ಮುಂಬೈ:ನೀಲಿ ತಾರೆ ಎಂದೆ ಪ್ರಸಿದ್ಧಿ ಪಡೆದಿರುವ ಸನ್ನಿ ಲಿಯೋನ್‌ 10ನೇ ಮದುವೆ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ. ಡೇನಿಯಲ್ ವೇಬರ್ ಜತೆ ಮದುವೆಯಾಗಿ ಇದೀಗ ದಶಕ ಪೂರೈಸಿರುವ ಸನ್ನಿ ಅವರದ್ದು ಸುಖಿ ದಾಂಪತ್ಯ.
ಆದ್ದರಿಂದ ತಮ್ಮಂತೆಯೇ ಸುಖಿ ದಾಂಪತ್ಯ ಹೊಂದಲು ಏನು ಮಾಡಬೇಕು ಎಂದು ಸನ್ನಿಲಿಯೋನ್‌ ಹೇಳಿದ್ದಾರೆ. ಆದರೆ ಸ್ವಲ್ಪ ಡಿಫರೆಂಟ್‌ ಆಗಿ ಈ ವಿಷಯ ಹೇಳಿರುವ ಅವರು, ತಮ್ಮ ಪತಿಯ ಜತೆ ನೃತ್ಯ ಮಾಡುತ್ತಾ ಇದನ್ನು ತೋರಿಸಿಕೊಟ್ಟಿದ್ದಾರೆ.
ಈ ದಂಪತಿ ನೃತ್ಯ ಸಿಕ್ಕಾಪಟ್ಟೆ ವೈರಲ್ ಆಗಿದೆ. ವಿಡಿಯೋದಲ್ಲಿ ತಮ್ಮ ಸುಖಿ ದಾಂಪತ್ಯದ ಗುಟ್ಟನ್ನು ಅಭಿಮಾನಿಗಳ ಜತೆ ಶೇರ್ ಮಾಡಿಕೊಂಡು, ನೀವು ಪಾಲಿಸಿ ಅಂತ ಅಭಿಮಾನಿಗಳಿಗೆ ಸಲಹೆ ನೀಡಿದ್ದಾರೆ.ವಿಡಿಯೋ ಮೂಲಕ ಅವರು ಹೇಳಿರುವ ಐದು ಸೂತ್ರಗಳು ಎಂದರೆ:1. ದಂಪತಿ ನಡುವೆ ಒಳ್ಳೆಯ ಮಾತುಕತೆ ಆಗುತ್ತಿರಬೇಕು .2. ಇಬ್ಬರೂ ಜತೆಯಾಗಿ ಡೇಟ್ ನೈಟ್ ಪ್ಲ್ಯಾನ್ ಮಾಡಬೇಕು.3. ಇಬ್ಬರೂ ಒಟ್ಟಿಗೆ ಅಡುಗೆ ಮಾಡಿ.4. ಒಬ್ಬರಿಗೊಬ್ಬರು ನಗಿಸುತ್ತಿರಬೇಕು.5. ಒಬ್ಬರು ಮತ್ತೊಬ್ಬರನ್ನು ಹೊಗಳುತ್ತಿರಬೇಕು.
ಅಂದಹಾಗೆ ಈ ದಂಪತಿಗೆ ಮೂವರು ಮಕ್ಕಳು. 2011ರಲ್ಲಿ ಡೇನಿಯಲ್‌ ಜತೆ ಇವರ ವಿವಾಹವಾಗಿದೆ. ಸಿನಿಮಾದಲ್ಲಿ ನೀಲಿ ತಾರೆ ಎನಿಸಿಕೊಂಡರೂ ನಿಜ ಜೀವನದಲ್ಲಿ ಸನ್ನಿ ಲಿಯೋನ್‌ ಹಲವಾರು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡು ಶ್ಲಾಘನಾರ್ಹ ಕಾರ್ಯ ಮಾಡುತ್ತಿದ್ದಾರೆ.
ಸನ್ನಿ ದಂಪತಿ ಮಾಡಿರುವ ಡಾನ್ಸ್ ಇಲ್ಲಿದೆ ನೋಡಿ…


A post shared by Sunny Leone (@sunnyleone)

ಇನ್ನು ಹದಿನೈದೇ ದಿನ ಬಾಕಿ.. ಯಾರನ್ನಾದ್ರೂ ತಬ್ಬಿಕೊಳ್ಳಿ… ಯಾರ ಜತೆ ಬೇಕಾದ್ರೂ ಡೇಟಿಂಗ್‌ ಮಾಡಿ…

ಮಕ್ಕಳಾಗದೇ ಇರುವುದಕ್ಕೆ ವೀರ್ಯ ಕೌಂಟಿಂಗ್ ಕಡಿಮೆ ಇರುವುದೊಂದೇ ಕಾರಣವಲ್ಲ…

ಅವನನ್ನು ಬಿಟ್ಟುಬಿಟ್ರೆ ಸತ್ತೇಹೋಗಿಬಿಡ್ತಾನೆ ಅಂತ ಮೂರ್ಖರ ಹಾಗೆ ಹೇಳ್ತಿದ್ದಿಯಲ್ಲಾ! ಏನ್‌ ಹೇಳೋದು ನಿಮ್ಮಂಥವರಿಗೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 + ten =
Remember me
