ಕಾಬುಲ್:ಅಫ್ಘಾನಿಸ್ಥಾನವನ್ನು ಸಂಪೂರ್ಣವಾಗಿ ವಶಪಡಿಸಿಕೊಂಡ ನಂತರ ಅಟ್ಟಹಾಸ ಮೆರೆಯುತ್ತಿರುವ ತಾಲಿಬಾನಿಗಳು ಮಾಡಿರುವ ನಿಯಮ ಕಾನೂನುಗಳಿಗೆ ಲೆಕ್ಕವೇ ಇಲ್ಲ. ತೀರಾ ಚಿತ್ರ ವಿಚಿತ್ರ ಎನಿಸುವಂಥ ಕಾನೂನು ಮಾಡಿದ್ದು, ಇದಂತೂ ಮಹಿಳೆಯರ ಪಾಲಿಗೆ ನುಂಗಲಾರದ ತುತ್ತಾಗಿದೆ.ಇದಾಗಲೇ ಹೆಣ್ಣುಮಕ್ಕಳು ಒಂಟಿಯಾಗಿ ಹೊರಕ್ಕೆ ಹೋಗಬಾರದು. ಅಡಿಯಿಂದ ಮುಡಿಯವರೆಗೆ ಕಣ್ಣು ಕೂಡ ಕಾಣದಂಥ ಸಡಿಲವಾದ ಉಡುಪು ಧರಿಸಿರಬೇಕು. ಉದ್ಯೋಗ ಮಾಡಿದರೆ ಅಂಥವರನ್ನು ಸ್ಥಳದಲ್ಲಿಯೇ ಗುಂಡಿಕ್ಕಿ ಕೊಲ್ಲಲಾಗುವುದು ಇತ್ಯಾದಿಯಾಗಿ ಆದೇಶ ಮಾಡಿ ಇದಾಗಲೇ ನೂರಾರು ಮಂದಿ ಹೆಣ್ಣುಮಕ್ಕಳ ಪ್ರಾಣವನ್ನು ತೆಗೆದಿರುವ ಈ ಕೀಚಕರು ಇದೀಗ ಹೊಸದೊಂದು ರೂಲ್ಸ್‌ ಮಾಡಿದ್ದಾರೆ.ಅದೇನೆಂದರೆ ಹೆಣ್ಣುಮಕ್ಕಳ ದನಿ ಕೂಡ ಕೇಳಬಾರದು ಎನ್ನುವ ಕಾನೂನು ಇದು. ಅದೇನೆಂದರೆ ಹೆಣ್ಣುಮಕ್ಕಳು ಸಂಗೀತ ಹೇಳಬಾರದು, ಟಿವಿ ಮತ್ತು ರೇಡಿಯೋಗಳಲ್ಲಿ ಮಹಿಳೆಯರ ಧ್ವನಿ ಪ್ರಸಾರ ಮಾಡಬಾರದು ಎನ್ನುವುದು ಈ ಕಾನೂನು. ಇದಾಗಲೇ ಟಿವಿ ಅಥವಾ ರೇಡಿಯೋಗಳಲ್ಲಿ ಹೆಣ್ಣುಮಕ್ಕಳ ಕಾರ್ಯಕ್ರಮ ಇರುವ ವಿಡಿಯೋ ಮಾಡಿದ್ದರೆ ಇನ್ನುಮುಂದೆ ಬಿಲ್‌ಕುಲ್‌ ಅವುಗಳನ್ನು ಪ್ರಸಾರ ಮಾಡುವಂತಿಲ್ಲ ಎಂದು ಕಟ್ಟಾಜ್ಞೆ ಹೊರಟಿದೆ.ಸದ್ಯ ಅಫ್ಘಾನಿಸ್ಥಾನದ ಕಂದಹಾರ್ ಪ್ರಾಂತ್ಯದಲ್ಲಿ ಈ ಆದೇಶ ಹೊರಟಿದ್ದು, ಇದು ಶೀಘ್ರವೇ ಎಲ್ಲೆಡೆ ವಿಸ್ತರಿಸುವುದಾಗಿ ಹೇಳಿದೆ. ಆಗಸ್ಟ್ 15 ರಂದು ತಾಲಿಬಾನ್ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡ ನಂತರ ಕೆಲವು ಮಾಧ್ಯಮಗಳು ತಮ್ಮ ಮಹಿಳಾ ಆ್ಯಂಕರ್‌ಗಳನ್ನು ತೆಗೆದುಹಾಕಿದ ನಂತರ ಈ ಬೆಳವಣಿಗೆ ನಡೆದಿದೆ. ಇನ್ನು ಮುಂದೆ ಇಲ್ಲಿಯ ಮಹಿಳೆಯರು ಉಸಿರಾಡುವುದಕ್ಕೂ ನಿರ್ಬಂಧ ವಿಧಿಸಿದರೆ ಅಚ್ಚರಿಯಿಲ್ಲ ಎನ್ನುವ ಮಾತುಗಳು ಕೇಳಿಬರುತ್ತಿವೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 + 6 =
Remember me
