ಕಾಬುಲ್:ಸದ್ಯ ಅಫ್ಘಾನಿಸ್ತಾನದಲ್ಲಿ ಅಟ್ಟಹಾಸ ಮೆರೆಯುತ್ತಿರುವ ತಾಲಿಬಾನಿಗಳ ಕುರಿತಾಗಿ ಕೆಲವೊಂದು ನಂಬಲಸಾಧ್ಯ ಎನ್ನುವಂಥ ಘಟನೆಗಳು ಹೊರಬರುತ್ತಿವೆ. ಅಲ್ಲಿಂದ ತಪ್ಪಿಸಿಕೊಂಡು ಬಂದವರ ಪೈಕಿ ಹಲವರು ತಾಲಿಬಾನಿಗಳ ಭಯಾಕರ ಕ್ರೌರ್ಯದ ಕುರಿತಂತೆ ಮಾತನಾಡುತ್ತಿದ್ದಾರೆ.ಪೊಲೀಸ್ ಪಡೆಯಲ್ಲಿ ಕೆಲಸ ಮಾಡುತ್ತಿದ್ದ ಮುಸ್ಕಾನ್ ಎನ್ನುವವರು ಇಂಥದ್ದೊಂದು ಭಯಾನಕ ಘಟನೆಯನ್ನು ವಿವರಿಸಿದ್ದಾರೆ. ಸದ್ಯ ಭಾರತದಲ್ಲಿ ಆಶ್ರಯ ಪಡೆಯುತ್ತಿರುವ ಮುಸ್ಕಾನ್‌ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ತಾಲಿಬಾನಿಗಳು ನಮ್ಮ ದೇಶವನ್ನು ಅತಿಕ್ರಮಿಸಿಕೊಂಡಾಗ ಪ್ರತಿ ಪ್ರಜೆಗಳು ಅದರಲ್ಲಿಯೂ ಹೆಣ್ಣುಮಕ್ಕಳು ಪಟ್ಟ ನರಕ ಅಷ್ಟಿಷ್ಟಲ್ಲ. ಪ್ರತಿ ಮನೆಗೂ ನುಗ್ಗಿದ ಅವರು ಒಬ್ಬ ಹುಡುಗಿಯನ್ನಾದರೂ ಎಳೆದುಕೊಂಡು ಹೋಗುತ್ತಿದ್ದರು. ಅದಕ್ಕೆ ಪ್ರತಿರೋಧ ಒಡ್ಡಿದವರನ್ನು ಹಿಂದೆ ಮುಂದೆ ನೋಡದೇ ಗುಂಡಿಕ್ಕಿ ಕೊಂದಿದ್ದಾರೆ.ತಾಲಿಬಾನಿಗಳು ಮೃತ ದೇಹಗಳ ಮೇಲೂ ಅತ್ಯಾಚಾರ ಮಾಡುವುದನ್ನು ಕಣ್ಣಾರೆ ಕಂಡಿದ್ದೇನೆ. 10-12 ವರ್ಷದ ಹೆಣ್ಣುಮಕ್ಕಳನ್ನೂ ಹೊತ್ತುಕೊಂಡು ಹೋಗಿ ಅತ್ಯಾಚಾರ ಮಾಡಿದರು. ಅವರು ಸತ್ತಿದ್ದಾರೋ, ಇಲ್ಲವೋ ನೋಡದೇ ಅತ್ಯಾಚಾರ ಮುಂದುವರಿಸಿದ್ದಾರೆ. ಸತ್ತ ಮೇಲೆ ರೇಪ್‌ ಮಾಡುವುದು ಎಂದರೆ ಅವರಿಗೆ ವಿಕೃತ ಸಂತೋಷ ಕೊಡುತ್ತದೆ. ಶವಗಳೊಂದಿಗೆ ಲೈಂಗಿಕ ಕ್ರಿಯೆ ನಡೆಸುವುದನ್ನು ನೆಕ್ರೊಫೀಲಿಯಾ ಎನ್ನುತ್ತಾರೆ. ತಾಲಿಬಾನಿಗಳು ಮಹಿಳೆಯರನ್ನು ಹೊತ್ತೊಯ್ದು ಗುಂಡಿಕ್ಕಿ ಕೊಂದ ನಂತರ ಶವದೊಂದಿಗೆ ಲೈಂಗಿಕ ಕ್ರಿಯೆ ನಡೆಸುವ ಪ್ರವೃತ್ತಿ ಹೊಂದಿದ್ದಾರೆ ಎಂದು ಮುಸ್ಕಾನ್‌ ಹೇಳಿದ್ದಾರೆ.ಇನ್ನು ಉದ್ಯೋಗಸ್ಥ ಮಹಿಳೆಯಾದರಂತೂ ಮುಗಿದೇ ಹೋಯ್ತು. ಹುಡುಕಿಕೊಂಡು ಬಂದು ಗುಂಡಿಕ್ಕುತ್ತಿದ್ದಾರೆ. ಕೆಲಸಕ್ಕೆ ಹೋದರೆ ಇಡೀ ಕುಟುಂಬವನ್ನೇ ಸರ್ವನಾಶ ಮಾಡುತ್ತೇವೆ ಎಂದು ಮೊದಲು ಎಚ್ಚರಿಕೆ ಕೊಟ್ಟರು. ಅದನ್ನು ಒಪ್ಪಿದಿದ್ದ ಇಡೀ ಕುಟುಂಬದವರನ್ನೇ ಗುಂಡಿಕ್ಕಿ ಕೊಂದಿದ್ದಾರೆ. ನಾನು ಹೇಗೋ ಅಲ್ಲಿಂದ ಪಲಾಯನ ಮಾಡುವಲ್ಲಿ ಯಶಸ್ವಿಯಾಗಿದ್ದೇನೆ. ಇದು ನನ್ನ ಅದೃಷ್ಟ ಎಂದಿದ್ದಾರೆ.
‘ಹುಲಿ ಎರಡು ಹೆಜ್ಜೆ ಹಿಂದೆ ಹೋದರೆ ಅದು ಬೇಟೆಗಾಗಿ… ತಾಲಿಬಾನಿಗಳ ಜತೆ ಪಾಕಿಗಳಿಗೂ ಬುದ್ಧಿಕಲಿಸುವೆ’
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve + fourteen =
Remember me
