ನವದೆಹಲಿ:ಗರ್ಭಪಾತಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್​ ಇಂದು ಮಹತ್ವದ ತೀರ್ಪೊಂದನ್ನು ನೀಡಿದೆ. ವೈದ್ಯಕೀಯ ಗರ್ಭಪಾತ ಕಾಯ್ದೆಯ ವ್ಯಾಪ್ತಿಯನ್ನು ವಿಸ್ತರಿಸುವ ಮೂಲಕ, ಅವಿವಾಹಿತ ಮಹಿಳೆಯರು ಗರ್ಭ ಧರಿಸಿದರೆ ಅವರು ನಿರಾಳರಾಗುವಂಥ ತೀರ್ಪು ನೀಡಿದೆ.
ಈಗಿರುವ ನಿಯಮದ ಪ್ರಕಾರ 20-24 ವಾರಗಳ ಭ್ರೂಣವನ್ನು ಗರ್ಭಪಾತ ಮಾಡಿಸಿಕೊಳ್ಳಲು ವಿಚ್ಛೇದಿತರಿಗೆ ಹಾಗೂ ವಿಧವೆಯರಿಗೆ ಅನುಮತಿ ಇದೆ. ಆದರೆ ಈಗ ಅವಿವಾಹಿತ ಮಹಿಳೆಯೊಬ್ಬಳು ಒಪ್ಪಿತ ಲೈಂಗಿಕ ಸಂಬಂಧದಿಂದ ಗರ್ಭ ಧರಿಸಿದಾಗ, ಅಂಥ 24 ವಾರದ ಗರ್ಭಾವಸ್ಥೆಯನ್ನು ಅಂತ್ಯಗೊಳಿಸಬಹುದು ಎಂದು ಕೋರ್ಟ್​ ಹೇಳಿದೆ. ಅವಿವಾಹಿತೆ ಕೂಡ ವೈದ್ಯಕೀಯ ಗರ್ಭಪಾತ ಕಾಯ್ದೆಯ ವ್ಯಾಪ್ತಿಗೆ ಬರುತ್ತಾಳೆ ಎಂದಿದ್ದಾರೆ ನ್ಯಾಯಮೂರ್ತಿಗಳು.
ಗರ್ಭಪಾತಕ್ಕೆ ಕೋರಿ ಅವಿವಾಹಿತೆಯೊಬ್ಬಳು ದೆಹಲಿ ಹೈಕೋರ್ಟ್​ ಮೊರೆ ಹೋಗಿದ್ದರು. ಆಗ ಅವರಿಗೆ 23 ವಾರಗಳ ಗರ್ಭಧಾರಣೆಯಾಗಿತ್ತು. ಆದರೆ ಕಾನೂನು ಗರ್ಭಪಾತಕ್ಕೆ ಅವಕಾಶ ನೀಡುವುದಿಲ್ಲ ಎನ್ನುವ ಕಾರಣಕ್ಕೆ ಆಕೆಗೆ ಗರ್ಭಪಾತಕ್ಕೆ ಕೋರ್ಟ್​ ಅನುಮತಿ ನೀಡಿರಲಿಲ್ಲ. ಇದನ್ನು ಮಹಿಳೆ ಸುಪ್ರೀಂಕೋರ್ಟ್​ನಲ್ಲಿ ಪ್ರಶ್ನಿಸಿದ್ದರು. ಈಗ ಅವರಿಗೆ 24 ವಾರಗಳಾಗಿದ್ದು, ಗರ್ಭಪಾತಕ್ಕೆ ಕೋರ್ಟ್​ ಅನುಮತಿ ನೀಡಿದೆ. ಇದೇ ವೇಳೆ ಹೈಕೋರ್ಟ್​ ಕ್ರಮಕ್ಕೆ ಅಸಮಾಧಾನ ವ್ಯಕ್ತಪಡಿಸಿದೆ.
ಅರ್ಜಿದಾರ ಮಹಿಳೆ ಅವಿವಾಹಿತೆ ಎಂಬ ಒಂದೇ ಕಾರಣಕ್ಕೆ ಕಾನೂನಿನ ಪ್ರಯೋಜನವನ್ನು ಆಕೆಗೆ ನಿರಾಕರಿಸಬಾರದು. ಮಹಿಳೆಯು ತನಗೆ ಬೇಡವಾದ ಗರ್ಭಧಾರಣೆಯನ್ನು ಮುಂದುವರಿಸುವುದು ಸಂವಿಧಾನದ ಆಶಯ ಮತ್ತು ಉದ್ದೇಶಗಳಿಗೆ ವಿರುದ್ಧವಾಗುತ್ತದೆ ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ.
ವೈದ್ಯಕೀಯ ಗರ್ಭಪಾತ ಕಾಯ್ದೆಯಡಿ ಇಬ್ಬರು ವೈದ್ಯರ ಸಮಿತಿಯೊಂದನ್ನು ರಚಿಸುವಂತೆ ಹಾಗೂ ಗರ್ಭಪಾತದಿಂದ ಮಹಿಳೆಯ ಜೀವಕ್ಕೇನಾದರೂ ಅಪಾಯವಾಗಬಹುದಾ ಎಂಬುದನ್ನು ಸಮಿತಿಯು ಪರಿಶೀಲಿಸಿ ವರದಿ ನೀಡುವಂತೆ ಏಮ್ಸ್​ ನಿರ್ದೇಶಕರಿಗೆ ನ್ಯಾಯಮೂರ್ತಿಗಳು ಆದೇಶಿಸಿದರು.
ಈ ಪ್ರಕರಣದಲ್ಲಿ, ವೈದ್ಯಕೀಯ ಗರ್ಭಪಾತ ಕಾಯ್ದೆಯ ಸೆಕ್ಷನ್ 3(2) (ಡಿ) ಅಡಿಯಲ್ಲಿ ವೈದ್ಯರ ಸಮಿತಿಯೊಂದನ್ನು ರಚಿಸುವಂತೆ ಏಮ್ಸ್​ ನಿರ್ದೇಶಕರಿಗೆ ಸೂಚಿಸಿದ ಪೀಠ, ಅರ್ಜಿದಾರ ಮಹಿಳೆಯ ಜೀವಕ್ಕೆ ಯಾವುದೇ ಅಪಾಯವಾಗದಂತೆ ಭ್ರೂಣವನ್ನು ತೆಗೆಯಬಹುದಾದರೆ, ಅಂಥ ಪರಿಸ್ಥಿತಿಯಲ್ಲಿ ಅರ್ಜಿದಾರರ ಕೋರಿಕೆಯಂತೆ ಏಮ್ಸ್​ ಗರ್ಭಪಾತ ಪ್ರಕ್ರಿಯೆ ಮುಂದುವರಿಸಬಹುದು ಎಂದಿತು.(ಏಜೆನ್ಸೀಸ್​)
ಫ್ಲಿಪ್​ಕಾರ್ಟ್​ನಲ್ಲಿ ಬೌನ್ಸ್​ ಇಲೆಕ್ಟ್ರಿಕ್ ಸ್ಕೂಟರ್​ ಬಿಗ್​ ಆಫರ್​: 15 ದಿನಗಳಲ್ಲಿಯೇ ಮನೆ ಬಾಗಿಲಿಗೆ!
ಇ.ಡಿ. ತೆಕ್ಕೆಯಲ್ಲಿ ಅತ್ತೆ: ರಾಜಕೀಯಕ್ಕೆ ಅಳಿಯನ ಎಂಟ್ರಿ? ಸೋನಿಯಾ ಕುಟುಂಬದಿಂದ ಬಂತೊಂದು ಸುದ್ದಿ…
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × one =
Remember me
