ದುಬೈ:ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಿನ್ನೆ (ಆ.31) ನಡೆದ ಏಷ್ಯಾಕಪ್- 2022 ನಲ್ಲಿ ಭಾರತವು ಹಾಂಗ್​ಕಾಂಗ್​ ಎದುರು 40 ರನ್​ಗಳ ಗೆಲುವು ಕಂಡಿದೆ. ಈ ಮೂಲಕ ಟೀಮ್ ಇಂಡಿಯಾ ಏಷ್ಯಾ ಕಪ್‌- 2022 ಟೂರ್ನಿಯ ‘ಎ’ ಗುಂಪಿನಲ್ಲಿ ಅಗ್ರಸ್ಥಾನದೊಂದಿಗೆ ಸೂಪರ್‌-4 ಹಂತಕ್ಕೆ ಅರ್ಹತೆ ಪಡೆದುಕೊಂಡಿದೆ.
ಕೇವಲ 22 ಎಸೆತಗಳಲ್ಲಿ 50 ರನ್​ ಗಳಿಸಿದ ಸೂರ್ಯಕುಮಾರ್​, ಒಟ್ಟು 26 ಎಸೆತಗಳಲ್ಲಿ ತಲಾ 6 ಫೋರ್‌ ಮತ್ತು ಸಿಕ್ಸರ್‌ಗಳೊಂದಿಗೆ ಅಜೇಯ 68 ರನ್‌ ಗಳಿಸಿದರು. ಐದು ಎಸೆತಗಳಲ್ಲಿ ನಾಲ್ಕು ಸಿಕ್ಸರ್​ ಬಾರಿಸುವ ಮೂಲಕ ನೂತನ ದಾಖಲೆ ಕೂಡ ಮಾಡಿದ್ದಾರೆ. ಜತೆಗೆ ಭಾರತದ ನಾಯಕ ರೋಹಿತ್ ಶರ್ಮಾ ದಾಖಲೆಯನ್ನು ಸರಿಗಟ್ಟಿದ್ದಾರೆ. ಟಿ-20 ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅತಿ ವೇಗವಾಗಿ ಅರ್ಧಶತಕ ಗಳಿಸಿದ ಭಾರತದ ಒಂಬತ್ತನೆ ಬ್ಯಾಟರ್ ಇವರಾಗಿದ್ದಾರೆ.
ಇನ್ನೊಂದೆಡೆ, ವಿರಾಟ್‌ ಕೊಹ್ಲಿ 44 ಎಸೆತಗಳಲ್ಲಿ 1 ಫೋರ್‌ ಮತ್ತು 3 ಸಿಕ್ಸರ್‌ಗಳೊಂದಿಗೆ ಅಜೇಯ 59 ರನ್‌ ಗಳಿಸಿದರು. ಪರಿಣಾಮ ಭಾರತ ತಂಡ 20 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 192 ರನ್ ಕಲೆಹಾಕಿತು.
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ಕೂಡಲೇ ವಿಕೆಟ್ ಕಳೆದುಕೊಂಡಿತು. ರೋಹಿತ್‌ ಶರ್ಮಾ 13 ಎಸೆತಗಳಲ್ಲಿ 21 ರನ್ ಬಾರಿಸುವಲ್ಲಷ್ಟೇ ಸಫಲರಾದರು. ಆದರೆ ಕೆ.ಎಲ್ ರಾಹುಲ್ ಆಮೆಗತಿಯ ಬ್ಯಾಟಿಂಗ್‌ನಿಂದಾಗಿ ಭಾರತ ರನ್‌ ಗಳಿಸಲು ಪರದಾಡಿತು. ರಾಹುಲ್ 39 ಎಸೆಗಳಲ್ಲಿ 2 ಸಿಕ್ಸರ್ ಸಿಡಿಸಿ 36 ರನ್ ಗಳಿಸಿ ಔಟಾದರು. ನಂತರ ಸೂರ್ಯಕುಮಾರ್​ ಹಾಗೂ ವಿರಾಟ್​ ಕೊಹ್ಲಿ ಅವರ ಬಿರುಸಿನ ಆಟದಿಂದ ಭಾರತ ಗೆಲುವು ಸಾಧಿಸಿತು. (ಏಜೆನ್ಸೀಸ್​)
ಇಲ್ಲಿದೆ ನೋಡಿ ವಿಡಿಯೋ:
https://twitter.com/Mahesh13657481/status/1565016820268109825
ಕಿಡ್ನಾಪರ್​ಗೆ ಕಾನೂನು ಸಚಿವ ಸ್ಥಾನ? ಸಂಕಷ್ಟದಲ್ಲಿ ನಿತೀಶ್​ ಸರ್ಕಾರ! ಅಧಿಕಾರ ಸ್ವೀಕಾರದ ಬೆನ್ನಲ್ಲೇ ರಾಜೀನಾಮೆ

ಸರ್ಕಾರದ ಸವಲತ್ತಿಗಾಗಿ ಮದ್ವೆಯಾಗಿ ಕಿರುಕುಳ: ಜಾತಿನಿಂದನೆಯಿಂದ ಬೇಸತ್ತು ತುಮಕೂರಿನ ಗೃಹಿಣಿ ಆತ್ಮಹತ್ಯೆ

ಕೆಎಸ್​ಆರ್​ಟಿಸಿ ಬಸ್​, 2 ಕಾರುಗಳ ನಡುವೆ ವಿಜಯಪುರದಲ್ಲಿ ಭೀಕರ ಅಪಘಾತ: ಹಬ್ಬದ ದಿನವೇ ಮೂವರ ಸಾವು

ವಾಣಿಜ್ಯ ಬಳಕೆಯ ಗ್ಯಾಸ್​ ಸಿಲಿಂಡರ್​ ಬೆಲೆಯಲ್ಲಿ ಪುನಃ ಇಳಿಕೆ: ಎಲ್ಲೆಲ್ಲಿ ಎಷ್ಟೆಷ್ಟು? ಇಲ್ಲಿದೆ ಮಾಹಿತಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three + 10 =
Remember me
