ನವದೆಹಲಿ:ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಕಾಯ್ದೆಗಳನ್ನು ರದ್ದು ಮಾಡುವಂತೆ ಕೋರಿ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಸಮಿತಿಯನ್ನು ರಚಿಸುವುದಾಗಿ ಸುಪ್ರೀಂಕೋರ್ಟ್​ ಹೇಳಿದೆ.
‘ ನಾವು ಸಮಿತಿಯೊಂದನ್ನು ರಚನೆ ಮಾಡುತ್ತಿದ್ದೇವೆ. ಆಗ ಮಾತ್ರ ಸಂಪೂರ್ಣ ಚಿತ್ರಣ ಸಿಗಲು ಸಾಧ್ಯ. ಖುದ್ದು ಪ್ರಧಾನಿಯರವೇ ರೈತರ ಬಳಿ ಹೋಗಿ ಮಾತನಾಡಿ ಎಂದು ನಾವು ಹೇಳುವುದಿಲ್ಲ. ಸಮಿತಿ ರಚನೆ ಮಾಡಿ ಅದರಲ್ಲಿ ಕೃಷಿ ಕಾಯ್ದೆಗೆ ಸಂಬಂಧಿಸಿದ ಸಾಧಕ ಬಾಧಕಗಳ ಚರ್ಚೆಯ ನಂತರ ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಮುಖ್ಯ ನ್ಯಾಯಮೂರ್ತಿ ಎಸ್​.ಎ.ಬೊಬ್ಡೆ ನೇತೃತ್ವದ ಪೀಠ​ ಹೇಳಿದೆ.
Farm laws: We are forming a committee so that we have a clearer picture. We don't want to hear arguments that farmers will not go to the committee. We are looking to solve the problem. If you (farmers) want to agitate indefinitely, you can do so, says CJIpic.twitter.com/FUCRgip8yW
— ANI (@ANI)January 12, 2021

ಇದೇ ವೇಳೆ ತನ್ನ ಮುಂದಿನ ಆದೇಶದವರೆಗೆ ಈ ಕಾಯ್ದೆಗಳನ್ನು ಜಾರಿಗೊಳಿಸದಂತೆ ಕೇಂದ್ರಕ್ಕೆ ಕೋರ್ಟ್​ ಸೂಚನೆ ನೀಡಿದೆ.
ಒಂದು ವೇಳೆ ಸಮಿತಿಯನ್ನು ರಚನೆ ಮಾಡಿದರೆ, ರೈತರು ಸಮಿತಿ ಮುಂದೆ ಬರದೇ ಇರಬಹುದು ಎಂದು ವಕೀಲರು ವಾದ ಮಂಡಿಸಿದರು. ಅದಕ್ಕೆ ನ್ಯಾಯಮೂರ್ತಿಗಳು, ಈ ವಾದಗಳೆಲ್ಲ ನಮಗೆ ಬೇಕಾಗಿಲ್ಲ. ನಾವು ಸಮಸ್ಯೆಯನ್ನು ಬಗೆಹರಿಸಲು ನೋಡುತ್ತಿದ್ದೇವೆ. ಒಂದು ವೇಳೆ ನೀವು (ರೈತರು) ಅನಿರ್ದಿಷ್ಟಾವಧಿ ಆಂದೋಲನ ಮುಂದುವರಿಸುವುದೇ ಆದರೆ, ನೀವು ಮುಂದುವರಿಸಬಹುದು, ಸಮಿತಿ ರಚನೆಯ ಕೆಲಸವನ್ನು ನಾವು ಮಾಡುತ್ತೇವೆ ಎಂದು ನ್ಯಾಯಮೂರ್ತಿಗಳು ಹೇಳಿದರು.
ಪ್ರತಿಭಟನೆ ನಡೆಸಲು ರಾಮಲೀಲಾ ಮೈದಾನವನ್ನು ನೀಡಲು ಸರ್ಕಾರಕ್ಕೆ ಅನುಮತಿ ನೀಡುವಂತೆ ಅರ್ಜಿದಾರರ ಪರ ವಕೀಲರು ಕೋರಿಕೊಂಡರು. ಅದಕ್ಕೆ ನ್ಯಾಯಮೂರ್ತಿಗಳು, ಒಂದು ವೇಳೆ ನಾವೇನಾದರೂ ಅಲ್ಲಿ ಪ್ರತಿಭಟನೆ ಮಾಡಲು ಅನುಮತಿ ಕೊಟ್ಟಿದ್ದೇ ಆದರೆ ಪ್ರತಿಭಟನೆಯ ಎಲ್ಲಾ ನಿಯಮಗಳನ್ನು ಪಾಲನೆ ಮಾಡುವುದಾಗಿ ಹೇಳಬೇಕು, ಅಲ್ಲಿಯ ಯಾವುದೇ ಆಸ್ತಿ ಪಾಸ್ತಿಗಳಿಗೆ ಹಾನಿ ಆಗದಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.
ವಿರಾಟ್​ ಕೊಹ್ಲಿ- ಅನುಷ್ಕಾ ಶರ್ಮಾ ಪಾಪುವಿನ ಪಾದ ಅದಲುಬದಲು- ಈ ಕಾಲು ಅದಲ್ಲ… ಅದು ಇದಲ್ಲ!

ಚಾಮರಾಜನಗರದ ಕಾಲೇಜಿಗೆ ಮತ್ತೆ ಎಂಟ್ರಿ ಕೊಟ್ಟ ಚಿರತೆ- ಕಿಟಕಿ ಒಳಗೆ ನುಗ್ಗಿರುವ ದೃಶ್ಯ ಸೆರೆ

ಪ್ರೀತಿ ಹೆಸರಲ್ಲಿ ಲೂಟಿಮಾಡಿ ಈಗ ನನಗೆ ಬೇಕಾದಷ್ಟು ಜನ ಇದ್ದಾರೆ ಎನ್ನುತ್ತಿದ್ದಾಳೆ- ಬರೀ ಗಂಡಿಗೇಕೆ ಶಿಕ್ಷೆ?

ಮತ್ತೆ ಮತ್ತೆ ಮರುಕಳಿಸುತ್ತಿದೆ ಘೋರ ದುರಂತ! ರಾಡ್​ ತೂರಿಸಿ ವಿಧವೆ ಮೇಲೆ ಗ್ಯಾಂಗ್​ರೇಪ್​!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:fourteen + 3 =
Remember me
