ಮುಂಬೈ:ಸೆಲೆಬ್ರಿಟಿಗಳ ಬಳಕುವ ದೇಹವನ್ನು ನೋಡಿದರೆ ವ್ಹಾ ವ್ಹಾ ಎಂದು ಎಲ್ಲರೂ ಖುಷಿಪಡುತ್ತಾರೆ. ಆದರೆ ಅಭಿಮಾನಿಗಳ ಕಣ್ಣಲ್ಲಿ ಸುಂದರಿಯಾಗಿಯೇ ಇರಲು ಜತೆಗೆ, ಚಿತ್ರರಂಗದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳುವ ಅನಿವಾರ್ಯತೆಯಿಂದಾಗಿ ಸಿನಿ ತಾರೆಯರು, ತಮ್ಮ ದೇಹದ ಸೌಂದರ್ಯ ಕಾಪಾಡಿಕೊಳ್ಳಲು ಮಾಡುವ ಸರ್ಕಸ್​ಗಳು ಅಷ್ಟಿಷ್ಟಲ್ಲ.
ಸದಾ ಡಯೆಟ್​ ಆಹಾರ, ವ್ಯಾಯಾಮ. ಜಿಮ್ಮು ಅದೂ ಇದೂ ಅಂತೆಲ್ಲಾ ತಲೆಕೆಡಿಸಿಕೊಳ್ಳುವ ಹಲವು ಸಿನಿತಾರೆಯರು ತಮ್ಮ ನೆಚ್ಚಿನ ಆಹಾರಗಳನ್ನೂ ಎಷ್ಟೋ ಬಾರಿ ತ್ಯಾಗ ಮಾಡಬೇಕಾಗಿ ಬರುತ್ತದೆ.
A post shared by Sunny Leone (@sunnyleone)

ಇದೇ ರೀತಿ ನೀಲಿತಾರೆಯೆಂದೇ ಗುರುತಿಸಿಕೊಂಡಿರುವ ಸುಂದರಿ ಸನಿ ಲಿಯಾನ್​ ಕೂಡ ಸದಾ ಡಯೆಟ್​ ಫುಡ್​ನತ್ತಲೇ ಗಮನ ಹರಿಸುತ್ತಿದ್ದಾರೆ. ವಯಸ್ಸು ಹೆಚ್ಚಿದಂತೆ ತಮ್ಮ ತೂಕದತ್ತ ಗಮನ ಹರಿಸಿ ಬೇಡಿಕೆ ಕುದುರಿಸಿಕೊಳ್ಳಲು ಇದು ಅವರಿಗೆ ಅನಿವಾರ್ಯವೂ ಹೌದು.
ಆದರೆ ಎದುರಿಗೆ ಪಾನೀಪುರಿ ಘಮಘಮಿಸುತ್ತಿದ್ದರೆ ಡಯೆಟ್​ ಎಲ್ಲಾ ಮರೆತುಹೋಗುತ್ತದೆ ಎನ್ನುವ ಈ ನಟಿ, ತಮ್ಮ ವ್ಯಾನಿಟಿ ವ್ಯಾನ್​ನಲ್ಲಿ ಪಾನೀಪುರಿ ಸವಿಯುವ ದೃಶ್ಯವನ್ನು ಇನ್​ಸ್ಟಾಗ್ರಾಂನಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಸನ್ನಿ ಪಾನೀಪುರಿ ಸವಿಯುತ್ತಿರುವುದನ್ನು ಅವರ ಕೇಶ ವಿನ್ಯಾಸಕಿ ಜೀತಿ ರೆಕಾರ್ಡ್ ಮಾಡಿದ್ದಾರೆ.
“ತುಮ್ನೆ 12 ಪಾಣಿಪುರಿ ಖಾಯೆ” (ಈಗಾಗಲೇ 12 ಪಾನೀಪುರಿ ತಿಂದಿದ್ದಿಯಾ) ಎಂದು ಸನ್ನಿ ಅವರ ಕೇಶ ವಿನ್ಯಾಸಕಿ ವೀಡಿಯೊದಲ್ಲಿ ಹೇಳುವುದನ್ನು ಕೇಳಬಹುದು. ಅದಕ್ಕೆ ಉತ್ತರವಾಗಿ ಸನ್ನಿ, ‘ಜೀತಿ ನೀನು ಸುಳ್ಳುಹೇಳುತ್ತಿದ್ದಿ. ಹೀಗೆಲ್ಲಾ ಸುಳ್ಳು ಹೇಳುವುದು ಒಳ್ಳೆಯದಲ್ಲ, ನಾನಿನ್ನೂ ಎರಡೇ ತಿಂದಿರುವುದು, ಇದು ಮೂರನೆಯದ್ದು ಎಂದು ಇನ್ನೊಂದು ಪಾನೀಪುರಿಯನ್ನು ಬಾಯಿಗೆ ಇಳಿಸಿಕೊಳ್ಳುತ್ತಾರೆ.
ವ್ಯಾನಿಟಿವ್ಯಾನ್​ನಲ್ಲಿ ಇದ್ದುದು ಮೂರೇ ಪಾನೀಪುರಿ ಎಂಬ ಶೀರ್ಷಿಕೆ ನೀಡಿ ಇದನ್ನು ಅವರು ಶೇರ್​ ಮಾಡಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ.


ಮುಂಡೆ ವಿರುದ್ಧದ ರೇಪ್​ಕೇಸ್​ಗೆ ಟ್ವಿಸ್ಟ್​- ಗಾಯಕಿ ವಿರುದ್ಧವೇ ದೂರು: ಸಚಿವರನ್ನು ಕೆಳಗಿಳಿಸಲ್ಲ ಎಂದ ಸಿಎಂ
ಕ್ರೈಂ ವೆಬ್​ ಸಿರೀಸ್​ ನೋಡಿ ಉತ್ತೇಜಿತರಾಗಿ ಅಪಹರಣ ಮಾಡಿದ್ವಿ ಎಂದ ಸಹೋದರರು!


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − nine =
Remember me
