ಕಾಬುಲ್​:ಅಫ್ಘಾನಿಸ್ತಾನವನ್ನು ಸಂಪೂರ್ಣ ವಶಪಡಿಸಿಕೊಂಡ ನಂತರ ತಾಲಿಬಾನ್​ಗಳ ಹುಚ್ಚಾಟ ಮುಂದುವರೆದಿದೆ. ಚಿತ್ರ ವಿಚಿತ್ರವಾಗಿ ವರ್ತಿಸುತ್ತಿರುವ ತಾಲಿಬಾನ್​ಗಳು ಇದೀಗ ತಮ್ಮ ಆಡಳಿತವನ್ನು ಶುರು ಮಾಡಿದ್ದಾರೆ.ಒಂದೆಡೆ ಗನ್​ ಹಿಡಿದುಕೊಂಡು ಟ್ರಾಫಿಕ್​ ಕಂಟ್ರೋಲ್​ ಮಾಡುತ್ತಾ ಟ್ರಾಫಿಕ್​ ಪೊಲೀಸ್​ ಆಗಿದ್ದರೆ, ಇನ್ನೊಂದೆಡೆ ಕೈಯಲ್ಲಿ ಮೈಕ್​ ಹಿಡಿದು ಜರ್ನಲಿಸ್ಟ್​ ಆಗಿರುವ ತಾಲಿಬಾನಿಗಳು, ಇಂದಿನ ಪರಿಸ್ಥಿತಿಯ ಬಗ್ಗೆ ಜನಸಾಮಾನ್ಯರಲ್ಲಿ ಪ್ರಶ್ನೆ ಮಾಡುತ್ತಿದ್ದಾರೆ.
ಇದೂ ಸಾಲದು ಎಂಬಂತೆ ಲೇಡಿ ಆ್ಯಂಕರ್​ಗಳು ಯಾವ ದೇಶದವರೇ ಆಗಿದ್ದರೂ ಅವರಿಗೆ ಹಿಜಾಬ್​ (ಬುರ್ಖಾ) ಕಡ್ಡಾಯವಾಗಿದೆ. ಇದಾಗಲೇ ಬುರ್ಖಾ ಹಾಕದ ಮಹಿಳೆಯನ್ನು ಶೂಟ್​ಔಟ್​ ಮಾಡಿರುವ ಉಗ್ರರು, ನೌಕರಿಗೆ ಹೋಗಲು ಮಹಿಳೆಯರಿಗೆ ನಿರ್ಬಂಧ ಹೇರಿದ್ದಾರೆ. ಆದರೆ ಕೆಲವು ಮಹಿಳಾ ಪತ್ರಕರ್ತರಿಗೆ ಅವಕಾಶವನ್ನು ಕಲ್ಪಿಸಿಕೊಟ್ಟಿದ್ದಾರೆ.
ಈ ಉಗ್ರರ ನಡುವೆ ಧೈರ್ಯದಿಂದ ಮುನ್ನುಗ್ಗಿ ವರದಿ ಮಾಡುತ್ತಿರುವ ಸಿಎನ್​ಎನ್​ ಇಂಗ್ಲಿಷ್​ ಚಾನೆಲ್​ನ ವರದಿಗಾರ್ತಿ ಕ್ಲಾರಿಸ್ಸಾ ವಾರ್ಡ್​ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಈ ದೇಶದಲ್ಲಿ ಈಗ ಮಹಿಳಾ ವರದಿಗಾರರು ಆಗುವುದು ಹೇಗೆ ಎಂದು ಹೇಳಿಕೊಂಡಿರುವ ಕ್ಲಾರಿಸ್ಸಾ, ತಾವು ಈಗ ಹಿಜಾಬ್​ ಧರಿಸುತ್ತಿರುವುದಾಗಿ ಮಾತನಾಡಿದ್ದಾರೆ.
ತಾಲಿಬಾನಿಗಳು ಅಫ್ಘಾನಿಸ್ತಾನದ ರಾಜಧಾನಿ ಕಾಬುಲ್​ಗೆ ನುಗ್ಗುತ್ತಿರುವ ಸಮಯದಲ್ಲಿಯೇ ಹಿಜಾಬ್​ ಧರಿಸಿ ಅದನ್ನು ವರದಿ ಮಾಡಿರುವ ದಿಟ್ಟೆ ಇವರು. ಅಮೆರಿಕದ ರಾಯಭಾರ ಕಚೇರಿ ಎದುರು ನಿಂತು ತಾಲಿಬಾನಿಗಳು ವಿಜಯ ಘೋಷಿಸುತ್ತಿರುವ ಸಮಯದಲ್ಲಿ ಅಲ್ಲಿಯೇ ನಿಂತು ಇವರು ವರದಿ ಮಾಡಿದ್ದಾರೆ. ಸುರಕ್ಷತೆ ದೃಷ್ಟಿಯಿಂದ ನಾನು ಹಿಜಾಬ್​ ಧರಿಸಿದ್ದೇನೆ. ಬೀದಿಗಳಲ್ಲಿ ಬಂದೂಕು ಹಿಡಿದಿರುವ ತಾಲಿಬಾನಿಗಳು ಬಿಟ್ಟರೆ ಮಹಿಳೆಯರು ಒಬ್ಬರೂ ಕಾಣುತ್ತಿಲ್ಲ ಎಂದು ವರದಿ ಮಾಡಿದ್ದಾರೆ. ಈ ವರದಿಗಾರ್ತಿಯ ದಿಟ್ಟತನಕ್ಕೆ ಜಗತ್ತಿನಾದ್ಯಂತ ಮೆಚ್ಚುಗೆ ವ್ಯಕ್ತವಾಗಿದ್ದು, ಈಕೆ ಸಾಮಾನ್ಯ ಹೆಣ್ಣಲ್ಲ ಎಂದು ಶ್ಲಾಘನೆಗಳ ಮಹಾಪೂರವೇ ಹರಿದುಬಂದಿದೆ.
ಇಲ್ಲಿದೆ ನೋಡಿ ತಾಲಿಬಾನಿಗಳ ಹುಚ್ಚಾಟ:


ಉಗ್ರರ ನಡುವೆ ಪತ್ರಕರ್ತೆಯ ವಿಡಿಯೋ ಇಲ್ಲಿದೆ ನೋಡಿ:
Same country, same journalist, one day difference#Afghanistan#AfganistanWomenpic.twitter.com/mvKQzE1sIr
CNN's@clarissawardreports on what Afghanistan looks like as the Taliban take over.https://t.co/pJuaHC3iBCpic.twitter.com/zx9shFE8Lj
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three + 19 =
Remember me
