ಬೆಂಗಳೂರು:ಆಹಾರ ವಿತರಿಸುವ ಸಂಸ್ಥೆಯಾದ ಸ್ವಿಗ್ಗಿಯ ಕೋರಿಯರ್​ ಸೇವೆ ಜೀನಿ ತಾತ್ಕಾಲಿಕವಾಗಿ ಸೇವೆಯನ್ನು ಸ್ಥಗಿತಗೊಳಿಸಿದೆ. ಬೆಂಗಳೂರು, ಮುಂಬೈ, ಹೈದರಾಬಾದ್ ಮಹಾನಗರಗಳಲ್ಲಿ ಈ ಸೇವೆ ಸ್ಥಗಿತವಾಗಿದೆ.
ಸಮಯಕ್ಕೆ ಸರಿಯಾಗಿ ಸೇವೆ ಸಲ್ಲಿಸುವಲ್ಲಿ ಹೆಸರುವಾಸಿಯಾಗಿರುವ ಸ್ವಿಗ್ಗಿ ಜೀನಿ ಇಂಥದ್ದೊಂದು ನಿರ್ಧಾರ ತೆಗೆದುಕೊಳ್ಳಲು ಕಾರಣ, ನೌಕರರ ಕೊರತೆ ಎನ್ನಲಾಗಿದೆ. ಈ ಕುರಿತು ಸ್ವಿಗ್ಗಿ ಜೀನಿ ತನ್ನ ಆ್ಯಪ್​ನಲ್ಲಿ ಮಾಹಿತಿಯನ್ನು ಹಂಚಿಕೊಂಡಿದೆ. ಕಾರ್ಯಾಚರಣೆಯ ಒತ್ತಡದಿಂದಾಗಿ ಸ್ವಲ್ಪ ಸಮಯದವರೆಗೆ ಈ ಸೇವೆಯನ್ನು ಒದಗಿಸಲಾಗುವುದಿಲ್ಲ ಎಂದು ಕಂಪೆನಿ ಹೇಳಿಕೊಂಡಿದೆ.
ಇದಾಗಲೇ ಒಂದು ವಾರದಿಂದ ಜೀನಿ ಕೆಲಸ ನಿರ್ವಹಿಸುತ್ತಿರಲಿಲ್ಲ. ಆದರೆ ಏನು ಆಯಿತು ಎಂದು ಜನರಿಗೆ ತಿಳಿದಿರಲಿಲ್ಲ. ಇದೀಗ ತನ್ನ ಆ್ಯಪ್​ನಲ್ಲಿಯೇ ಮಾಹಿತಿ ಹಂಚಿಕೊಳ್ಳುವ ಮೂಲಕ ಕಂಪೆನಿ ಜನರ ಕಳವಳಕ್ಕೆ ತೆರೆ ಎಳೆದಿದೆ.
ಸ್ವಿಗ್ಗಿ ಜೀನಿ ಇದಾಗಲೇ ದೇಶಾದ್ಯಂತ 68 ನಗರಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಈ ಪೈಕಿ ಬೆಂಗಳೂರು, ಮುಂಬೈ, ಹೈದರಾಬಾದ್ ಈ ಮೂರು ನಗರಗಳಲ್ಲಿ ತಾತ್ಕಾಲಿಕವಾಗಿ ಸೇವೆ ಸ್ಥಗಿತಗೊಳಿಸಿದೆ.
ಪಿಎಸ್​ಐ ಪರೀಕ್ಷೆ: ಗೋಲ್​ಮಾಲ್​ ದಂಪತಿ ಜೈಲಲ್ಲಿ ಭೇಟಿ- ಕಣ್ಣೀರ ಧಾರೆ, ಸಿಂಗಲ್​ ಸೆಲ್​ ಬೇಡ ಎಂದು ಅವಲತ್ತು

VIDEO: ಗ್ರಾಮಲೆಕ್ಕಾಧಿಕಾರಿ ಫುಲ್​ ಟೈಟ್​- ತಹಶೀಲ್ದಾರ್​ ಕಚೇರಿ ಎದುರೇ ಆಹಾ! ಎಂಥ ಸವಿ ನಿದ್ದೆ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten + thirteen =
Remember me
