ಬಿಕಾನೇರ್ (ರಾಜಸ್ಥಾನ):ಈಗಿಗ ಪಾರಿವಾಳಗಳು ಎಲ್ಲೆಲ್ಲಿಂದಲೋ ಹಾರಿ ಬಂದು ನಿಗೂಢವಾಗಿ ತಿರುಗಾಡುವುದು ಸಾಮಾನ್ಯ ಎಂಬಂತಾಗಿದೆ. ಇಂಥದ್ದೇ ಒಂದು ಘಟನೆ ರಾಜಸ್ಥಾನದ ಬಿಕಾನೇರ್ ಜಿಲ್ಲೆಯ ಅಂತಾರಾಷ್ಟ್ರೀಯ ಗಡಿಯಲ್ಲಿ ನಡೆದಿದೆ.ಭಾರತದ ಗಡಿಯೊಳಕ್ಕೆ ನಿಗೂಢ ಎನಿಸುವ ರೀತಿಯಲ್ಲಿ ಪಾರಿವಾಳ ಹಾರಿ ಬಂದಿತ್ತು. ಅದನ್ನು ಗಮನಿಸಿದಾಗ ಪಾಕಿಸ್ತಾನದ ಪಾರಿವಾಳ ಎಂಬ ಶಂಕೆ ಮೂಡಿತ್ತು. ನಂತರ ಅದನ್ನು ಸೇನಾಧಿಕಾರಿಗಳು ಸೆರೆ ಹಿಡಿದು ನೋಡಿದಾಗ ಅದರ ಕುತ್ತಿಗೆ ಮತ್ತು ಒಂದು ಕಾಲಿಗೆ ಉಂಗುರ ಇತ್ತು. ಅದರಲ್ಲಿ ಒಂದು ಚೀಟಿ ಇತ್ತು. ಅದನ್ನು ನೋಡಲಾದ ಪಾಕಿಸ್ತಾನದ ಮೊಬೈಲ್​ ನಂಬರ್​ ಇರುವುದು ಕಂಡುಬಂದಿದೆ.ಮಹಾಜನ್ ಪೊಲೀಸ್ ಠಾಣಾ ವ್ಯಾಪ್ತಿಯ ತೇಜನ ಪ್ರದೇಶದ ಬಳಿ ಈ ಪಾರಿವಾಳ ಹಾರಾಟ ನಡೆಸುತ್ತಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ. ಪಾರಿವಾಳವನ್ನು ಮೊದಲ ಗ್ರಾಮಸ್ಥರು ನೋಡಿದ್ದಾರೆ. ಅದರಲ್ಲಿದ್ದ ಚೀಟಿ ಅವರ ಗಮನಕ್ಕೆ ಹೋಗಿ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.ಇದನ್ನು ಹಿಡಿಯುವಲ್ಲಿ ಸೇನೆಯ ನೆರವು ಪಡೆಯಲಾಗಿದ್ದು, ಅಂತೂ ಪಾರಿವಾಳ ಸೆರೆ ಸಿಕ್ಕಿತು. ನಂತರ ಅದನ್ನು ನೋಡಿದಾಗ ಪಾಕಿಸ್ತಾನದ ಮೊಬೈಲ್​ ನಂಬರ್​ ಕಂಡುಬಂದಿದೆ. ಮಹಾಜನ್ ಫೈರಿಂಗ್ ರೇಂಜ್​ನಲ್ಲಿ ಭದ್ರತಾ ಪಡೆಗಳು ಸಕ್ರಿಯವಾಗಿರುವುದರಿಂದ ಎಚ್ಚರಿಕೆ ನೀಡಲಾಗಿದೆ. ಭಾರತ-ಪಾಕಿಸ್ತಾನ ಗಡಿಯಲ್ಲಿ ಪಾರಿವಾಳಗಳು ಮತ್ತು ಪಾಕಿಸ್ತಾನದ ಸಂದೇಶಗಳಿರುವ ಬಲೂನುಗಳು ಕಂಡುಬಂದಿರುವ ಇಂತಹ ಅನೇಕ ಘಟನೆಗಳನ್ನು ಭದ್ರತಾ ಸಂಸ್ಥೆಗಳು ಈ ಹಿಂದೆಯೂ ವರದಿ ಮಾಡಿದ್ದವು ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ನಿಗೂಢ ಪಾರಿವಾಳದ ಬಗ್ಗೆ ಮಾಹಿತಿ ಕಲೆ ಹಾಕುವಲ್ಲಿ ಪೊಲೀಸರು ನಿರತರಾಗಿದ್ದಾರೆ.
13 ಸಾವಿರ ಕಿ.ಮೀ ಹಾರಿಬಂದ ‘ಜೋ ಬೈಡೆನ್‌‘ ಪಾರಿವಾಳಕ್ಕೆ ಮರಣದಂಡನೆ ಭೀತಿ!
ಪಾಕಿಸ್ತಾನದಿಂದ ಹಾರಿ ಬಂದು ಯೋಧನ ಮೇಲೆ ಕುಳಿತ ಪಾರಿವಾಳ! ಕಾಲಿನಲ್ಲಿ ನಿಗೂಢ ಸಂಖ್ಯೆಗಳು…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 − nine =
Remember me
