ಕೋಲ್ಕತಾ:ಪದವಿ ಕಾಲೇಜಿನ ಪಟ್ಟಿಯಲ್ಲಿ ಖ್ಯಾತ ಬಾಲಿವುಡ್‌ ತಾರೆ ಸನ್ನಿ ಲಿಯೋನ್‌ ಹೆಸರು ಕಾಣಿಸಿಕೊಂಡು ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ದಂಗಾದ ಘಟನೆ ಕೋಲ್ಕತಾದಲ್ಲಿ ನಡೆದಿದೆ.
ಕೋಲ್ಕತಾ ಕಾಲೇಜಿನ ಪದವಿಪೂರ್ವ ತರಗತಿ ಮುಗಿಸಿ ಮೊದಲ ವರ್ಷದ ಬಿಎಗೆ (ಆನರ್ಸ್‌) ಅರ್ಹತೆ ಪಡೆದಿರುವ ವಿದ್ಯಾರ್ಥಿಗಳ ಪಟ್ಟಿಯಲ್ಲಿ ನಂ.1 ಸ್ಥಾನದಲ್ಲಿ ಸನ್ನಿ ಲಿಯೋನ್‌ ಹೆಸರು ಇತ್ತು.
ಕೋಲ್ಕತಾದ ಅಶುತೋಷ್ ಕಾಲೇಜಿನಲ್ಲಿ ಇಂಗ್ಲಿಷ್‌ನಲ್ಲಿ ಬಿಎ (ಆನರ್ಸ್) ಪ್ರವೇಶಕ್ಕಾಗಿ ಕಾಲೇಜು ತನ್ನ ವೆಬ್‌ಸೈಟ್‌ನಲ್ಲಿ ಉಲ್ಲೇಖಿಸಿದ್ದ ಪಟ್ಟಿಯಲ್ಲಿ ಇವರ ಹೆಸರು ಮೊದಲಿಗೆ ಇದ್ದುದನ್ನು ಕಂಡ ವಿದ್ಯಾರ್ಥಿಗಳೂ ದಂಗಾಗಿ ಹೋಗಿದ್ದರು.
ಇದನ್ನೂ ಓದಿ:ರಷ್ಯಾದಲ್ಲಿದೆ ವಿಶ್ವದ ಭಯಾನಕ ಅಣುಬಾಂಬ್‌: ಸ್ಫೋಟದ ಭೀಕರ ದೃಶ್ಯ ಇಲ್ಲಿದೆ…
ಮಾತ್ರವಲ್ಲದೇ, ಟಾಪರ್‌ ಸ್ಥಾನದಲ್ಲಿದ್ದ ಸನ್ನಿ ಲಿಯೋನ್‌ ಅಪ್ಲಿಕೇಶನ್ ಐಡಿ ಮತ್ತು ರೋಲ್ ಸಂಖ್ಯೆ ಕೂಡ ಅದರಲ್ಲಿತ್ತು. ಜತೆಗೆ, 12 ನೇ ತರಗತಿ ಪರೀಕ್ಷೆಯಲ್ಲಿ ನಾಲ್ಕು ವಿಷಯಗಳಲ್ಲಿ 400 ಅಥವಾ ಪೂರ್ಣ ಅಂಕಗಳನ್ನು ಪಟ್ಟಿಯಲ್ಲಿ ನಮೂದಿಸಲಾಗಿತ್ತು.
ಈ ವಿಷಯ ಕಾಲೇಜಿನ ಆಡಳಿತ ಮಂಡಳಿಗೆ ತಿಳಿಯುತ್ತಲೇ ಆ ಹೆಸರನ್ನು ತೆಗೆದುಹಾಕಲು ಕ್ರಮ ತೆಗೆದುಕೊಳ್ಳಲಾಗಿದೆ. ಈ ಕುರಿತು ಶಿಕ್ಷಣ ಇಲಾಖೆ ಜತೆ ಮಾತನಾಡಿದ್ದೇವೆ. ಯಾರೋ ಕಿಡಿಗೇಡಿಗಳು ಸನ್ನಿ ಲಿಯೋನ‌ ಹೆಸರಿನಲ್ಲಿ ಈ ಕೃತ್ಯ ಎಸಗಿದ್ದಾರೆ ಎಂದಿರುವ ಆಡಳಿತ ಮಂಡಳಿ ಈ ಬಗ್ಗೆ ತನಿಖೆಗೆ ಆದೇಶಿಸಿದೆ.
ಈ ಹಿಂದೆ ಬಿಜೆಪಿಗೆ ಸೇರ್ಪಡೆಯಾದ ಸನ್ನಿ ಡಿಯೋಲ್ ಬದಲಿಗೆ ಲೋಕಸಭಾ ಚುನಾವಣೆಯ 2019 ರ ಸಂದರ್ಭದಲ್ಲಿ ‘ಸನ್ನಿ ಲಿಯೋನ್’ ಮುನ್ನಡೆ ಸಾಧಿಸುತ್ತಿದೆ ಎಂದು ಸುದ್ದಿ ನಿರೂಪಕರೊಬ್ಬರು ಹೇಳಿದಾಗ ಸನ್ನಿ ಲಿಯೋನ್ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿದ್ದು ಇಲ್ಲಿ ಉಲ್ಲೇಖಾರ್ಹ.
ರಷ್ಯಾದಲ್ಲಿದೆ ವಿಶ್ವದ ಭಯಾನಕ ಅಣುಬಾಂಬ್‌: ಸ್ಫೋಟದ ಭೀಕರ ದೃಶ್ಯ ಇಲ್ಲಿದೆ…

ರಷ್ಯಾದಲ್ಲಿದೆ ವಿಶ್ವದ ಭಯಾನಕ ಅಣುಬಾಂಬ್‌: ಸ್ಫೋಟದ ಭೀಕರ ದೃಶ್ಯ ಇಲ್ಲಿದೆ…

ಕೆಎಸ್‌ಆರ್‌ಟಿಸಿ ಬಸ್‌ ಆಯ್ತು ಹಲವು ವಿಶೇಷತೆಗಳ ಮಹಿಳಾ ಶೌಚಗೃಹ- ದೇಶದಲ್ಲೇ ಪ್ರಥಮ

ಕರೊನಾ ಶ್ವಾಸಕೋಶಕ್ಕಷ್ಟೇ ಸೀಮಿತವಾಗಿಲ್ಲ: ವೈರಸ್‌ ಭಯಾನಕತೆ ಬಿಚ್ಚಿಟ್ಟಿದ್ದಾರೆ ಏಮ್ಸ್‌ ತಜ್ಞರು

ಮಸೀದಿ ಮೇಲೆ ದಾಳಿ- ಪರೋಲ್ ಇಲ್ಲದ ಜೀವಾವಧಿ ಶಿಕ್ಷೆ: ಇತಿಹಾಸ ಬರೆದ ಕೋರ್ಟ್‌

ಚೀನಿಯರಿಗೂ ಬೇಕು ಪ್ರಧಾನಿ ಮೋದಿ: ಚೀನಾದ ಪತ್ರಿಕೆಯ ಸಮೀಕ್ಷೆ ಏನು ಹೇಳಿದೆ ನೋಡಿ…

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:nine + two =
Remember me
