ಕಠ್ಮಂಡು:ನೇಪಾಳದ ಪಾರ್ಟಿಯೊಂದರಲ್ಲಿ ಯುವತಿಯೊಬ್ಬಳ ಜತೆ ಕಾಂಗ್ರೆಸ್ ನಾಯಕ, ಸಂಸದ ರಾಹುಲ್​ ಗಾಂಧಿ ಕಾಣಿಸಿಕೊಂಡಿದ್ದು ಜಾಲತಾಣದಲ್ಲಿ ಭಾರಿ ಅಲ್ಲೋಲ- ಕಲ್ಲೋಲವನ್ನೇ ಸೃಷ್ಟಿಸಿದೆ. ಪಾರ್ಟಿಯಲ್ಲಿ ಇರುವ ಮದ್ಯದ ಬಾಟಲಿಗಳ ಸಮೀಪ ಯಾವುದೋ ಪಾನೀಯವನ್ನು ಹೀರುತ್ತಿರುವ ಈ ಯುವತಿಯ ಪಕ್ಕದಲ್ಲಿ ಇರುವ ರಾಹುಲ್​ ವಿಡಿಯೋ ಭಾರಿ ವೈರಲ್​ ಆಗಿದ್ದು, ಇದಕ್ಕೆ ಥಹರೇವಾರಿ ಕಮೆಂಟ್​ಗಳು ಬರುತ್ತಿವೆ.
ಭಾರತದಲ್ಲಿ ಕಾಂಗ್ರೆಸ್​ ತನ್ನ ಅಸ್ತಿತ್ವಕ್ಕಾಗಿ ಹೆಣಗಾಡುತ್ತಿರುವ ಈ ಸಂದರ್ಭದಲ್ಲಿ ಅದರ ಪ್ರಧಾನಿ ಅಭ್ಯರ್ಥಿ ರಾಹುಲ್​ ಗಾಂಧಿ ನೇಪಾಳದಲ್ಲಿ ನೈಟ್​ ಕ್ಲಬ್​, ಪಬ್​ ಎಂದೆಲ್ಲಾ ಸುತ್ತಾಡುತ್ತಿದ್ದಾರೆ ಎಂಬ ಕಮೆಂಟ್​ಗಳೇ ಹೆಚ್ಚಾಗಿ ಬರುತ್ತಿದ್ದು, ಕೆಲ ಬಿಜೆಪಿ ನಾಯಕರು ಕೂಡ ಈ ಬಗ್ಗೆ ಮಾತನಾಡಿದ್ದಾರೆ. ಇಷ್ಟೇ ಅಲ್ಲದೇ ಇದೇ ವಿಡಿಯೋ ಬಿಜೆಪಿ ಮತ್ತು ಕಾಂಗ್ರೆಸ್​ ನಡುವೆ ಜಟಾಪಟಿಗೂ ಕಾರಣವಾಗಿದೆ.
ಈ ಬಗ್ಗೆ ನಿನ್ನೆಯೇ ಕಾಂಗ್ರೆಸ್​ ಸ್ಪಷ್ಟನೆ ಕೂಡ ನೀಡಿತ್ತು. ತಮ್ಮ ಸ್ನೇಹಿತೆಯ ಮದುವೆಗೆಂದು ರಾಹುಲ್​ ಗಾಂಧಿ ನೇಪಾಳಕ್ಕೆ ಹೋಗಿದ್ದಾರೆ ಎಂದು ಹೇಳಲಾಗಿತ್ತು. ಈ ವಿಡಿಯೋ ಕುರಿತು ಮಾತನಾಡಿದವರನ್ನು ತರಾಟೆಗೆ ತೆಗೆದುಕೊಂಡಿದ್ದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೆವಾಲಾ, ರಾಹುಲ್​ ಗಾಂಧಿಯವರು ತಮ್ಮ ಸ್ನೇಹಿತೆಯ ಮದುವೆಗೆ ಕಠ್ಮಂಡುವಿಗೆ ಹೋಗಿದ್ದಾರೆ. ಅದರಲ್ಲಿ ತಪ್ಪೇನಿದೆ? ಇದೇನು ನೈಟ್​ಕ್ಲಬ್​ ಅಲ್ಲ. ಮದುವೆ ಪಾರ್ಟಿಯಲ್ಲಿ ಭಾಗವಹಿಸುವುದು ಅಪರಾಧ ಎಂದು ಎಲ್ಲಿಯಾದರೂ ಉಲ್ಲೇಖವಾಗಿದೆಯಾ ಎಂದು ಪ್ರಶ್ನಿಸಿದ್ದರು.
ಅಸಲಿಗೆ ರಾಹುಲ್ ​ಗಾಂಧಿ ನೇಪಾಳಕ್ಕೆ ಹೋಗಿದ್ದು ತಮ್ಮ ನೇಪಾಳಿ ಗೆಳತಿ ಸುಮ್ನಿಮಾ ಉದಾಸ್ ಅವರ ಮದುವೆಗೆ. ಮ್ಯಾನ್ಮಾರ್‌ನಲ್ಲಿ ನೇಪಾಳದ ರಾಯಭಾರಿಯಾಗಿದ್ದ ಭೀಮ್ ಉದಾಸ್ ಅವರ ಪುತ್ರಿ ಸುಮ್ನಿಮಾ ಉದಾಸ್. ಪತ್ರಕರ್ತೆಯಾಗಿರುವ ಸುಮ್ನಿಮಾ ಅವರು ಅಮೆರಿಕದ ಸಿಎನ್​ಎನ್​ ಇಂಟರ್‌ನ್ಯಾಷ್​ನಲ್‌ಗೆ ದೆಹಲಿ ವರದಿಗಾರರಾಗಿದ್ದಾರೆ.
ಸಿಎಎ ವಿರುದ್ಧ ನಡೆಯುತ್ತಿದ್ದ ಪ್ರತಿಭಟನೆಗೆ ಭಾರಿ ಬೆಂಬಲ ಸೂಚಿಸಿದ್ದರು ಈ ಪತ್ರಕರ್ತೆ. ಈಕೆ ಇವರು ಲುಂಬಿನಿ ಮ್ಯೂಸಿಯಂನ ಕಾರ್ಯನಿರ್ವಾಹಕ ನಿರ್ದೇಶಕ ಮತ್ತು ಸಂಸ್ಥಾಪಕರೂ ಹೌದು. ದೆಹಲಿ ಗ್ಯಾಂಗ್​ರೇಪ್​ ಪ್ರಕರಣ, ಮಲೇಷ್ಯಾ ವಿಮಾನ ಅಪಘಾತ ಮತ್ತು ಕಾಮನ್‌ವೆಲ್ತ್ ಭ್ರಷ್ಟಾಚಾರ ಹಗರಣದ ಬಗೆಗೂ ವಿಶೇಷ ಲೇಖನಗಳನ್ನು ಬರೆದು ಖ್ಯಾತಿಗಳಿಸಿದ್ದಾರೆ ಇವರು. ಮಾತ್ರವಲ್ಲದೇ ಭಾರತದ ಪ್ರಮುಖ ರಾಜಕೀಯ ಬೆಳವಣಿಗೆಗಳ ಜೊತೆಗೆ ಆರ್ಥಿಕ, ಸಾಮಾಜಿಕ ಮತ್ತು ಪರಿಸರ ಸಮಸ್ಯೆಗಳ ಕುರಿತು ಅನೇಕ ವಿಶೇಷ ಲೇಖನಗಳನ್ನು ಬರೆದಿದ್ದಾರೆ.
ಮಹಿಳಾ ಸಬಲೀಕರಣ ಪತ್ರಿಕೋದ್ಯಮ ಪ್ರಶಸ್ತಿಗಳ ಭಾಗವಾಗಿ 2014ರಲ್ಲಿ ಸುಮ್ನಿಮಾ ‘ವರ್ಷದ ಪತ್ರಕರ್ತೆ’ ಪ್ರಶಸ್ತಿ ಪಡೆದಿದ್ದಾರೆ. ಗ್ರಾಮೀಣ ಭಾರತದಲ್ಲಿ ಗುಲಾಮಗಿರಿಯ ಬಗ್ಗೆ ವರದಿ ಮಾಡಿದ್ದಕ್ಕಾಗಿ 2012ರಲ್ಲಿ ಪ್ರತಿಷ್ಠಿತ ಸಿನಿ ಗೋಲ್ಡನ್ ಈಗಲ್ ಪ್ರಶಸ್ತಿ ಗೆದ್ದ ತಂಡದ ಭಾಗವಾಗಿದ್ದರು. ಇವರ ಮದುವೆಗೆ ಹೋಗಿದ್ದ ರಾಹುಲ್​ ಗಾಂಧಿ, ಯುವತಿಯೊಬ್ಬರ ಜತೆ ಕಾಣಿಸಿಕೊಂಡಿರೋ ವಿಡಿಯೋ ಹಲವರ ಬಾಯಿಗೆ ಆಹಾರವಾಗಿದೆ. ರಾಹುಲ್​ ಪಕ್ಕ ಇರುವ ಯುವತಿ ನೇಪಾಳದಲ್ಲಿರುವ ಚೀನಾದ ರಾಯಭಾರಿ ಹೌ ಯಾಂಕಿ ಎಂದು ವೈರಲ್​ ಆಗಿತ್ತು. ಆದರೆ ಅಸಲಿಗೆ ಈಕೆ ಸುಮ್ನಿಮಾ ಉದಾಸ್ ಅವರ ಸ್ನೇಹಿತೆ ಎನ್ನಲಾಗಿದೆ.
ಗೋವಾದಲ್ಲಿ ಯಶ್​: ರಾಜಕೀಯಕ್ಕೆ ಎಂಟ್ರಿ ಕೊಡ್ತಾರಾ ರಾಕಿಂಗ್​ ಸ್ಟಾರ್​? ಜ್ಯೋತಿಷಿ ಭವಿಷ್ಯ ನಿಜವಾಗುತ್ತಾ?
ಕೋರ್ಟ್​ ಕಟಕಟೆಯಲ್ಲಿ ನೆಹರೂ, ಎಡ್ವಿನಾ ಲವ್​ ಸ್ಟೋರಿ: ಇಬ್ಬರ ನಡುವಿನ ಪತ್ರ ಬಹಿರಂಗಕ್ಕೆ ನಕಾರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × five =
Remember me
