ನವದೆಹಲಿ:ಹಿಂದೂ ದೇವರ ಅವಹೇಳನ ಮಾಡಿದ್ದನ್ನು ವಿರೋಧಿಸಿ ಪ್ರವಾದಿ ಮೊಹಮ್ಮದ್​ ಕುರಿತಂತೆ ಹೇಳಿಕೆ ನೀಡಿ ವಿವಾದಕ್ಕೆ ಸಿಲುಕಿರುವ ಬಿಜೆಪಿ ನಾಯಕಿ ನೂಪುರ್ ಶರ್ಮಾ ಅವರಿಗೆ ಸುಪ್ರೀಂಕೋರ್ಟ್​ನಿಂದ ಬಿಗ್​ ರಿಲೀಫ್​ ಸಿಕ್ಕಿದೆ. ನೂಪುರ್ ಅವರನ್ನು ಬಂಧಿಸಲು ಪೊಲೀಸರಿಗೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸಲು ಕೋರ್ಟ್​ ತಿರಸ್ಕರಿಸಿದೆ.
ಹಿಂದೂ ದೇವರ ಅವಹೇಳನವನ್ನು ಸಹಿಸದೇ ನೂಪುರ್​ ಅವರು ಪ್ರವಾದಿ ಮೊಹಮ್ಮದ್​ ಕುರಿತು ನೀಡಿದ್ದ ಹೇಳಿಕೆ ಭಾರತದ ಒಂದು ವರ್ಗ ಹಾಗೂ ಹಲ ಮುಸ್ಲಿಂ ರಾಷ್ಟ್ರಗಳ ಕೆಂಗಣ್ಣಿಗೆ ಗುರಿಯಾಗಿದೆ. ಈ ಹೇಳಿಕೆ ಹಿಂಸಾಚಾರ ಸ್ವರೂಪವನ್ನೂ ಪಡೆದುಕೊಂಡಿದ್ದು, ಹಲವು ಕಡೆಗಳಲ್ಲಿ ಭಾರಿ ಪ್ರತಿಭಟನೆಗಳೂ ನಡೆದಿವೆ. ಈ ನಡುವೆಯೇ ಇವರನ್ನು ಬಂಧಿಸಲು ಆದೇಶಿಸುವಂತೆ ಕೋರಿ ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಲಾಗಿತ್ತು.
ಆದರೆ ಈ ಅರ್ಜಿಯನ್ನು ವಿಚಾರಣೆಗೆ ಅಂಗೀಕರಿಸಲು ಮುಖ್ಯ ನ್ಯಾಯಮೂರ್ತಿ ಯು.ಯು. ಲಲಿತ್ ನೇತೃತ್ವದ ಪೀಠ ನಿರಾಕರಿಸಿದೆ. ‘ನ್ಯಾಯಾಲಯವು ಯಾವುದೇ ಒಂದು ತೀರ್ಪನ್ನು ನೀಡುವಾಗ ದೂರಗಾಮಿ ಪರಿಣಾಮಗಳನ್ನೂ ಅವಲೋಕಿಸಬೇಕಾಗುತ್ತದೆ. ಅವರನ್ನು ಬಂಧಿಸಿ ಎಂದು ನೀವು ಸರಳವಾಗಿ ಹೇಳಿಬಿಟ್ಟರೆ ಆಗುವುದಿಲ್ಲ. ನಿಜವಾಗಿಯೂ ಆಗಿರುವುದೇನು? ಇಂಥ ಆದೇಶಗಳನ್ನು ಹೊರಡಿಸಿದರೆ ಅದರಿಂದ ಆಗುವ ಪರಿಣಾಮಗಳ ಬಗ್ಗೆಯೂ ಕೋರ್ಟ್​ ಯೋಚನೆ ಮಾಡಬೇಕಾಗುತ್ತದೆ’ ಎಂದು ನ್ಯಾಯಮೂರ್ತಿಗಳು ಹೇಳಿದರು.
ಆದ್ದರಿಂದ ಈ ಅರ್ಜಿಯನ್ನು ಸುಮ್ಮನೇ ಹಿಂದಕ್ಕೆ ಪಡೆದುಕೊಳ್ಳುವುದು ಉತ್ತಮ ಎಂದರು. ಇದಕ್ಕೆ ಅನುಮತಿ ನೀಡಿದ ಅರ್ಜಿದಾರರ ಪರ ವಕೀಲರು, ಅರ್ಜಿಯನ್ನು ಹಿಂದಕ್ಕೆ ಪಡೆದುಕೊಂಡರು. ಈ ಹಿನ್ನೆಲೆಯಲ್ಲಿ ಅರ್ಜಿಗೆ ಮಾನ್ಯತೆ ಇಲ್ಲ ಎಂದ ಕೋರ್ಟ್​ ಅದನ್ನು ವಜಾಗೊಳಿಸಿತು. (ಏಜೆನ್ಸೀಸ್​)
ಅವಳಿ ಮಕ್ಕಳಿಗೆ ಜನ್ಮ ನೀಡಿದ ಯುವತಿ, ಆದ್ರೆ ಅಪ್ಪ ಮಾತ್ರ ಬೇರೆ ಬೇರೆ… ಇದೆಂಥ ವಿಚಿತ್ರ ಅಂತೀರಾ?

ಎಲಿಜಬೆತ್ ಕಿರೀಟ ಅಲಂಕರಿಸಿದ್ದ ಕೊಹಿನೂರು ವಜ್ರದತ್ತ ಎಲ್ಲರ ಚಿತ್ತ! ಇದರ ಉತ್ತರಾಧಿಕಾರಿ ಇವರೇನಾ?

VIDEO: ವೇದಿಕೆ ಮೇಲೆ ನರ್ತಿಸುತ್ತಲೇ ಕುಸಿದು ಸಾವು: ಇದು ಕೂಡ ನೃತ್ಯದ ಭಾಗವೇ ಎಂದುಕೊಂಡ ಪ್ರೇಕ್ಷಕರು!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:19 − two =
Remember me
