ತಿರುವನಂತಪುರ:ಕಳೆದೆರಡು ತಿಂಗಳಿನಿಂದ ಕೇರಳ ಮಾತ್ರವಲ್ಲದೇ ಇಡೀ ದೇಶವನ್ನೇ ತಲ್ಲಣಗೊಳಿಸಿರುವ ಚಿನ್ನದ ಸ್ಮಂಗ್ಲಿಂಗ್‌ ಕೇಸ್‌ನಲ್ಲಿ ಮಹತ್ವದ ಅಂಶವೊಂದು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಪತ್ತೆ ಹಚ್ಚಿದೆ. ಅದೇನೆಂದರೆ ಈ ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬಳಾಗಿರುವ ಸ್ವಪ್ನಾ ಸುರೇಶ್‌ ಜತೆ ಕೇರಳದ ಸಿಎಂ ಪಿಣರಾಯಿ ವಿಜಯನ್‌ಗೂ ಲಿಂಕ್‌ ಇರುವುದು ನಿಜ ಎಂದು ಎನ್‌ಐಎ ಹೇಳಿದೆ.
ಈ ಪ್ರಕರಣದ ತನಿಖೆಯ ವೇಳೆ ಕೇರಳದ ಬಹುಕೋಟಿ ಚಿನ್ನ ಕಳ್ಳಸಾಗಣೆ ಹಗರಣದ ರೂವಾರಿ ಸ್ವಪ್ನಾ ಸುರೇಶ್‌ ತನಗೆ ಮುಖ್ಯಮಂತ್ರಿ ಪಿಣರಾಯಿ ವಿಜಯ್‌ ಜತೆ ‘ಸಾಮಾನ್ಯ ಸಂಪರ್ಕ’ ಇರುವುದಾಗಿ ಎನ್‌ಐಎಎ ಹೇಳಿದ್ದು, ಈ ಕುರಿತು ರಾಷ್ಟ್ರೀಯ ತನಿಖಾ ದಳ ಕೋರ್ಟ್‌ಗೆ ಮಾಹಿತಿಗೆ ನೀಡಿದೆ.
ಸ್ವಪ್ನಾ ಮುಖ್ಯಮಂತ್ರಿ ಜತೆ ಸಂಪರ್ಕ ಇಟ್ಟುಕೊಂಡಿದ್ದಾಳೆ. ಇದರ ಜತೆಗೆ ಮುಖ್ಯಮಂತ್ರಿಗಳ ಮಾಜಿ ಪ್ರಧಾನ ಕಾರ್ಯದರ್ಶಿ ಎಂ.ಶಿವಶಂಕರ್‌ ಈಕೆಯ ಮಾರ್ಗದರ್ಶಕ ಎಂದೂ ತಿಳಿದುಬಂದಿದೆ. ಕೊಚ್ಚಿ ವಿಮಾನನಿಲ್ದಾಣದಲ್ಲಿ ಜು.5ರಂದು ಸ್ವಪ್ನಾ ತಂದಿದ್ದ ರಾಜತಾಂತ್ರಿಕ ಬ್ಯಾಗೇಜ್‌ನಲ್ಲಿ 30 ಕೆ.ಜಿ. ಅಕ್ರಮ ಚಿನ್ನ ಪತ್ತೆಯಾಗಿ ಜಪ್ತಿ ಮಾಡಿದಾಗ ಆಕೆ ತನ್ನ ನೆರವಿಗೆ ಬರುವಂತೆ ಶಿವಶಂಕರ್‌ ಅವರ ಫ್ಲ್ಯಾಟ್‌ಗೆ ಹೋಗಿ ಕೇಳಿದ್ದಳು. ಆದರೆ, ಶಿವಶಂಕರ್‌ ನೆರವು ನೀಡಿರಲಿಲ್ಲ ಎಂದು ಕೋರ್ಟ್‌ಗೆ ಎನ್‌ಐಎ ತಿಳಿಸಿದೆ.
ಏನಿದು ಪ್ರಕರಣ? ಈ ಲಿಂಕ್‌ ನೋಡಿ:ಈ ‘ಚಿನ್ನದ ರಾಣಿ’ಯ ಇತಿಹಾಸವೇ ರೋಚಕ; ಇವಳಿಂದ ಕೇರಳ ಸಿಎಂ ಕುರ್ಚಿ ಗಡಗಡ!
ತಿರುವನಂತಪುರದ ಯುಎಇ ದೂತಾವಾಸದಲ್ಲಿ ವ್ಯಕ್ತಿಯ ಹೆಸರನ್ನು ಬಳಸಿಕೊಂಡು ರಾಜತಾಂತ್ರಿಕ ಸಾಮಾನುಗಳ ಮೂಲಕ ಚಿನ್ನವನ್ನು ಕಳ್ಳಸಾಗಣೆ ಮಾಡಲು ಯತ್ನಿಸಿದ ಆರೋಪ ಸ್ವಪ್ನಾ ಸುರೇಶ್ ಮೇಲಿದೆ. ರಾಜತಾಂತ್ರಿಕ ರಕ್ಷಣೆ ಹೊಂದಿರುವ ‘ಡಿಪ್ಲೊಮ್ಯಾಟಿಕ್‌ ಬ್ಯಾಗೇಜ್‌’ನಲ್ಲಿ ಈ ಚಿನ್ನ ಸಿಕ್ಕಿತ್ತು. ಇದನ್ನು ವಿಮಾನ ನಿಲ್ದಾಣದ ಕಸ್ಟಮ್ಸ್‌ ಸಿಬ್ಬಂದಿ ವಶಪಡಿಸಿಕೊಂಡಿದ್ದರು.
ಇಷ್ಟೊಂದು ಭಾರಿ ಪ್ರಮಾಣದ ಚಿನ್ನ ಇಲ್ಲಿಗೆ ಹೇಗೆ ಬಂತು? ಅದೂ ರಾಜತಾಂತ್ರಿಕ ರಕ್ಷಣೆ ಹೊಂದಿರುವ ಡಿಪ್ಲೊಮ್ಯಾಟಿಕ್‌ ಬ್ಯಾಗೇಜ್‌ನಲ್ಲಿ ಇದು ಹೇಗೆ ಬಂತು ಎಂಬ ಬಗ್ಗೆ ತನಿಖೆ ನಡೆಯುತ್ತಿದ್ದ ಸಂದರ್ಭದಲ್ಲಿ ಇದರ ಹಿಂದಿರುವುದು ಮೊದಲು ಕೇಳಿಬಂದ ಹೆಸರು ಸ್ವಪ್ನಾ ಸುರೇಶ್‌. ಈ ಬಗ್ಗೆ ತನಿಖೆ ಕೈಗೊಂಡಾಗ ಚಿನ್ನದ ಸ್ಮಗ್ಲಿಂಗ್‌ನಲ್ಲಿ ಈಕೆಯ ಪಾಲು ದೊಡ್ಡದಿದೆ ಎಂದು ತಿಳಿದುಬಂದಿದೆ.
ಹಗರಣದಲ್ಲಿ ಕೇರಳದ ಮುಖ್ಯಮಂತ್ರಿ ಕೂಡ ಭಾಗಿಯಾದ್ದು, ಅವರು ರಾಜೀನಾಮೆ ನೀಡಬೇಕು ಎಂಬ ಪ್ರತಿಪಕ್ಷಗಳ ಕೂಗಿಗೆ ಮತ್ತಷ್ಟು ಬಲ ಬಂದಂತಾಗಿದೆ.
ಕುತೂಹಲ ಮೂಡಿಸುತ್ತಿದ್ದಾಳೆ ‘ಚಿನ್ನದ ರಾಣಿ’: ಐಎಎಸ್‌ ಅಧಿಕಾರಿ ತಲೆದಂಡ!

ಮಗಳಿಂದ ಅಮ್ಮ ಅರೆಸ್ಟ್‌: ಚಿನ್ನದ ರಾಣಿ ಸಿಕ್ಕಿಬಿದ್ದದ್ದೇ ರೋಚಕ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:1 × four =
Remember me
