ನವದೆಹಲಿ:ಅಕ್ಟೋಬರ್ 17 ರಿಂದ ನವೆಂಬರ್ 14ರವರೆಗೆ ಯುಎಇನಲ್ಲಿ ನಡೆಯಲಿರುವ ಪುರುಷರ ಟಿ20 ವಿಶ್ವಕಪ್ ಗೆದ್ದವರಿಗೆ ನೀಡುವ ಹಣವನ್ನು ಅಂತಾರಾಷ್ಟ್ರೀಯ ಕ್ರಿಕೆಟ್‌ ಮಂಡಳಿ (ಐಸಿಸಿ) ಘೋಷಣೆ ಮಾಡಿದೆ. ಐಸಿಸಿ ಹೇಳಿರುವ ಪ್ರಕಾರ, ವಿಜೇತ ತಂಡಕ್ಕೆ 1.6 ಮಿಲಿಯನ್ ಡಾಲರ್ (ಸುಮಾರು 12 ಕೋಟಿ ರೂಪಾಯಿ) ಬಹುಮಾನ ಸಿಗಲಿದೆ.
ರನ್ನರ್ಸ್ ಅಪ್ ತಂಡ ಇದರ ಅರ್ಧ ಭಾಗ ಅಂದರೆ ಸುಮಾರು 6 ಕೋಟಿ ರೂಪಾಯಿ ಹಾಗೂ ಸೋತ ಇಬ್ಬರು ಸೆಮಿ ಫೈನಲಿಸ್ಟ್‌ಗಳು ತಲಾ 4 ಲಕ್ಷ ಡಾಲರ್‌ (ಸುಮಾರು 3 ಕೋಟಿ ರೂಪಾಯಿ) ಬಹುಮಾನದ ಹಣವನ್ನು ಪಡೆಯುತ್ತಿದ್ದಾರೆ. ಜತೆಗೆ, ಸೂಪರ್ 12 ಹಂತದಲ್ಲಿ ಪ್ರತಿ ಗೆಲುವಿಗಾಗಿ ಐಸಿಸಿ ಬೋನಸ್ ಮೊತ್ತ ನೀಡಲಾಗುತ್ತದೆ. ಸೂಪರ್ 12 ಹಂತದಲ್ಲಿ ನಾಕ್ ಔಟ್ ಮಾಡುವ ತಂಡಗಳಿಗೆ ತಲಾ 70 ಸಾವಿರ ಡಾಲರ್ (ಸುಮಾರು 52 ಲಕ್ಷ ರೂ) ನೀಡಲಾಗುವುದು.
ಈ ಎಲ್ಲವನ್ನು ಒಟ್ಟುಗೂಡಿದರೆ ಟಿ20 ವಿಶ್ವಕಪ್‌ಗೆ 5.6 ಮಿಲಿಯನ್‌ ಡಾಲರ್‌ (ಸುಮಾರು 42 ಕೋಟಿ ರೂಪಾಯಿ) ಮೀಸಲು ಇಡಲಾಗಿದ್ದು, ಈ ಹಣವನ್ನು ವಿಶ್ವಕಪ್‌ನಲ್ಲಿ ಭಾಗವಹಿಸಲಿರುವ 16 ತಂಡಗಳಿಗೆ ನೀಡಲಾಗುತ್ತದೆ.
ಈ ಪಂದ್ಯದ ಮೊದಲ ರೌಂಡ್‌ನಲ್ಲಿ ಬಾಂಗ್ಲಾದೇಶ, ಐರ್ಲೆಂಡ್, ನಮೀಬಿಯಾ, ನೆದರ್ಲ್ಯಾಂಡ್ಸ್, ಒಮನ್, ಪಪುವಾ ನ್ಯೂ ಗಿನಿಯಾ, ಸ್ಕಾಟ್ಲೆಂಡ್ ಮತ್ತು ಶ್ರೀಲಂಕಾ ಭಾಗವಹಿಸಲಿದೆ. ಯುಎಇ ಮತ್ತು ಒಮನ್‌ನಲ್ಲಿ ನಡೆಯಲಿರುವ ಪಂದ್ಯಾವಳಿಯ ಸೂಪರ್ 12 ಹಂತಕ್ಕೆ ಆಫ್ಘಾನಿಸ್ತಾನ, ಆಸ್ಟ್ರೇಲಿಯಾ, ಇಂಗ್ಲೆಂಡ್, ಭಾರತ, ನ್ಯೂಜಿಲ್ಯಾಂಡ್, ಪಾಕಿಸ್ತಾನ, ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ಇವು ದೃಢೀಕೃತ ತಂಡಗಳಾಗಿವೆ.
ಇಂದಿನಿಂದ ಆನ್‌ಲೈನ್ ಗೇಮ್‌ ಬ್ಯಾನ್‌- ಸೆಲೆಬ್ರಿಟಿಗಳು ಕಾಣಿಸಿಕೊಳ್ತಿದ್ದ ಆ್ಯಪ್‌ಗಳೂ ಕ್ಲೋಸ್‌!

ಅಬ್ಬಾ…. ಐಪಿಎಲ್​ನಲ್ಲಿ ಎಂ.ಎಸ್​. ಧೋನಿಗೆ ಇಷ್ಟೊಂದು ಹಣ ಸಿಗ್ತಿದ್ಯಾ? ನಿಜಕ್ಕೂ ಅಚ್ಚರಿಪಡ್ತೀರಾ..!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven + 13 =
Remember me
