ಕಾಬುಲ್‌:ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಅಟ್ಟಹಾಸ ಮಿತಿಮೀರಿದೆ. ಇದಾಗಲೇ ಮುಕ್ಕಾಲು ಪಾಲು ಅಫ್ಘಾನಿಸ್ತಾನವನ್ನು ತಮ್ಮ ತೆಕ್ಕೆಗೆ ಹಾಕಿಕೊಂಡಿರುವ ತಾಲಿಬಾನಿಗಳ ಕ್ರೌರ್ಯ ಮಿತಿಮೀರುತ್ತದೆ. ಮಕ್ಕಳು, ಮಹಿಳೆಯರ ಮೇಲೆ ದೌರ್ಜನ್ಯ ನಡೆಸುತ್ತಿರುವುದು ಒಂದೆಡೆಯಾದರೆ, ಇಸ್ಲಾಂ ಕಟ್ಟಳೆಗಳನ್ನು ಜನರ ಮೇಲೆ ಹೇರಿ ಕ್ರೌರ್ಯ ಮೆರೆಯುತ್ತಿದ್ದಾರೆ.
ಅಮೆರಿಕ ಸೇನೆ ಹಾಗೂ ನ್ಯಾಟೊ ಪಡೆಗಳು ಅಫ್ಘಾನಿಸ್ತಾನದಿಂದ  ಹೊರನಡೆದ ನಂತರ ಅಲ್ಲಿ ಮತ್ತೆ ತಾಲಿಬಾನಿಗಳು ಪ್ರಾಬಲ್ಯ ಮೆರೆಯುತ್ತಿದ್ದಾರೆ. ಇಸ್ಲಾಂ ಮೂಲಭೂತವಾದವನ್ನು ಜನರ ಮೇಲೆ ಹೇರಿ ಇಡೀ ದೇಶದಲ್ಲಿ ತಮ್ಮದೇ ಸರ್ಕಾರ ರಚಿಸಲು ಮುಂದಾಗಿದ್ದಾರೆ. ಇದರಿಂದ ಜನರ ಮೇಲಿನ ದೌರ್ಜನ್ಯ ಹೆಚ್ಚಾಗಿದೆ.ಅಂಥದ್ದೇ ಒಂದು ಘಟನೆಯ ವಿಡಿಯೋ ಇದೀಗ ವೈರಲ್‌ ಆಗಿದ್ದು, ಅವರ ಕ್ರೌರ್ಯಕ್ಕೆ ಸಾಕ್ಷಿಯಾಗಿದೆ. ಅಫ್ಘಾನಿಸ್ಥಾನದ ಜನಪ್ರಿಯ ಹಾಸ್ಯನಟರಾಗಿದ್ದ ಖಾಶಾ ಜ್ವಾನ್‌ (ನಜರ್ ಮೊಹಮ್ಮದ್) ಅವರನ್ನು ತಾಲಿಬಾನಿಗಳು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಇಸ್ಲಾಂ ನಿಯಮಗಳನ್ನು ಖಾಶಾ ಉಲ್ಲಂಘಿಸಿ ಜನರನ್ನು ನಗಿಸುತ್ತಿದ್ದಾರೆ ಎನ್ನುವುದು ಇವರ ಮಾತು! ಆದ್ದರಿಂದ ಅವರನ್ನು ಗುಂಡಿಕ್ಕಿ ಕೊಂದಿದ್ದಾರೆ.ಕಂದಹಾರ್ ಪ್ರದೇಶದ ತಮ್ಮ ಮನೆಯಿಂದ ಹೊರಗೆ ನಡೆದುಕೊಂಡು ಹೋಗುವಾಗ ಖ್ವಾಶಾ ಅವರನ್ನು ತಾಲಿಬಾನಿಗಳು ಅಪಹರಿಸಿದ್ದು, ಕಾರಿನಲ್ಲಿ ಕರೆದುಕೊಂಡು ಹೋಗಿದ್ದಾರೆ. ‘ಇಸ್ಲಾಂನಲ್ಲಿ ಹುಟ್ಟಿ ನೀನು ಜನರನ್ನು ನಗಿಸುವ ಕೆಲಸ ಮಾಡುತ್ತಿಯಾ’ ಎಂದು ಕಪಾಳಕ್ಕೆ ಹೊಡೆದಿದ್ದಾರೆ. ಇಷ್ಟು ವಿಡಿಯೋದಲ್ಲಿ ನೋಡಬಹುದು. ನಂತರ ಕಾರಿನಿಂದ ಹೊರಗೆಳೆದು ಅವರನ್ನು ಗುಂಡಿಕ್ಕಿ ಕೊಂದಿದ್ದಾರೆ.
ಈ ಘಟನೆ ಕಳೆದ ಗುರುವಾರ ರಾತ್ರಿ ನಡೆದಿದೆ. ತಮ್ಮ ಮೇಲಿನ ಆರೋಪವನ್ನು ತಾಲಿಬಾನಿಗಳು ನಿರಾಕರಿಸಿದ್ದಾರೆ ಎನ್ನಲಾಗಿದೆ.
ಈ ವೈರಲ್‌ ವಿಡಿಯೋ ನೋಡಿ:
This video shows the moment, Kandahari comedian, Khasha was arrested by the Taliban, Slapping him inside the car and then killed him.pic.twitter.com/E642Y52uto— Tajuden Soroush (@TajudenSoroush)July 27, 2021
This video shows the moment, Kandahari comedian, Khasha was arrested by the Taliban, Slapping him inside the car and then killed him.pic.twitter.com/E642Y52uto

ರೇಪ್‌ ಕೇಸ್‌ನಲ್ಲಿ ಜೈಲುಪಾಲಾದ ಪ್ರೇಮಿಗಾಗಿ ಮೂರು ವರ್ಷ ಮೌನ ತಾಳಿ ಕೋರ್ಟ್‌ ಮನ ಗೆದ್ದ ಬಾಲಕಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six + 2 =
Remember me
