ಕಾಬೂಲ್ :ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರ ರಚನೆಯಾದ ಬೆನ್ನಲ್ಲೇ ಚೀನಾ ಸರ್ಕಾರವು ಅಫ್ಘಾನಿಸ್ತಾನಕ್ಕೆ 31 ಮಿಲಿಯನ್ ಡಾಲರ್ (ಸುಮಾರು 228 ಕೋಟಿ ರೂ.) ನೆರವು ಘೋಷಿಸಿದೆ.ಆಹಾರ ಧಾನ್ಯಗಳು, ಲಸಿಕೆ ದಾಸ್ತಾನು ಮತ್ತು ಔಷಧಿಗಳು ಸೇರಿದಂತೆ ತಾಲಿಬಾನ್‌ ಸರ್ಕಾರಕ್ಕೆ ಅಗತ್ಯ ಇರುವ ಎಲ್ಲಾ ಸೌಕರ್ಯಗಳನ್ನೂ ನೀಡಲಾಗುವುದು. 31 ಮಿಲಿಯನ್ ಡಾಲರ್ ಹಣಕಾಸಿನ ನೆರವು ನೀಡಲಾಗುತ್ತಿದೆ ಎಂದು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಹೇಳಿದ್ದಾರೆ.ಅಫ್ಘಾನಿಸ್ತಾನದ ಜತೆಗೆ ಮೈತ್ರಿ ಚೆನ್ನಾಗಿ ಇಟ್ಟುಕೊಳ್ಳುವ ಉದ್ದೇಶದಿಂದ ಈ ಹಣಕಾಸಿನ ನೆರವು ನೀಡಲಾಗುತ್ತಿದೆ. ಇದರ ಜತೆಗೆ 30 ಲಕ್ಷದಷ್ಟು ಕರೊನಾ ಲಸಿಕೆ ಡೋಸೇಜ್‌ಗಳನ್ನು ರವಾನಿಸಲಾಗುತ್ತಿದೆ. ಇದರ ಅಗತ್ಯ ಸದ್ಯ ಅಫ್ಘಾನ್‌ ಸರ್ಕಾರಕ್ಕೆ ಇದೆ ಎಂದು ವಾಂಗ್‌ ಯಿ ಮಾಹಿತಿ ನೀಡಿದ್ದಾರೆ. ದಕ್ಷಿಣ ಏಷ್ಯಾದ ರಾಷ್ಟ್ರಗಳೊಂದಿಗೆ ಕಳೆದ ಜುಲೈ ತಿಂಗಳಿನಲ್ಲಿ ಸ್ಥಾಪಿಸಲಾಗಿರುವ ತುರ್ತು ಮೀಸಲು ಅಡಿಯಲ್ಲಿ ಸಂಘರ್ಷಪೀಡಿತ ದೇಶಕ್ಕೆ ಪರಿಹಾರ ನೀಡುವುದು ನಮ್ಮ ಉದ್ದೇಶ. ಇದರ ಅಡಿಯಲ್ಲಿ ಪರಿಹಾರ ನೀಡಲಾಗುತ್ತಿದೆ ಎಂದರು.
ಮಂಗಳೂರಲ್ಲೊಂದು ವಿಚಿತ್ರ ‘ಜಿಹಾದ್‌’- ಮಗಳಿಗೆ ಪಾಠ ಕಲಿಸಲು 22 ವರ್ಷ ಕಾದು ಮೊಮ್ಮಗಳ ಧರ್ಮ ಬದಲಿಸಿದರು!
ತಾಲಿಬಾನಿಗಳ ಹಾದಿಯಲ್ಲಿ ಪಾಕಿಸ್ತಾನ- ಹೆಣ್ಣುಮಕ್ಕಳಿಗೆ ಶುರುವಾಯ್ತು ನಿಷೇಧಗಳ ಹೇರಿಕೆ…

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:20 − 13 =
Remember me
