ಚೆನ್ನೈ:ಈ ಹಿಂದೆ ಕಾವೇರಿ ನೀರಿನ ಗಲಾಟೆ ವೇಳೆ ಕನ್ನಡಿಗರ ಪರವಾಗಿ ಮಾತನಾಡಿ, ಕನ್ನಡಿಗರ ಮನಗೆದ್ದ ಕಾಲಿವುಡ್‌ ನಟ ಸಿಂಬು ವೇದಿಕೆಯ ಮೇಲೆ ಇಂದು ಕಣ್ಣೀರು ಹಾಕಿದ್ದಾರೆ. ‘ನನಗೆ ಚಿತ್ರರಂಗದಲ್ಲಿ ಅನೇಕ ಮಂದಿ ಕಿರುಕುಳ ಕೊಡುತ್ತಿದ್ದಾರೆ. ನಾನು ತುಂಬ ಸಮಸ್ಯೆ ಎದುರಿಸಿದ್ದೇನೆ. ಅವರು ತೊಂದರೆ ಕೊಡುತ್ತಲೇ ಇದ್ದಾರೆ. ಅವೆಲ್ಲವನ್ನೂ ನಾನು ಪರಿಹರಿಸಿಕೊಳ್ಳುತ್ತೇನೆ. ಅಭಿಮಾನಿಗಳೇ ದಯವಿಟ್ಟು ನೀವು ನನ್ನನ್ನು ಕೇರ್​ ಮಾಡಿ’ ಎಂದು ನಟ ವೇದಿಕೆಯಲ್ಲಿ ಗದ್ಗಿತರಾಗಿದ್ದಾರೆ.
ಯಾರು ತಮಗೆ ತೊಂದರೆ ಕೊಡುತ್ತಿದ್ದಾರೆ ಎಂಬ ಹೆಸರನ್ನು ಬಹಿರಂಗಪಡಿಸದ ನಟ, ತಮ್ಮ ಮುಂದಿನ ಚಿತ್ರ ‘ಮಾನಾಡು’ವಿನ ಪ್ರೀ ರಿಲೀಸ್​ ಇವೆಂಟ್​ ಸಂದರ್ಭದಲ್ಲಿ ಕಣ್ಣೀರು ಹಾಕಿದ್ದಾರೆ.
ಅಂದಹಾಗೆ ಸಿಂಬು ಮೊದಲಿನಿಂದಲೂ ಕಾಂಟ್ರವರ್ಸಿಯಲ್ಲಿ ಸಿಲುಕಿದವರೇ, ಬಾಲನಟರಾಗಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಇವರು, ಅನೇಕ ಚಿತ್ರಗಳಲ್ಲಿ ನಟಿಸಿದ್ದಾರೆ. ‘ಮಾನಾಡು’ ಚಿತ್ರದ ಶೂಟಿಂಗ್‌ ವೇಳೆ, ಈ ಚಿತ್ರದ ನಿರ್ಮಾಪಕರ ಜತೆ ಜಗಳವಾಡಿ ಚಿತ್ರತಂಡದಿಂದ ಹೊರನಡೆದಿದ್ದರು. ಮತ್ತೆ ಸಂಧಾನ ಮಾಡಿಕೊಂಡು ಚಿತ್ರತಂಡವನ್ನು ಸೇರಿಕೊಂಡಿದ್ದಾರೆ. ಈಗ ಇದರ ಪ್ರೀ ರಿಲೀಸ್​ ಇವೆಂಟ್​ ವೇಳೆ ದುಃಖ ತೋಡಿಕೊಂಡಿದ್ದಾರೆ.
ಇದೇ 25ರಂದು ಮಾನಾಡು ರಿಲೀಸ್‌ ಆಗಲಿದೆ. ಈ ಚಿತ್ರದಲ್ಲಿ ಟೈಮ್ ಟ್ರಾವೆಲಿಂಗ್​ ಕಥೆ ಇದೆ. ಇಂದಿನ ಕಾಲಘಟ್ಟದ ಸಾಮಾಜಿಕ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಕೂಡ ಈ ಚಿತ್ರದಲ್ಲಿ ಆಗಿದೆ ಎಂದು ಚಿತ್ರತಂಡ ಹೇಳಿದೆ. ಕಲ್ಯಾಣಿ ಪ್ರಿಯದರ್ಶನ್​, ಎಸ್​.ಜೆ. ಸೂರ್ಯ ಮುಂತಾದವರು ಕೂಡ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಸಿಂಬು ಅವರಿಗೆ ಸಿನಿಮಾ ಮಂದಿ ಹಾಗೂ ರಾಜಕೀಯ ವ್ಯಕ್ತಿಗಳಿಂದ ಸಮಸ್ಯೆಯಾಗುತ್ತಿದೆ ಎಂದ ಅವರ ಅಭಿಮಾನಿಗಳು ಇದೇ ವೇಳೆ ಆರೋಪಿಸಿದ್ದಾರೆ.
ಈ ನಟ ಕನ್ನಡಿಗರಿಗೂ ಅಚ್ಚುಮೆಚ್ಚು ಏಕೆಂದರೆ, ಕಾವೇರಿ ಗಲಾಟೆ ವೇಳೆ, ಕನ್ನಡಿಗರ ಪರ ವಹಿಸಿಕೊಂಡಿದ್ದ ಸಿಂಬು, ‘ಕಾವೇರಿ ಹೋರಾಟ ನಡೆಯುತ್ತಲೇ ಇದೆ. ಆದರೆ ಕನ್ನಡಿಗರಿಗೆ ನೀರಿಲ್ಲ, ಇನ್ನೂ ನಮಗೆಲ್ಲಿಂದ ಕೊಡ್ತಾರೆ. ಈ ಪ್ರಪಂಚದಲ್ಲಿ ಪ್ರೀತಿಯಿಂದ ಮಾತ್ರ ಯಾವುದೇ ಒಂದು ವಿಷಯ ಗೆಲ್ಲೋದಿಕ್ಕೆ ಸಾಧ್ಯ. ಇದು ಗಾಂಧಿ ಹುಟ್ಟಿದ ಭೂಮಿ. ಅಹಿಂಸಾ ಮಾರ್ಗದ ಹೋರಾಟವೇ ಸರಿಯಾದ ಹೋರಾಟ. ನಾವು ಯಾರೊಂದಿಗೂ ಜಗಳ ಮಾಡಬಾರದು. ಕರ್ನಾಟಕದವರೇನಾದರೂ ನಾವು ನೀರು ಕೊಡೋದಿಲ್ಲ ಅಂತ ಹೇಳಿದ್ದಾರಾ? ಎಂದಿದ್ದರು.
VIDEO: ಅಪ್ಪು ಎಲ್ಲಿದ್ದಾರೆ? ಆಸೆ ಏನಿತ್ತು? ಮತ್ತೆ ಹುಟ್ತಾರಾ…? ಜೀವಂತ ವ್ಯಕ್ತಿಯ ದೇಹದಲ್ಲಿ ಆತ್ಮ ಕರೆಸಿ ಮಾತನಾಡುವೆ ಎಂದ ಗುರೂಜಿ

ಮದುವೆಗೂ ಮುನ್ನ ಬುರ್ಖಾ ಧರಿಸ್ತಿದ್ದೆ: ವಿವಾಹ ವಾರ್ಷಿಕೋತ್ಸವದಂದು ಗುಟ್ಟು ಬಿಚ್ಚಿಟ್ಟ ದೀಪಿಕಾ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:3 × 1 =
Remember me
