ಪಲಂಪುರ್:ಪತ್ನಿ ಮಾಡಿಸಿದ್ದ ಎಲ್​ಐಸಿ ಪಾಲಿಸಿಯ ಹಣವನ್ನು ಪಡೆಯುವುದಕ್ಕೋಸ್ಕರ ಇಲ್ಲೊಬ್ಬ ನೀಚ ಪತಿ ಆಕೆಯನ್ನು ಕೊಲೆ ಮಾಡಿರುವ ಭಯಾನಕ ಘಟನೆ ನಡೆದಿದೆ. ಕೊಲೆ ಮಾಡಿ ಅದು ತಿಳಿಯದಂತೆ ರಸ್ತೆ ಅಪಘಾತ ಎಂದು ಕಥೆಯನ್ನು ಸೃಷ್ಟಿಸಿದ್ದಾನೆ.
ಸುಪಾರಿ ನೀಡಿ ಅಪಘಾತ ಮಾಡಿಸಿರುವ ಈ ನೀಚ ಪತಿಯ ಕುಕೃತ್ಯ ಬೆಳಕಿಗೆ ಬಂದಿದ್ದು ಇದೀಗ ಹಣವೂ ಇಲ್ಲದೇ, ಪತ್ನಿಯನ್ನು ಕೊಲೆ ಮಾಡಿದ್ದಕ್ಕೆ ಜೈಲು ಸೇರಿದ್ದಾನೆ. ಮೂರು ತಿಂಗಳ ಹಿಂದೆ ಮಾಡಿಸಿದ್ದ ಎಲ್ ಐಸಿ ಪಾಲಿಸಿಯಲ್ಲಿ 60 ಲಕ್ಷ ರೂಪಾಯಿ ಬರಬೇಕೆಂದು ಈತ ಈ ರೀತಿ ಮಾಡಿದ್ದಾನೆ!
ಇಂಥದ್ದೊಂದು ಕೃತ್ಯ ಮಾಡಿರುವಾತ ಗುಜರಾತ್ ರಾಜ್ಯದ ಬನಸ್ಕಂತ ಜಿಲ್ಲೆಯ ಚಾರ್ಟೆರ್ಡ್ ಅಕೌಂಟೆಂಟ್ ಲಲಿತ್ ಟಂಕ್. ಕೊಲೆ ಮಾಡಿ ಅದನ್ನು ಅಪಘಾತ ಎಂದು ಹೇಗೆ ಬಿಂಬಿಸಬೇಕು ಎಂದು ಮೊದಲೇ ಪ್ಲ್ಯಾನ್​ ಹಾಕಿಕೊಂಡು ಕೃತ್ಯಕ್ಕೆ ಇಳಿದಿದ್ದ ಈತ ಪತ್ನಿಯನ್ನು ಕಳೆದ ಡಿಸೆಂಬರ್ 26ರಂದು ದೇವಸ್ಥಾನಕ್ಕೆ ಕರೆದುಕೊಂಡು ಹೋಗಿದ್ದಾನೆ.
ಸುಪಾರಿ ಕೊಟ್ಟಿದ್ದ ಆರೋಪಿ ಚಾಲಕನಿಗೆ, ಅಪಘಾತ ಮಾಡುವಂತೆ ಸೂಚಿಸಿದ್ದ. ಅದರಂತೆ ಆತ ಅಪಘಾತ ಮಾಡಿದ್ದಾನೆ. ಮಹಿಳೆ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ನಂತರ ಅಪಘಾತದಲ್ಲಿ ಮಹಿಳೆಯ ಸಾವು ಎಂದು ಪೊಲೀಸ್​ ಠಾಣೆಯಲ್ಲಿ ಕೇಸು ದಾಖಲಾಗಿತ್ತು.
ಕೆಲ ದಿನಗಳ ನಂತರ ಮಹಿಳೆಯ ಸಂಬಂಧಿಕರು ಸಾವಿನ ಬಗ್ಗೆ ಸಂದೇಹ ವ್ಯಕ್ತಪಡಿಸಿದ್ದ ಹಿನ್ನೆಲೆಯಲ್ಲಿ ಪೊಲೀಸರು ಸಾವಿನ ಬಗ್ಗೆ ತನಿಖೆ ನಡೆಸಿದಾಗ ಮಹಿಳೆಯನ್ನು ಹತ್ಯೆಗೈಯಲಾಗಿದೆ ಎಂದು ತಿಳಿಯಿತು. ಮತ್ತಷ್ಟು ತನಿಖೆ ನಡೆಸಿದಾಗ ಪತಿಯೇ ಈ ಕೆಲಸ ಮಾಡಿರುವುದು ತಿಳಿದುಬಂದಿದೆ. ಕಿರಿತ್ ಮಾಲಿ ಎಂಬಾತನಿಗೆ 2 ಲಕ್ಷ ರೂಪಾಯಿ ಸುಪಾರಿ ನೀಡಿರುವುದು ಬೆಳಕಿಗೆ ಬಂದಿದೆ.
ಸದ್ಯ ಲಲಿತ್ ನನ್ನು ಬಂಧಿಸಿರುವ ಪೊಲೀಸರು ಅಪಘಾತ ಮಾಡಿರುವ ಕಿರಿತ್ ಮಾಲಿಗೆ ಬಲೆ ಬೀಸಿದ್ದಾರೆ.
ಇಲ್ಲೊಬ್ಬ ಆಂಟಿಗೆ ಬಾಯ್​ಫ್ರೆಂಡ್​ ಕಾಟ ಕೊಡ್ತಿದ್ದಾನಂತೆ; ಅವ್ರು ನನ್ನನ್ನು ಹೆಗೇಗೋ ಪೀಡಿಸ್ತಿದ್ದಾರೆ- ಏನು ಮಾಡಲಿ?

₹5 ಕೋಟಿ ಕೊಟ್ರೆ ಪ್ರಧಾನಿ ಮೋದಿಯ ಮರ್ಡರ್​ ಮಾಡ್ತೇನೆ ಎಂದು ಪೋಸ್ಟ್​- ಅರೆಸ್ಟ್​

ಸೆಕ್ಸ್​ ವಿಡಿಯೋ ಶೂಟಿಂಗ್​ ಮಾಡಿದ್ದೂ ಅಲ್ಲದೇ ಪೋರ್ನ್​ ವೆಬ್​ಸೈಟ್​ನಲ್ಲಿ ಹರಿಬಿಟ್ಟ ಹಾಟ್​ ತಾರೆ ಅರೆಸ್ಟ್​

ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿ ‘ಯದುವೀರ್​ ಒಡೆಯರ್’​ ಟ್ವೀಟ್​- ಆದರೆ ಅಸಲಿಯತ್ತೇ ಬೇರೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × four =
Remember me
