ಕರಾಚಿ:ಭಾರತ ನಡೆಸಿರುವ ಸರ್ಜಿಕಲ್​ ಸ್ಟ್ರೈಕ್​ನಿಂದ ಕಂಗೆಟ್ಟು ಹೋಗಿದ್ದ ಪಾಕಿಸ್ತಾನಕ್ಕೆ ಇದೀಗ ಮತ್ತೊಂದು ಸರ್ಜಿಕಲ್​ ಸ್ಟ್ರೈಕ್​ ಎದುರಾಗಿದೆ. ಆದರೆ ಈ ಬಾರಿ ಇಂಥದ್ದೊಂದು ದಾಲಿ ನಡೆಸಿರುವುದು ಇರಾನ್​.
ಬಲೂಚಿಸ್ತಾನದಲ್ಲಿ ಇರಾನ್​ ಸರ್ಜಿಕಲ್ ಸ್ಟ್ರೈಕ್ ನಡೆಸಿದೆ. ತನ್ನ ಇಬ್ಬರು ಸೈನಿಕರನ್ನು ರಕ್ಷಿಸಲು ಇಂಥದ್ದೊಂದು ದಾಳಿ ನಡೆಸಿದೆ. ಪಾಕಿಸ್ತಾನದ ಅಬೋಟಾಬಾದ್ ಉಗ್ರರ ನೆಲೆ ಮೇಲೆ ಭಾರತ ಸರ್ಜಿಕಲ್ ದಾಳಿ ನಡೆಸಿದ ಮಾದರಿಯಲ್ಲಿಯೇ ಇರಾನ್​ ಇಂಥದ್ದೊಂದು ಕ್ರಮಕ್ಕೆ ಮುಂದಾಗಿದೆ.
ಜೈಷ್ ಉಲ್ ಅಡ್ಲ್ ಉಗ್ರರ ಮೇಲೆ ಈ ದಾಳಿ ನಡೆಸಿರುವ ಇರಾನ್​, ಉಗ್ರರ ವಶದಲ್ಲಿದ್ದ ನಮ್ಮ ಇಬ್ಬರು ಸೈನಿಕರನ್ನು ರಕ್ಷಣೆ ಮಾಡಿರುವುದಾಗಿ ಇರಾನ್ ಸರ್ಕಾರದಿಂದ ಅಧಿಕೃತ ಪ್ರಕಟಣೆ ಹೊರಡಿಸಲಾಗಿದೆ.
ಈ ದಾಳಿಯಿಂದ ಪಾಕಿಸ್ತಾನ ಕಂಗೆಟ್ಟು ಹೋಗಿದೆ. ಬುಧವಾರ ತಡರಾತ್ರಿ ನಡೆದಿರುವ ಈ ಕಾರ್ಯಾಚರಣೆಯಲ್ಲಿ ಹಲವಾರು ಪಾಕಿಸ್ತಾನಿ ಸೈನಿಕರು ಸತ್ತಿರುವುದಾಗಿ ಇರಾನ್​ ಹೇಳಿದೆ. ಉಗ್ರರಿಗೆ ರಕ್ಷಣೆ ನೀಡುತ್ತಿದ್ದ ಪಾಕಿಸ್ತಾನದ ಕೆಲವು ಸೈನಿಕರು ಸಾವಿಗೀಡಾಗಿದ್ದಾರೆ. ಸೈನಿಕರ ಬಿಡುಗಡೆ ಮಾಡಲಾಗಿದೆ ಎಂದು ಇರಾನ್ ಘೋಷಣೆ ಮಾಡಿದೆ.
ಎರಡೂವರೆ ವರ್ಷಗಳ ಹಿಂದೆ ಜೈಷ್ ಉಲ್ ಅಡ್ಲ್ ಸಂಘಟನೆಯು ಇರಾನ್​ನ ಗಡಿಭದ್ರತಾ ಪಡೆಯ ಕಾವಲುಗಾರರನ್ನು ಅಪಹರಿಸಿ ಒತ್ತೆಯಾಳುಗಳನ್ನಾಗಿ ಇಟ್ಟುಕೊಂಡಿತ್ತು. ಅವರನ್ನು ಬಿಡಿಸುವ ಉದ್ದೇಶದಿಂದ ಈ ಯಶಸ್ವಿ ಕಾರ್ಯಾಚರಣೆ ನಡೆಸಲಾಗಿದೆ ಎಂದು ಇರಾನ್ ಎಲೈಟ್ ರೆವಲೂಷನರಿ ಗಾರ್ಡ್ಸ್(ಐ.ಆರ್.ಜಿ.ಸಿ.) ಮಾಹಿತಿ ನೀಡಿದೆ.
ಭಾರತದ ವಿರುದ್ಧ ಷಡ್ಯಂತ್ರ ರಚನೆ- ಗ್ರೇಟಾ ಥನ್​ಬರ್ಗ್​ ಟ್ವೀಟ್​: ಟೂಲ್​​ಕಿಟ್​ ವಿರುದ್ಧ ಎಫ್​ಐಆರ್​

ಅಣ್ಣಾಮಲೈ ಜೀವಕ್ಕೆ ಆಪತ್ತು- ವೈ ಪ್ಲಸ್​ ಭದ್ರತೆ ಒದಗಿಸಿದ ಸರ್ಕಾರ

ಪ್ರೇಮಿಗಳ ದಿನ ಅದೃಷ್ಟಶಾಲಿ ಜೋಡಿಗೆ ಉಚಿತ ಡಿವೋರ್ಸ್​- ಹೊರಟಿದೆ ಸುತ್ತೋಲೆ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − 12 =
Remember me
