ಕಾಬುಲ್:ಇಡೀ ಅಫ್ಘಾನಿಸ್ತಾನದ ಮೇಲೆ ಜಯ ಸಾಧಿಸಿ ಹೆಮ್ಮೆ ಪಡುತ್ತಾ ರಕ್ತದೋಕುಳಿ ಹರಿಸಿರುವ ತಾಲಿಬಾನಿಗಳಿಗೆ ಇದಾಗಲೇ ಇಲ್ಲಿಯ ಪುಟ್ಟ ನಗರ ಪಂಜ್‌ಶೀರ್‌ ಬೆವರು ಇಳಿಸುತ್ತಿದೆ. ಇದುವರೆಗೆ ಈ ಒಂದು ಪ್ರಾಂತ್ಯವನ್ನು ವಶಕ್ಕೆ ಪಡೆದುಕೊಳ್ಳಲು ಸಾಧ್ಯವಾಗಲೇ ಅದರ ಮೇಲೆ ಹೋರಾಟ ನಡೆಸುತ್ತಿದ್ದಾರೆ ತಾಲಿಬಾನಿಗಳು.
ಇದಾಗಲೇ ಹಲವಾರು ತಾಲಿಬಾನಿ ರಕ್ಕಸರನ್ನು ಹೊಡೆದುರುಳಿಸಿರುವ ಪಂಜ್‌ಶೀರ್‌ ಸೈನಕರು ಇದೀಗ 41 ಮಂದಿಯನ್ನು ಹತ್ಯೆ ಮಾಡಿದ್ದಾರೆ. 21 ಉಗ್ರರನ್ನು ಸೆರೆ ಹಿಡಿಯಲಾಗಿದೆ.ನಿಮಗೆ ಪಂಜ್‌ಶೀರ್‌ ಪ್ರಾಂತ್ಯದ ಒಳಗೆ ಬರಲು ಬಿಡುತ್ತೇವೆ. ಆದರೆ ಹೊರಗೆ ಹೋಗಲು ಬಿಡುವುದಿಲ್ಲ ಎಂದು ಉತ್ತರ ಮೈತ್ರಿ ಪಡೆಯ ಕಮಾಂಡರ್ ಹಸೀಬ್ ಘೋಷಣೆ ಕೂಗುತ್ತಲೇ ಎಲ್ಲರನ್ನೂ ಹೊಡೆದುರುಳಿಸುತ್ತಿದ್ದಾರೆ.
ಈ ಬಗ್ಗೆ ಅಫ್ಘಾನಿಸ್ತಾನದ ಮಾಜಿ ಮಿಲಿಟರಿ ಕಮಾಂಡರ್ ಹಾಗೂ ತಾಲಿಬಾನ್ ವಿರೋಧಿ ಆಂದೋಲನವನ್ನು ಮುನ್ನಡೆಸುತ್ತಿರುವ ಅಹಮದ್ ಮಸೂದ್ ಅವರ ವಕ್ತಾರ ಫಹೀಮ್ ಡಶ್ಟಿ ಕೂಡ ಸ್ಪಷ್ಟನೆ ನೀಡಿದ್ದಾರೆ. ತಾಲಿಬಾನಿಗಳುಹಲವು ಭಾಗಗಳಿಂದ ಪಂಜ್​ಶೀರ್ ಕಣಿವೆ ಮೇಲೆ ದಾಳಿ ನಡೆಸಿದ್ದರು. ಆದರೆ, ಅವರನ್ನು ಒಳಗೆ ಪ್ರವೇಶಿಸಲು ನಿಗ್ರಹ ಪಡೆ ಅವಕಾಶ ನೀಡಿಲ್ಲ. ಈ ವೇಳೆ ತಾಲಿಬಾನ್ ಉಗ್ರರು ಸಾಕಷ್ಟು ಸುತ್ತು ಗುಂಡು ಹಾರಿಸಿದ್ದಾರೆ. ಈ ಘಟನೆಯಿಂದ ಎರಡೂ ಕಡೆಯವರಿಗೆ ಸಾಕಷ್ಟು ಗಾಯಗಳಾಗಿವೆ. ಆದರೂ ತಾಲಿಬಾನ್ ಪಡೆಯನ್ನು ಹಿಮ್ಮೆಟ್ಟಿಸಲಾಗಿದ್ದು, 41 ಮಂದಿಯನ್ನು ಹತ್ಯೆ ಮಾಡಿದ್ದೇವೆ ಎಂದಿದ್ದಾರೆ.
VIDEO: ಯೋಧನಿಗೆ ನೇಣುಬಿಗಿದು ಹೆಲಿಕಾಪ್ಟರ್‌ಗೆ ಕಟ್ಟಿ ಹಾರಿಸಿದ್ರಾ ತಾಲಿಬಾನಿಗಳು: ಫ್ಯಾಕ್ಟ್‌ ಚೆಕ್‌ ಏನು ಹೇಳಿದೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 4 =
Remember me
