ಮುಂಬೈ:ಕಳೆದ ಜೂನ್​ ತಿಂಗಳಿನಲ್ಲಿ ತಮ್ಮ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡು ತಲ್ಲಣ ಸೃಷ್ಟಿಸಿದ್ದ ಬಾಲಿವುಡ್‌ ನಟ, ಸುಶಾಂತ್‌ ಸಿಂಗ್‌ ರಜಪೂತ್‌ ಅವರನ್ನು ಬಾಂಬೆ ಹೈಕೋರ್ಟ್​, ಪ್ರಕರಣವೊಂದರ ವಿಚಾರಣೆ ವೇಳೆ ತುಂಬಾ ಹೊಗಳಿದೆ.
ನಟ ಸುಶಾಂತ್​ ಸಿಂಗ್​, ಅವರು ತುಂಬಾ ಶಾಂತ, ಮುಗ್ಧ ಹಾಗೂ ಪ್ರಾಮಾಣಿಕ ವ್ಯಕ್ತಿಯಾಗಿದ್ದರು ಎಂದು ಕೋರ್ಟ್​ ಹೇಳಿದೆ. ’ಅವರ ಮುಖಚಹರೆಯೇ ಅವರು ಪ್ರಾಮಾಣಿಕ ಹಾಗೂ ಉತ್ತಮ ವ್ಯಕ್ತಿಯೆಂಬುದನ್ನು ತಿಳಿಸುತ್ತದೆ‘ ಎಂದು ನ್ಯಾಯಮೂರ್ತಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.
ಸುಶಾಂತ್‌ ನಟನೆಯ ’ಎಂ.ಎಸ್‌.ಧೋನಿ: ದಿ ಅನ್‌ಟೋಲ್ಡ್‌ ಸ್ಟೋರಿ’ ಸಿನಿಮಾದಲ್ಲಿ ಅವರ ನಟನೆಯನ್ನು ನೋಡಿದ್ದ ನ್ಯಾಯಮೂರ್ತಿ ಎಸ್‌.ಎಸ್‌.ಶಿಂಧೆ ನೇತೃತ್ವದ ಪೀಠ, ನಟನ ಕುರಿತು ಈ ವಿಚಾರವನ್ನು ಹೇಳಿದೆ.
ಸುಶಾಂತ್‌ ಅವರ ಸಹೋದರಿಯರಾದ ಪ್ರಿಯಾಂಕಾ ಸಿಂಗ್‌, ಮೀತು ಸಿಂಗ್‌ ಅವರು ತಮ್ಮ ವಿರುದ್ಧ ಸುಶಾಂತ್‌ ಗೆಳತಿ, ನಟಿ ರಿಯಾ ಚಕ್ರವರ್ತಿ ಹಾಕಿರುವ ಎಫ್‌ಐಆರ್‌ ರದ್ದುಗೊಳಿಸಲು ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಪೀಠ ನಡೆಸುತ್ತಿದೆ.
’ಸುಶಾಂತ್‌ ಸಿಂಗ್‌ ಅವರ ವೈದ್ಯಕೀಯ ದಾಖಲೆಗಳು ನಕಲಿಯಾಗಿದ್ದು, ಅವುಗಳನ್ನು ಬದಲಾಯಿಸಲಾಗಿದೆ ಎನ್ನುವುದು ರಿಯಾ ದೂರು. ಈ ಸಂಬಂಧ ಅವರು, ಸುಶಾಂತ್‌ ಸಹೋದರಿಯರು ಹಾಗೂ ದೆಹಲಿಯ ರಾಮ್‌ ಮನೋಹರ್‌ ಲೋಹಿಯಾ ಆಸ್ಪತ್ರೆಯ ವೈದ್ಯ ತರುಣ್‌ ಕುಮಾರ್‌ ವಿರುದ್ಧ ಬಾಂದ್ರಾ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಿದ್ದರು.
ಇದರ ಕುರಿತು ವಿಚಾರಣೆಯನ್ನು ಕೋರ್ಟ್​ ನಡೆಸುತ್ತಿದೆ. 34 ವರ್ಷದ ಸುಶಾಂತ್‌ ಕಳೆದ ಜೂನ್‌ 14ರಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸುಶಾಂತ್​ ಸಹೋದರಿಯರು ಸಲ್ಲಿಸಿರುವ ಅರ್ಜಿಯ ತೀರ್ಪನ್ನು ಕೋರ್ಟ್​ ಕಾಯ್ದಿರಿಸಿದೆ.
ನಿಮ್ಮ ಮೇಲೆ ಯಾವುದೇ ಕ್ಷಣ ಗುಂಡು ಹಾರಬಹುದು, ಎಲ್ಲವೂ ಸಿದ್ಧವಾಗಿದೆ: ಸಿಎಂಗೆ ಬಂತು ಬೆದರಿಕೆ ಪತ್ರ

ನಾಲ್ವರ ಸಾವಿನ ನಂತರ ಕೊನೆಗೂ ಒಲ್ಲದ ಮನಸ್ಸಿನಿಂದ ಸೋಲೊಪ್ಪಿಕೊಂಡ ಟ್ರಂಪ್!

ಲವ್​ ಜಿಹಾದಿಗಳ ನಂತರ ಕಲ್ಲು ತೂರಾಟಗಾರರಿಗೆ ನಡುಕ- ಜೀವಾವಧಿ ಶಿಕ್ಷೆಗೆ ನಿರ್ಧಾರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen + thirteen =
Remember me
