ನವದೆಹಲಿ:ಅಕ್ರಮ ಮನೆಗಳನ್ನು ನೆಲಸಮ ಮಾಡಲು ಬುಲ್ಡೋಜರ್​ ಬದಲು ಓಮ್ನಿ ಬಸ್​ ಬಳಸಿ ಕಾರ್ಯಾಚರಣೆ ಮಾಡಿ ಎಂದು ಆದೇಶ ಮಾಡಲು ಸಾಧ್ಯವಾಗುತ್ತದೆಯೆ ಎಂದು ಸುಪ್ರೀಂಕೋರ್ಟ್​ ಪ್ರಶ್ನಿಸಿದೆ.
ಉತ್ತರಪ್ರದೇಶದಲ್ಲಿ ಅಕ್ರಮ ಮನೆಗಳನ್ನು ನೆಲಸಮ ಮಾಡುತ್ತಿರುವ ವಿರುದ್ಧ ಕೆಲವು ಮುಸ್ಲಿಂ ಸಂಘಟನೆಗಳು ಸಲ್ಲಿಸಿರುವ ಅರ್ಜಿಯ ವಿಚಾರಣೆ ವೇಳೆ ಕೋರ್ಟ್​ ಮೌಖಿಕವಾಗಿ ಈ ರೀತಿ ಅಭಿಪ್ರಾಯ ವ್ಯಕ್ತಪಡಿಸಿದೆ. ನಿರ್ದಿಷ್ಟ ಸಮುದಾಯವನ್ನು ಗುರಿಯಾಗಿಸಿಕೊಂಡು ಅಕ್ರಮ ಮನೆಗಳ ನೆಲಸಮ ಮಾಡಲಾಗುತ್ತಿದೆ ಎಂದು ಜಮೀಯತ್ ಉಲಮಾ – ಇ- ಹಿಂದ್ ಸೇರಿದಂತೆ ಕೆಲ ಸಂಘಟನೆಗಳು ಕೋರ್ಟ್​ ಮೊರೆ ಹೋಗಿವೆ.
ವಿಚಾರಣೆ ವೇಳೆ ಸಂಘಟನೆ ಪರ ವಾದಿಸುತ್ತಿರುವ ಹಿರಿಯ ವಕೀಲ ದುಷ್ಯಂತ್ ದವೆ ಅವರು, ಕಾನೂನು ಮೀರಿ ಈ ರೀತಿ ಮನೆಗಳನ್ನು ನೆಲಸಮ ಮಾಡಲಾಗುತ್ತಿದೆ. ನಿರ್ದಿಷ್ಟ ಸಮುದಾಯದವರನ್ನು ಗುರಿಯಾಗಿಸಿಕೊಳ್ಳಗಿದೆ. ಬೇರೆ ಸಮುದಾಯದವರ ಮನೆಯನ್ನೂ ನಾಮ್​ಕೇವಾಸ್ತೆ ಎನ್ನುವಂತೆ ನೆಲಸಮ ಮಾಡಲಾಗುತ್ತಿದೆ. ಆದ್ದರಿಂದ ಈ ಬಗ್ಗೆ ಸೂಕ್ತ ಕ್ರಮಕ್ಕೆ ಆದೇಶಿಸಿ, ಕಕ್ಷಿದಾರರಿಗೆ ನ್ಯಾಯ ಒದಗಿಸಬೇಕು ಎಂದು ಹೇಳಿದರು.
ನಿರ್ದಿಷ್ಟ ಸಮುದಾಯ ಎಂಬ ಮಾತು ಕೇಳಿದ ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಮತ್ತು ಪಿ.ಎಸ್. ನರಸಿಂಹ ಅವರಿದ್ದ ಪೀಠ ವಕೀಲ ದವೆ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿತು. ಅದೇನದು ನಿರ್ದಿಷ್ಟ ಸಮುದಾಯ ಎನ್ನುವುದು? ಭಾರತದಲ್ಲಿ ಇರುವುದು ಭಾರತೀಯ ಸಮುದಾಯ ಮಾತ್ರ. ಬೇರೆ ಯಾವುದೇ ಸಮುದಾಯವಿಲ್ಲ. ಅನಾವಶ್ಯಕವಾಗಿ ಸಂವೇದನಾ ರಹಿತ ಹೇಳಿಕೆ ನೀಡಬೇಡಿ ಎಂದಿತು.
ನೀವು ಸಲ್ಲಿಸಿರುವ ಅರ್ಜಿಯನ್ನು ಆಲಿಸಲಾಗುವುದು. ಆದರೆ ಕಾನೂನಿನಲ್ಲಿರುವ ನಿಯಮವನ್ನು ಎಲ್ಲರೂ ಪಾಲಿಸಬೇಕು. ಅದರಲ್ಲಿ ಯಾರಿಗೂ ರಿಯಾಯಿತಿ ಇಲ್ಲ. ಬುಲ್ಡೋಜರ್​ ಬದಲಾಗಿ ನಾವು ಓಮ್ನಿ ಬಸ್ ಮೂಲಕ ಕ್ರಮ ತೆಗೆದುಕೊಳ್ಳಿ ಎಂದು ಹೇಳಲು ಆಗದು ಎಂದ ಕೋರ್ಟ್​ ವಿಚಾರಣೆಯನ್ನು ಮುಂದೂಡಿತು.
ಕೋರ್ಟ್​ ಕಟಕಟೆಯಲ್ಲಿ ಟಾಲಿವುಡ್​ನ ರಾಣಾ ದುಗ್ಗುಬಾಟಿ: ಭೂವಿವಾದದ ಸುಳಿಯಲ್ಲಿ ನಟ

VIDEO: ಹಿಜಾಬ್​ ವಿರುದ್ಧ ಇರಾನ್​ನಲ್ಲಿ ಪ್ರತಿಭಟನೆ- ಬಟ್ಟೆ ಕಿತ್ತೆಸೆದು ಓಪನ್ ಚಾಲೆಂಜ್!​ ಮುಸ್ಲಿಂ ರಾಷ್ಟ್ರ​ ಅಲ್ಲೋಲ ಕಲ್ಲೋಲ

ಕಂಪೆನಿ ಒಂದೇ, ಬ್ರ್ಯಾಂಡ್ ಹಲವು: ‘ವಿವೋ’ ನಂತರ ‘ಒಪ್ಪೋ’ ಸರದಿ- 4 ಸಾವಿರ ಕೋಟಿ ರೂ. ಪಂಗನಾಮ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × four =
Remember me
