ನವದೆಹಲಿ:ಹೆಂಗಸು ಮನೆಯಲ್ಲಿ ಮಾಡುವ ಕೆಲಸದ ಬೆಲೆ ಆಫೀಸಿಗೆ ಹೋಗುವ ಗಂಡನ ಕೆಲಸಕ್ಕಿಂತ ಕಡಿಮೆ ಏನಲ್ಲ ಎಂದು ಸುಪ್ರೀಂ ಕೋರ್ಟ್​ ಅಭಿಪ್ರಾಯಪಟ್ಟಿದೆ. ಹೌಸ್​ವೈಫ್​ಗಳು ದುಡಿಯುವುದಿಲ್ಲ ಅಥವಾ ಮನೆಗೆ ಆರ್ಥಿಕ ಕೊಡುಗೆ ನೀಡುವುದಿಲ್ಲ ಎಂಬ ಪರಿಕಲ್ಪನೆಯನ್ನು ತಿದ್ದಿಕೊಳ್ಳಬೇಕು ಎಂದಿದೆ, ನ್ಯಾಯಾಲಯ.
ಮಂಗಳವಾರ ಇತ್ಯರ್ಥಗೊಳಿಸಿದ ಅಪಘಾತ ಪ್ರಕರಣವೊಂದರಲ್ಲಿ ಸತ್ತ ಮಹಿಳೆಯ ಸಂಬಂಧಿಕರಿಗೆ ಸಲ್ಲಬೇಕಾದ ಪರಿಹಾರ ಮೊತ್ತವನ್ನು ಹೆಚ್ಚಿಸಿದ ನ್ಯಾಯಮೂರ್ತಿ ಎನ್.ವಿ.ರಮಣ ನೇತ್ರತ್ವದ ತ್ರಿಸದಸ್ಯ ಪೀಠ, ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಸಮಾನತೆಗಾಗಿ ಎಷ್ಟೇ ಹೋರಾಡಿದರೂ ಮನೆಯಲ್ಲಿ ಬೆಳಿಗ್ಗೆಯಿಂದ ರಾತ್ರಿವರೆಗೆ ದುಡಿಯುವ ಮಹಿಳೆಯರಿಗೆ ಸೂಕ್ತ ಮಾನ್ಯತೆ ಸಿಗದ ಇಂದಿನ ಪರಿಸ್ಥಿತಿಯಲ್ಲಿ ನ್ಯಾಯಾಲಯದ ಈ ಮಾತು ಮಹಿಳಾ ಸಬಲೀಕರಣಕ್ಕೆ ಹೊಸ ಆಯಾಮ ನೀಡಿದೆ.
2014ರ ಏಪ್ರಿಲ್​ನಲ್ಲಿ ನವದೆಹಲಿಯಲ್ಲಿ ಸ್ಕೂಟರ್​ನಲ್ಲಿ ಪಯಣಿಸುತ್ತಿದ್ದ ದಂಪತಿಯು ಕಾರು ಡಿಕ್ಕಿ ಹೊಡೆದ ಪರಿಣಾಮ ಮೃತಪಟ್ಟರು. ಸತ್ತವರ ಸಂಬಂಧಿಕರಿಗೆ ನೀಡುವ ಪರಿಹಾರ ಮೊತ್ತವನ್ನು ನಿಗದಿ ಪಡಿಸುವಾಗ ದೆಹಲಿ ಉಚ್ಛ ನ್ಯಾಯಾಲಯವು ಮಹಿಳೆಯು ಹೌಸ್​ವೈಫ್​ ಎಂಬ ಕಾರಣಕ್ಕೆ ಅವಳ ಆದಾಯ ಪರಿಗಣನೆಯನ್ನು ಕಡಿಮೆ ಮಾಡಿ 11.20 ಲಕ್ಷ ರೂಪಾಯಿ ಪರಿಹಾರ ಆದೇಶಿಸಿತ್ತು. ಈ ನಿರ್ಣಯವನ್ನು ಬದಲಿಸಿದ ಸುಪ್ರೀಂ, ವಿಮಾ ಕಂಪೆನಿಯು ನೀಡಬೇಕಾದ ಪರಿಹಾರ ಮೊತ್ತವನ್ನು 33.20 ಲಕ್ಷ ರೂಪಾಯಿಗೆ ಹೆಚ್ಚಿಸಿತು.
ಈ ಕುರಿತು ಪ್ರತ್ಯೇಕ ಆದೇಶವೊಂದನ್ನು ನೀಡಿದ ನ್ಯಾಯಮೂರ್ತಿ ರಮಣ ಅವರು, ರಾಷ್ಟ್ರೀಯ ಅಂಕಿಸಂಖ್ಯೆ ಕಾರ್ಯಾಲಯದ ‘ಟೈಮ್ ಯೂಸ್ ಇನ್ ಇಂಡಿಯಾ-2019’ ಎಂಬ ಶೀರ್ಷಿಕೆಯ ವರದಿಯನ್ನು ಉಲ್ಲೇಖಿಸಿದ್ದಾರೆ. ವರದಿಯಲ್ಲಿ ಮಹಿಳೆಯರು ಒಂದು ದಿನಕ್ಕೆ ಸರಿಸುಮಾರು 299 ನಿಮಿಷಗಳನ್ನು ತಮ್ಮ ಕುಟುಂಬದ ಸದಸ್ಯರಿಗಾಗಿ ಸಂಬಳವಿಲ್ಲದೆ ಗೃಹಸೇವೆಗಳನ್ನು ಮಾಡಲು ವ್ಯಯಿಸುತ್ತಾರೆ, ಅದೇ ಗಂಡಸರು ಬರೀ 97 ನಿಮಿಷಗಳನ್ನು ವ್ಯಯ ಮಾಡುತ್ತಾರೆ ಎಂದು ಹೇಳಲಾಗಿದೆ.
2011 ರ ಜನಗಣನೆಯ ಪ್ರಕಾರ ಭಾರತದಲ್ಲಿ 159.89 ಮಿಲಿಯನ್ ಮಹಿಳೆಯರು “ಮನೆ ಕೆಲಸ” ಮಾಡುತ್ತಾರೆ. “ಮಹಿಳೆಯು ಆಹಾರ ತಯಾರಿಸುತ್ತಾಳೆ, ದಿನಸಿಸಾಮಾನು ಇತರ ಖರೀದಿಗಳನ್ನು ನೋಡಿಕೊಳ್ಳುತ್ತಾಳೆ, ಮನೆಯನ್ನು – ಅದರ ಆವರಣವನ್ನು ಸ್ವಚ್ಛಗೊಳಿಸುತ್ತಾಳೆ, ಅಲಂಕರಿಸುತ್ತಾಳೆ, ರಿಪೇರಿ-ನಿರ್ವಹಣೆ ಮಾಡುತ್ತಾಳೆ ಮತ್ತು ಮಕ್ಕಳನ್ನು – ವಯಸ್ಸಾದವರನ್ನು ಆರೈಕೆ ಮಾಡುತ್ತಾಳೆ” ಎಂದು ವಿವರಿಸಿರುವ ನ್ಯಾಯಮೂರ್ತಿ ಎನ್.ವಿರಮಣ ಅವರು, “ಇಷ್ಟೆಲ್ಲ ಮಾಡಿದರೂ ಹೋಮ್​ಮೇಕರ್​ಗಳು ಕೆಲಸ ಮಾಡುವುದಿಲ್ಲ ಅಥವಾ ಮನೆಗೆ ಆರ್ಥಿಕವಾಗಿ ಕೊಡುಗೆ ನೀಡುವುದಿಲ್ಲ ಎಂಬ ಪರಿಕಲ್ಪನೆ ಇಟ್ಟುಕೊಂಡಿರುವುದು ಸಮಸ್ಯಾತ್ಮಕವಾಗಿದೆ. ಇದನ್ನು ನಿವಾರಿಸಬೇಕಿದೆ” ಎಂದಿದ್ದಾರೆ.
VIDEO: ಅಯ್ಯೋ ಈ ಸಿಂಹ ನಿಮ್ಗೆ ಏನೂ ಮಾಡಲ್ಲ… ಹೆದರಿಕೊಳ್ಬೇಡಿ… ಅಂದ್ರೆ ನಂಬಿಬಿಡ್ತೀರಾ?

‘ನಾವು ಸಾಬ್ರು, ಹೊಸ ಗಾಡಿ ತಗೋಳಲ್ಲ, ಹಳೇ ಗಾಡಿನೇ ರೆಡಿ ಮಾಡ್ತೀವಿ ತಿಳೀತಾ?’

ಯೋಗಿ ಆದಿತ್ಯನಾಥ್​ ಲವ್​ ಮಾಡಿದ್ದಾರಾ? ಮದ್ವೆ ಆಗಿದ್ದಾರಾ? ಹೀಗೆಲ್ಲಾ ಹೇಗೆ ಹೇಳ್ತಾರೆ ಅವ್ರು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 1 =
Remember me
