ಹೈದರಾಬಾದ್:ಮೂಢನಂಬಿಕೆ ಎಂಬುದು ಕೆಲವೊಮ್ಮೆ ಯಾವ ಪರಿಯ ಭೀಕರತೆಯನ್ನು ಸೃಷ್ಟಿಮಾಡುತ್ತದೆ ಎನ್ನುವುದಕ್ಕೆ ಇದೊಂದು ಉದಾಹರಣೆ.ತನಗೆ ಸರ್ಪದೋಷ ಅಂಟಿಕೊಂಡಿದ್ದು, ಅದರಿಂದ ಕುಟುಂಬದವರಿಗೂ ಕೆಡುಕಾಗುತ್ತಿದೆ ಎಂಬ ಕಾರಣಕ್ಕಾಗಿ ಮಹಿಳೆಯೊಬ್ಬಳು ತನ್ನ ಕರುಳಕುಡಿಯನ್ನೇ ಹೊಸಕಿ ಹಾಕಿದ್ದಾಳೆ. ಆರು ತಿಂಗಳ ಮಗುವಿನ ಗಂಟಲು ಸೀಳಿ ಕೊಲೆ ಮಾಡಿದ್ದಾಳೆ.ಇಂಥದ್ದೊಂದು ಭೀಕರ ಘಟನೆ ನಡೆದಿರುವುದು ತೆಲಂಗಾಣದ ಸೂರ್ಯಪೇಟೆ ಜಿಲ್ಲೆಯಲ್ಲಿ. ಇನ್ನೂ ಹೆಸರಿಡದ ಕಂದನನ್ನು ಕೊಲೆಮಾಡಿದವಳು 32 ವರ್ಷದ ಭಾರತಿ ಎಂಬಾಕೆ. ಮಗುವನ್ನು ಕೊಲೆ ಮಾಡಿದ ಬಳಿಕ ಎಲ್ಲ ಕುಟುಂಬಸ್ಥರಿಗೆ ಕರೆ ಮಾಡಿ ನಾನು ಸರ್ಪದೋಷದಿಂದ ಮುಕ್ತಗೊಂಡಿದ್ದು, ಯಾರೂ ಹೆದರುವ ಅಗತ್ಯವಿಲ್ಲ ಎಂದಿದ್ದಾಳೆ. ಜತೆಗೆ ಸಮಸ್ಯೆ ಪರಿಹಾರವಾಯಿತೆಂದು ಕುಣಿದಾಡಿದ್ದಾಳೆ!ಮೊದಲ ಗಂಡನಿಂದ ವಿಚ್ಛೇದನ ಪಡೆದಿದ್ದ ಭಾರತಿ ಕೆಲ ವರ್ಷಗಳ ಹಿಂದೆ ಕೃಷ್ಣ ಎಂಬುವವರನ್ನು ಮದುವೆಯಾಗಿದ್ದಳು. ಇವರಿಗೆ ಆರು ತಿಂಗಳ ಶಿಶುವಿದೆ. ನಂತರ ಮೇಲಿಂದ ಮೇಲೆ ಸಮಸ್ಯೆಗಳು ತಲೆದೋರಿದಾಗ ಈಕೆಗೆ ಯಾರೋ ನಿನಗೆ ಸರ್ಪದೋಷವಿದೆ ಎಂದು ಹೇಳಿದ್ದಾರೆ.ನಂತರ ಇದರ ಮುಕ್ತಿಗಾಗಿ ಏನು ಮಾಡಬೇಕು ಎಂದು ಯೂಟ್ಯೂಬ್​ ತಡಕಾಡಿದ್ದಾಳೆ. ಅಲ್ಲಿ ಆಕೆಗೆ ಮಗುವನ್ನು ಕೊಲೆ ಮಾಡಿದರೆ ಮುಕ್ತಿ ಸಿಗುತ್ತದೆ ಎಂಬ ವಿಷಯ ಸಿಕ್ಕಿದೆ. ಅದನ್ನೇ ನಂಬಿದ ಭಾರತಿ ಆರು ತಿಂಗಳ ತನ್ನದೇ ಮಗುವಿನ ಗಂಟಲು ಸೀಳಿದ್ದಾಳೆ, ನಂತರ ಎಲ್ಲರಿಗೂ ಕರೆ ಮಾಡಿದ್ದಾಳೆ.ಗಾಬರಿಗೊಂಡ ಸಂಬಂಧಿಕರು ಕೃಷಿ ಕಾರ್ಯಕ್ಕೆ ಹೋಗಿದ್ದ ಗಮಡನಿಗೆ ವಿಷಯ ತಿಳಿಸಿದ್ದಾರೆ. ಗಾಬರಿಯಿಂದ ಮನೆಗೆ ಬಂದ ಗಂಡ ರಕ್ತದ ಮಡುವಿನಲ್ಲಿ ಬಿದ್ದ ಮಗುವನ್ನು ನೋಡಿ ವಿಷಯ ತಿಳಿದು ಪೊಲೀಸರಿಗೆ ದೂರು ನೀಡಿದ್ದಾನೆ. ಸದ್ಯ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.
ಹನಿಮೂನ್​ನಲ್ಲಿರೋ ಅರೆಬರೆ​ ಡ್ರೆಸ್​ ವಿಡಿಯೋ ಶೇರ್​ ಮಾಡಿ ಎನ್​ಜಾಯ್​ ಮಾಡಿ ಎಂದ ನಟಿ- ನೆಟ್ಟಿಗರು ಗರಂ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:ten + nine =
Remember me
