ಮುಂಬೈ:ಸದಾ ಒಂದಿಲ್ಲೊಂದು ವಿಡಿಯೋವನ್ನು ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಳ್ಳುವ ಬಾಲಿವುಡ್​ ನಟಿ ಸನ್ನಿ ಲಿಯೋನ್​ ಇದೀಗ ಇನ್ನೊಂದು ವಿಡಿಯೋ ಶೇರ್​ ಮಾಡಿಕೊಂಡಿದ್ದಾರೆ. ಇದರಲ್ಲಿ ಸನ್ನಿ ಲಿಯೋನ್​ ಮತ್ತು ಪತಿ ಡೇನಿಯಲ್​ ಅವರು ಹಾರಿ ಹಾರಿ ಏನನ್ನೋ ಹಿಡಿಯಲು ಪ್ರಯತ್ನಿಸುವುದನ್ನು ನೋಡಬೇಕು.
ಅಸಲಿಗೆ ಈ ದಂಪತಿ ಹಿಡಿಯುತ್ತಿರುವುದು ಜಿರಳೆಯನ್ನು. ತಮ್ಮ ಮನೆಯಲ್ಲಿ ಜಿರಳೆ ಕಾಟ. ಆದ್ದರಿಂದ ಇದನ್ನು ಹೊರಕ್ಕೆ ಹಾಕಲು ತಾವು ಪ್ರಯತ್ನಿಸುತ್ತಿರುವುದಾಗಿ ಹೇಳಿದ್ದಾರೆ. ಇದಕ್ಕೆ ಅವರು, ವುಮೆನ್ vs ವೈಲ್ಡ್ ಎಂದು ಶೀರ್ಷಿಕೆ ನೀಡಿದ್ದಾರೆ.
ಇದೇ ವೇಳೆ ಜಿರಳೆಯ ಚುರುಕುತನವನ್ನೂ ಸನ್ನಿ ಹಾಡಿ ಹೊಗಳಿದ್ದಾರೆ. ಅದು ನಮಗಿಂತ ಬಹಳ ಚುರುಕಾಗಿತ್ತು. ಬಹುಶಃ ಅದಕ್ಕೇ ಜಿರಳೆ ನಮಗೆ ಸಿಗಲಿಲ್ಲ ಎಂದಿದ್ದಾರೆ. ಈ ವೀಡಿಯೊ ಈಗ ಭಾರಿ ವೈರಲ್ ಆಗಿದೆ. ಹಲವಾರು ಕಮೆಂಟಿಗರು ಹಲವಾರು ತೆರನಾಗಿ ಇದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
ಸನ್ನಿಯವರಿಂದ ಸಾಧ್ಯವಾಗದ ಈ ಕೆಲಸಕ್ಕೆ ಅವರ ಪತಿ ಡೇನಿಯಲ್ ಸಹಾಯ ಮಾಡಿದ್ದಾರೆ. ಆದರೆ ಜಿರಲೆ ಮಾತ್ರ ತಪ್ಪಿಸಿಕೊಂಡು ಹೋಗಿದೆ.


A post shared by Sunny Leone (@sunnyleone)

VIDEO: ಮುಖ್ಯಮಂತ್ರಿ ಬೊಮ್ಮಾಯಿ ಕಾರಿನಿಂದ ಇಳಿಯುತ್ತಿದ್ದಂತೆಯೇ ಅಜ್ಜಿಯ ದೌಡು

ಬೇಡ ಅಂದ್ರೂ ರಾಜ್​ ಕುಂದ್ರಾ ಕಿಸ್​ ಮಾಡಿ, ಹೇಗೇಗೋ ವರ್ತಿಸಿದ್ರು ಅಂದ ನಟಿಗೆ ಪೊಲೀಸರಿಂದ ಬುಲಾವ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − fifteen =
Remember me
