದರೆ ವಿಳಾಸ ಇರಲಿಲ್ಲ.
ನಂತರ ಸೈಬರ್‌ ಸೆಲ್‌ನ ಪೊಲೀಸರ ನೆರವು ಪಡೆದು ರಾಜೇಶ್‌ ವಿಳಾಸ ಪತ್ತೆ ಹಚ್ಚಲು ಶುರು ಮಾಡಿದರು. ಅದರೆ ರಾಜೇಶ್‌ ಫೋನ್‌ ಆಫ್‌ ಮಾಡಿದ್ದರು. ಹೀಗಿದ್ದರೂ ನಿರಂತರವಾಗಿ ಆತನನ್ನು ಸಂಪರ್ಕಿಸಲು ಪೊಲೀಸರು ಪ್ರಯತ್ನಿಸುತ್ತಿದ್ದರು. ಅಂತೂ ಒಂದು ಬಾರಿ ಆತ ಫೋನ್‌ ಆನ್‌ ಮಾಡಿದ ಸಂದರ್ಭದಲ್ಲಿ ಆತನ ಜತೆ ಸಂಪರ್ಕ ಸಾಧಿಸಿದರು.
ಆತನ ಮನೆಯ ವಿಳಾಸ ಪಡೆದು ಹೋದ ಅಧಿಕಾರಿಗಳಿಗೆ ತಮ್ಮ ಊಹೆ ನಿಜ ಎನಿಸಿತು. ರಾಜೇಶ್‌ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರು. ಅವರಿಗೆ ನಿರಂತರ ಕೌನ್ಸಲಿಂಗ್‌ ಮಾಡಿ ಖಿನ್ನತೆಯಿಂದ ಹೊರಕ್ಕೆ ಬರುವಂತೆ ಮಾಡಿದ್ದಾರೆ.
ದಫನ್‌ ಆಗಿದ್ದವ ರಾತ್ರಿ ಹೆಂಡತಿಗೆ ಪ್ರತ್ಯಕ್ಷನಾಗಿ ನಾನೇ ನಿನ್ನ ಗಂಡ ಎಂದ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:1 + four =
Remember me
