ನವದೆಹಲಿ:ನಿಷೇಧಿತ ಮಾವೋವಾದಿ ಸಂಘಟನೆಯೊಂದಿಗೆ ನಂಟು ಹೊಂದಿರುವ ಆರೋಪ ಹೊತ್ತ, 84 ವರ್ಷದ ಕ್ರಾಂತಿಕಾರಿ ಬರಹಗಾರ-ಕವಿ ಪಿ. ವರವರ ರಾವ್ ಅವರಿಗೆ ಸುಪ್ರೀಂಕೋರ್ಟ್​ ಜಾಮೀನು ಮಂಜೂರು ಮಾಡಿದೆ. ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯಡಿ ಇವರ ಬಂಧಿತರಾಗಿದ್ದರು.
ಇವರಿಗೆ ಸಂಪೂರ್ಣವಾಗಿ ವೈದ್ಯಕೀಯ ಕಾರಣಗಳಿಂದ ಜಾಮೀನು ಮಂಜೂರು ಮಾಡಲಾಗಿದೆ. ಜಾಮೀನು ನೀಡಲು ಬಾಂಬೆ ಹೈಕೋರ್ಟ್ ನಿರಾಕರಿಸಿದ್ದನ್ನು ಪ್ರಶ್ನಿಸಿ ರಾವ್ ಸಲ್ಲಿಸಿದ್ದ ವಿಶೇಷ ಮೇಲ್ಮನವಿ ನಡೆಸಿದ ನ್ಯಾಯಮೂರ್ತಿಗಳಾದ ಯುಯು ಲಲಿತ್ ನೇತೃತ್ವದ ಪೀಠ ಈ ಆದೇಶ ಹೊರಡಿಸಿದೆ.
ವರವರ ರಾವ್ ಅವರ ವಯಸ್ಸು, ಅವರ ವೈದ್ಯಕೀಯ ಸ್ಥಿತಿಗಳು ಮತ್ತು ಅವರು ಕಳೆದ ಎರಡೂವರೆ ವರ್ಷಗಳ ವಾಸ್ತವಿಕ ಕಸ್ಟಡಿ ಅವಧಿಯನ್ನು ನ್ಯಾಯಪೀಠವು ಗಣನೆಗೆ ತೆಗೆದುಕೊಂಡಿತು. ಈ ಪ್ರಕರಣದಲ್ಲಿ ವಿಚಾರಣೆ ಇನ್ನೂ ಪ್ರಾರಂಭವಾಗಿಲ್ಲ ಮತ್ತು ಆರೋಪಪಟ್ಟಿ (ಚಾರ್ಜ್​ಷೀಟ್​) ಸಲ್ಲಿಸಲಾಗಿದ್ದರೂ ಆರೋಪಗಳನ್ನು ರೂಪಿಸಲಾಗಿಲ್ಲ ಎಂದು ನ್ಯಾಯಮೂರ್ತಿಗಳು ಗಮನದಲ್ಲಿ ಇಟ್ಟುಕೊಂಡು ಜಾಮೀನು ಮಂಜೂರು ಮಾಡಿದ್ದಾರೆ.
ಈ ಆದೇಶವು ರಾವ್​ ಅವರಿಗೆ ಮಾತ್ರ ಸಂಬಂಧಪಟ್ಟಿದ್ದು, ಈ ಪ್ರಕರಣದಲ್ಲಿನ ಇತರ ಆರೋಪಿಗಳಿಗೆ ಇದು ಅನ್ವಯಿಸಲಾರದು ಎಂದಿರುವ ಕೋರ್ಟ್​, ಮುಂಬೈ ಬಿಟ್ಟು ಹೋಗದಂತೆ ವರವರ ರಾವ್ ಅವರಿಗೆ ​ನಿರ್ದೇಶಿಸಿದೆ.
ಏನಿದು ಪ್ರಕರಣ?2017ರಲ್ಲಿ ಪುಣೆಯಲ್ಲಿ ನಡೆದ ಎಲ್ಗಾರ್ ಪರಿಷತ್ ಸಮಾವೇಶದಲ್ಲಿ ವರವರ ರಾವ್ ಪ್ರಚೋದನಕಾರಿ ಭಾಷಣ ಮಾಡಿದ್ದರು. ಇದರಿಂದ ಮರುದಿನ ಪಶ್ಚಿಮ ಮಹಾರಾಷ್ಟ್ರ ನಗರದ ಹೊರವಲಯದಲ್ಲಿರುವ ಭೀಮಾ ಕೋರೆಗಾಂವ್ ಯುದ್ಧ ಸ್ಮಾರಕದ ಬಳಿ ಹಿಂಸಾಚಾರ ಉಂಟಾಯಿತು ಎಂದು ಪೊಲೀಸರು ಹೇಳಿದ್ದಾರೆ. ಮಾವೋವಾದಿ ನಂಟು ಹೊಂದಿರುವವರು ಈ ಸಮಾವೇಶವನ್ನು ಆಯೋಜಿಸಿದ್ದರು ಎನ್ನುವುದು ಪೊಲೀಸರ ಆರೋಪ. ನಂತರ ಈ ಪ್ರಕರಣದ ತನಿಖೆಯನ್ನು ಎನ್‌ಐಎ ವಹಿಸಿಕೊಂಡಿತ್ತು.
2018ರ ಆಗಸ್ಟ್ 28ರಂದು ವರವರ ರಾವ್ ಅವರನ್ನು ಹೈದರಾಬಾದ್​ನಲ್ಲಿರುವ ಅವರ ನಿವಾಸದಿಂದ ಬಂಧಿಸಲಾಗಿತ್ತು. ಸುಪ್ರೀಕೋರ್ಟ್ ಆದೇಶದನ್ವಯ ವರವರ ರಾವ್ ಅವರನ್ನು ಮೊದಲಿಗೆ ಗೃಹ ಬಂಧನದಲ್ಲಿರಿಸಲಾಗಿತ್ತು. ಅದೇ ಸಾಲಿನ ನವೆಂಬರ್​ 17ರಂದು ಅವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು. ನಂತರ ತಲೋಜಾ ಜೈಲಿಗೆ ಹಾಕಲಾಗಿತ್ತು. 2021ರ ಫೆಬ್ರವರಿ 22ರಂದು ವೈದ್ಯಕೀಯ ಆಧಾರದ ಮೇಲೆ ಅವರಿಗೆ ಬಾಂಬೆ ಹೈಕೋರ್ಟ್ ಮಧ್ಯಂತರ ಜಾಮೀನು ನೀಡಿತ್ತು. ಆದರೆ ವೈದ್ಯಕೀಯ ಕಾರಣಗಳಿಂದ ಸಂಪೂರ್ಣವಾಗಿ ಜಾಮೀನು ನೀಡಬೇಕು ಎಂದು ಕೋರಿದ್ದ ಅವರ ಮನವಿಯನ್ನು ತಿರಸ್ಕರಿಸಲಾಗಿತ್ತು (ಏಜೆನ್ಸೀಸ್​)
ಡೆಂಘೆಯಿಂದ ಬೆಳಲಿ ಬೆಂಡಾದರೂ ಕ್ಯಾರೇ ಎನ್ನದ ‘ಇಂದಿರಾ ಗಾಂಧಿ’! ದೇಹಕ್ಕಷ್ಟೇ ಅನಾರೋಗ್ಯ ಎಂದ ನಟಿ

8ನೇ ಬಾರಿ ಸಿಎಂ ಖುರ್ಚಿಯಲ್ಲಿ ನಿತೀಶ್​: ಇವರ ರಾಜಕೀಯ ಇತಿಹಾಸವೇ ರೋಚಕ- ಇಂದು ಪ್ರಮಾಣ ವಚನ

ದೈಹಿಕ ಸಂಪರ್ಕ ಬೆಳೆಸಿ, ಧರ್ಮ ಬೇರೆ-ಮದ್ವೆ ಬೇಡ ಎಂದ ಯುವಕ ಪೀಸ್​ ಪೀಸ್​: ಮೃತದೇಹ ಸೂಟ್​ಕೇಸ್​ನಲ್ಲಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × five =
Remember me
