ಮುಂಬೈ:ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರೀಯರಾಗಿರುವ ಸನ್ನಿ ಲಿಯೋನ್‌ ತಮ್ಮ ಅನುಭವಗಳನ್ನು ಆಗಾಗ್ಗೆ ಹಂಚಿಕೊಳ್ಳುತ್ತಲೇ ಇರುತ್ತಾರೆ. ಲಾಕ್‌ಡೌನ್‌, ಕರೊನಾ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ನೂರಾರು ಮಂದಿಗೆ ಸಹಾಯ ನೀಡುತ್ತಾ ಇದಾಗಲೇ ಸುದ್ದಿಯಲ್ಲಿರುವ ಈ ನಟಿ, ಈಗ ಕುತೂಹಲಕಾರಿಯಾದ ಒಂದು ವಿಡಿಯೋ ಶೇರ್‌ ಮಾಡಿಕೊಂಡಿದ್ದಾರೆ.
ಈ ವಿಡಿಯೋದಲ್ಲಿ ಸನ್ನಿ ಲಿಯೋನ್‌ ಅವರಿಗೆ ಬಟ್ಟೆ ತೊಡಿಸಲು ಕಾಸ್ಟ್ಯೂಮ್‌ ಡಿಸೈನರ್‌ಗಳು ಕಷ್ಟಪಡುತ್ತಿದ್ದು, ಬಟ್ಟೆಯ ಜಿಪ್‌ ಮೇಲೇರಿಸಲು ಸಾಧ್ಯವಾಗದೇ ಸಂಕಷ್ಟಕ್ಕೆ ಸಿಲುಕಿರುವ ದೃಶ್ಯ ಇದಾಗಿದೆ. ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.


A post shared by Sunny Leone (@sunnyleone)

ಸೆಲೆಬ್ರಿಟಿಗಳು ಯಾವುದೇ ಕಾರ್ಯಕ್ರಮಗಳಿಗೆ ಭಾಗವಹಿಸಲು ಹೋದಾಗ ಅವರ ಜತೆಗೆ ಮೇಕಪ್‌ ಮೆನ್‌ಗಳು, ಬಟ್ಟೆ ತೊಡಿಸಲು ಕಾಸ್ಟ್ಯೂಮ್‌ ಡಿಸೈನರ್‌ಗಳ ತಂಡ ಹೋಗುವುದು ಸಾಮಾನ್ಯ. ಅದೇ ರೀತಿ ಸನ್ನಿ ಲಿಯೋನ್‌ ಅವರು ಕಾರ್ಯಕ್ರಮವೊಂದಕ್ಕೆ ಹೋದಾಗ ನಡೆದಿರುವ ಘಟನೆ ಇದು. ಬಹಳಷ್ಟು ಖ್ಯಾತಿ ಗಳಿಸಿರುವ ’ಸ್ಪ್ಲಿಟ್ಸ್‌ವಿಲ್ಲಾ’ ರಿಯಾಲಿಟಿ ಷೋನಲ್ಲಿ ಸನ್ನಿ ನಿರೂಪಕಿಯಾಗಿದ್ದಾರೆ.
ಈ ಕಾರ್ಯಕ್ರಮದಲ್ಲಿ ಅವರಿಗೆ ಬಟ್ಟೆ ತೊಡಿಸುವ ವೇಳೆ ಬೆನ್ನಿನ ಭಾಗದಲ್ಲಿದ್ದ ಜಿಪ್ ಮೇಲೇರಿಸಲು ಸಾಧ್ಯವಾಗದೇ ಮೂವರು ಮೇಕಪ್‌ಮನ್‌ಗಳು ಸುಸ್ತಾಗಿ ಹೋಗಿದ್ದಾರೆ. ಇದರ ವಿಡಿಯೋವನ್ನು ಸನ್ನಿ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಹೀಗೆ ಮೇಕಪ್‌ ಮಾಡುವ ತಂಡವನ್ನು ಆರ್ಮಿ ಎಂದಿರುವ ನಟಿ, ಅವರು ಸಾಹಸಪಟ್ಟಿರುವ ಬಗ್ಗೆ ವಿವರಣೆ ನೀಡಿದ್ದಾರೆ.
ಹೆಚ್ಚಿಗೆ ಹಣ ವಸೂಲಿ- ದೂರು ನೀಡಿದ ಕಾರಣ ಸೋಂಕಿತನ ಸಾವಿಗೆ ಕಾರಣವಾದ ಆರೋಪ: ಆಸ್ಪತ್ರೆ ವಿರುದ್ಧ ಕೇಸ್‌

ಪ್ರೀತಿಯಲ್ಲಿ ಸಿಲುಕಿಬಿಟ್ಟ ಅಣ್ಣ-ತಂಗಿ! ಮುಂದಿನ ಜನ್ಮದಲ್ಲಿ ಪ್ರೇಮಿಗಳಾಗೋಣ ಎಂದು ಬರೆದಿಟ್ಟು ಆತ್ಮಹತ್ಯೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 + two =
Remember me
