ಮುಂಬೈ:ಇದಾಗಲೇ ಹಲವಾರು ಚಿತ್ರಗಳಲ್ಲಿ ಅಭಿನಯಿಸಿ, ತಮ್ಮ ವಿಶೇಷ ಹಾವಭಾವದಿಂದ ಲಕ್ಷಾಂತರ ಅಭಿಮಾನಿಗಳ ಮನಸ್ಸನ್ನು ಕದ್ದಿರುವ ಬಾಲಿವುಡ್‌ ನಟಿ ಸನ್ನಿ ಲಿಯೋನ್‌ ಪುನಃ ಸ್ಯಾಂಡಲ್‌ವುಡ್‌ನಲ್ಲಿ ನಟಿಸಲು ತಯಾರಿ ನಡೆಸಿದ್ದಾರೆ.
ಇದಾಗಲೇ ಮೂರು ಬಾರಿ ಕನ್ನಡ ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ಸನ್ನಿ, ಇದೀಗ ನಾಲ್ಕನೇ ಬಾರಿ ನಟಿಸಲಿದ್ದಾರೆ. ಕನಕಪುರ ಶ್ರೀನಿವಾಸ್ ನಿರ್ಮಿಸುತ್ತಿರುವ ಕನ್ನಡ ಮತ್ತು ತೆಲುಗು ಚಿತ್ರದಲ್ಲಿ ಸನ್ನಿ ಲಿಯೋನ್‌ ಕಾಣಿಸಿಕೊಳ್ಳಲಿದ್ದಾರೆ. ಸ್ಪೆಷಲ್ ಐಟಂ ಸಾಂಗ್‌ನಲ್ಲಿ ಈ ಬೆಡಗಿ ಸೊಂಟ ಬಳುಕಿಸಲಿದ್ದಾರೆ ಎನ್ನಲಾಗಿದೆ.
ಕನ್ನಡದಲ್ಲಿ ‘ಕಾಟನ್ ಪೇಟೆ ಗೇಟ್‘ ಹಾಗೂ ತೆಲುಗಿನಲ್ಲಿ ‘ಸೀತಣ್ಣ ಪೇಟೆ ಗೇಟ್‘ ಹೆಸರಿನ ಚಿತ್ರದಲ್ಲಿ ಇವರು ನಟಿಸಲಿದ್ದಾರೆ. ಆ ಹಾಡಿನಲ್ಲಿ ಸನ್ನಿ ಜತೆ ನಿರ್ಮಾಪಕ ಕನಕಪುರ ಶ್ರೀನಿವಾಸ್ ಕೂಡ ಸ್ಟೆಪ್ಸ್ ಹಾಕಲಿದ್ದಾರೆ. ಇದೇ 29ರಿಂದ ಮೂರು ದಿನಗಳವರೆಗೆ ಹೈದರಾಬಾದ್‌ನಲ್ಲಿ ಹಾಡಿನ‌ ಚಿತ್ರೀಕರಣ ನಡೆಯಲಿದೆ.
ಡಿಕೆ, ಲವ್ ಯೂ ಆಲಿಯಾ ಹಾಗೂ ಛೇರ್ಮನ್ ಚಿತ್ರಗಳ ಬಳಿಕ ಕಾಟನ್ ಪೇಟೆ ಗೇಟ್ ಚಿತ್ರದಲ್ಲಿ ಸನ್ನಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರಕ್ಕೆ ಇವರು, 50 ಲಕ್ಷ ರೂಪಾಯಿ ಸಂಭಾವನೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.
ಕೊಳೆಗೇರಿವಾಸಿಗಳಿಗೆ ಕಟ್ಟಿಸಿರೋ ಈ ಪಬ್ಲಿಕ್‌ ಟಾಯ್ಲೆಟ್‌ ಒಳಗೆ ಹೋದ್ರೆ ಬರಲು ಮನಸ್ಸೇ ಬರಲ್ವಂತೆ!

ಲಾಕ್‌ಡೌನ್‌ನಲ್ಲಿ ಕೆಲಸವಿಲ್ಲದೇ ಮೀನು ವ್ಯಾಪಾರಕ್ಕಿಳಿದ ಪ್ರಸಿದ್ಧ ನಟ: ಅಪ್ಪನ ಹಾದಿ ತುಳಿದು ಕಣ್ಣೀರು…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine − 7 =
Remember me
