ನವದೆಹಲಿ:ನಟಿ ಸನ್ನಿ ಲಿಯೋನ್‌ ಎಂದಾಕ್ಷಣ ಎಲ್ಲರ ಕಣ್ಣಮುಂದೆ ಬರುವುದು ಇವರೊಬ್ಬ ನೀಲಿತಾರೆ ಎಂದು. ಆದರೆ ಇದರ ಹೊರತಾಗಿಯೂ ಅವರು ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿರುವುದಕ್ಕೆ ಲೆಕ್ಕವೇ ಇಲ್ಲ. ಇದಾಗಲೇ ಹಲವಾರು ಸಂದರ್ಭಗಳಲ್ಲಿ ಬಡ ಜನರಿಗೆ, ಅಗತ್ಯ ಇರುವವರಿಗೆ ಸೇವೆ ಮಾಡುವ ಮೂಲಕ ಸಮಾಜ ಸೇವಕಿ ಎನಿಸಿಕೊಂಡಿದ್ದಾರೆ.
ಇದೀಗ ಕರೊಆನಿಂದಾಗಿ ಅನೇಕ ವಲಸೆ ಕಾರ್ಮಿಕರು ತುತ್ತು ಅನ್ನಕ್ಕಾಗಿ ಪರದಾಡುವ ಸ್ಥಿತಿ ಬಂದಿದೆ. ಅಂಥವರಿಗೆ ನೆರವಾಗುತ್ತಿದ್ದಾರೆ ಸನ್ನಿ. ‘ಪೇಟಾ’ದ (People for the Ethical Treatment of Animals) ಜತೆ ಕೈ ಜೋಡಿಸಿರುವ ಸನ್ನಿ, ಸುಮಾರು 10 ಸಾವಿರ ಮಂದಿಗೆ ಅನ್ನ ನೀಡುವ ಕೆಲಸ ಮಾಡಿದ್ದಾರೆ. ‌
ಸದ್ಯ ನಾವು ಬಿಕ್ಕಟ್ಟನ್ನು ಎದುರಿಸುತ್ತಿದ್ದೇವೆ. ಇಂಥ ಸಂದರ್ಭದಲ್ಲಿ ಹಲವಾರು ಮಂದಿ ತುತ್ತು ಅನ್ನಕ್ಕೂ ಪರದಾಡುವಂತಾಗಿದೆ. ಅಂಥವರಿಗೆ ನಮ್ಮಿಂದಾಗುವ ಸಹಾಯ ಮಾಡೋಣ ಎಂದಿದ್ದಾರೆ. ತಮಗೆ ಇಂಥವರ ಸಹಾಯ ಮಾಡಲು ಸಂತೋಷವಾಗುತ್ತದೆ ಎಂದು ಅವರು ಹೇಳಿದ್ದಾರೆ.
ಅಂದಹಾಗೆ ಸನ್ನಿ ಲಿಯೋನ್‌, ಕಳೆದ ವರ್ಷದ ಲಾಕ್ ಡೌನ್ ಸಂದರ್ಭದಲ್ಲಿ ಅನೇಕ ಮಂದಿ ಕಾರ್ಮಿಕರಿಗೆ ಆಹಾರ ನೀಡಿದ್ದಾರೆ.
ಕಡಿಮೆ ಬಡ್ಡಿ ಹೆಸರಲ್ಲಿ 7 ಕೋಟಿ ರೂ. ಗುಳುಂ: ಈ ‘ಗೋಲ್ಡ್‌ ಮ್ಯಾನ್‌’ಗಿದ್ದಾರೆ ಸಿಕ್ಕಾಪಟ್ಟೆ ಫಾಲೋವರ್ಸ್‌!

ನಿನ್ನ ಮಗುವನ್ನು ಗಂಡ ತನ್ನದೇ ಎಂದುಕೊಂಡಿದ್ದಾನೆ, ನನ್ನಿಂದ ದೂರ ಹೋಗು ಅಂತಿದ್ದಾಳೆ- ದಿಕ್ಕೇ ತೋಚದಾಗಿದೆ

ಶ್ವಾನಗಳ ಮಾಲೀಕರೇ ಹುಷಾರ್‌- ಬೀದಿಗೆ ಹೋದ ನಿಮ್ಮ ನಾಯಿಯೂ ಆಗಬಹುದು ಅರೆಸ್ಟ್‌!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − 2 =
Remember me
