ಚೆನ್ನೈ:ಮಹಿಳೆಯರಿಗೆ ಮಾತ್ರವಲ್ಲದೇ ಸೌಂದರ್ಯ ಎನ್ನುವುದು ಪುರುಷರಿಗೂ ಬಿಟ್ಟಿಲ್ಲ. ಅದರಲ್ಲಿಯೂ ಸಿನಿ ತಾರೆಯರು ಎಂದರೆ ಕೇಳಬೇಕೆ? ತೆಳ್ಳಗೆ ಬೆಳ್ಳಗೆ ಇದ್ದರಷ್ಟೇ ಅವರಿಗೆ ಗೌರವ, ಅಭಿಮಾನಿಗಳ ಸಂಖ್ಯೆ ಹೆಚ್ಚಳ, ಸಿನಿಮಾದಲ್ಲಿಯೂ ಆಫರ್​ಗಳು ಹೇರಳ.
ಇದೇ ಕಾರಣಕ್ಕೆ ತಮ್ಮ ಸೌಂದರ್ಯವನ್ನು ಕಾಪಿಟ್ಟುಕೊಳ್ಳಲು ನಟ-ನಟಿಯರು ಹೆಣಗಾಡುವುದು ಅಷ್ಟಿಷ್ಟಲ್ಲ. ಜಿಮ್​, ಯೋಗ, ವ್ಯಾಯಾಮ ಮಾತ್ರವಲ್ಲದೇ ತಮ್ಮ ನೆಚ್ಚಿನ ತಿಂಡಿ ತಿನಿಸುಗಳಿಗೂ ಗುಡ್​ಬೈ ಹೇಳುತ್ತಿರುವವರು ಅದೆಷ್ಟೋ ಮಂದಿ. ಹೀಗೆಲ್ಲಾ ಮಾಡಿ ಸುಂದರಿಯಾಗಿದ್ದ ನಟಿಯೊಬ್ಬರು, ಇದೀಗ ಫೇಷಿಯಲ್​ ಮಾಡಿಸಿಕೊಂಡು ಕುರೂಪಿಯಾಗಿರುವ ಘಟನೆ ನಡೆದಿದೆ.
ಈಕೆಯ ಹೆಸರು ರೈಜಾ ವಿಲ್ಸನ್​. ಕಾಲಿವುಡ್​ನ ಖ್ಯಾತಿ ನಟಿಯ ಜತೆಗೆ ಬಿಗ್​ಬಾಸ್​ ಸ್ಪರ್ಧಿ ಕೂಡ. ಅಪಾರ ಅಭಿಮಾನಿಗಳನ್ನು ಹೊಂದಿರುವ ರೈಜಾಳ ಹಾಲಿ ರೂಪ ಕಂಡು ಅಭಿಮಾನಿಗಳು ಕಂಗೆಟ್ಟುಹೋಗಿದ್ದಾರೆ.
ಇದಕ್ಕೆ ಕಾರಣ ಫೇಷಿಯಲ್​. ತಮ್ಮ ಹಾಲಿ ಮುಖವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಈ ನಟಿ, ತಮಗೆ ಒತ್ತಾಯಪೂರ್ವಕವಾಗಿ ಚಿಕಿತ್ಸೆ ನೀಡಿರುವ ಕ್ಲಿನಿಕ್​ ವಿರುದ್ಧ ಕೇಸ್​ ಹಾಕಲು ರೆಡಿಯಾಗಿದ್ದಾರೆ. ಅಷ್ಟಕ್ಕೂ ಆಗಿದ್ದೇನೆಂದರೆ ರೈಜಾ ವಿಲ್ಸನ್​ ಫೇಷಿಯಲ್​ ಮಾಡಿಸಿಕೊಳ್ಳಲು ಬ್ಯೂಟಿ ಕ್ಲಿನಿಕ್​ಗೆ ಹೋಗಿದ್ದರು. ಅಲ್ಲಿ ಬ್ಯೂಟಿಷಿಯನ್​ ಫೇಷಿಯಲ್​ ಜತೆಗೆ ಇನ್ನಷ್ಟು ಸುಂದರಿಯಾಗಿ ಕಾಣಿಸಲು ಚಿಕಿತ್ಸೆ ಪಡೆದುಕೊಳ್ಳುವಂತೆ ಹೇಳಿದ್ದರಂತೆ.
ತಾವು ಇದ್ದಕ್ಕೆ ಒಪ್ಪಿರಲಿಲ್ಲ. ಆದರೂ ಒತ್ತಾಯಪೂರ್ವಕವಾಗಿ ಚಿಕಿತ್ಸೆ ನೀಡಲಾಗಿದೆ. ಒಂದೆರಡು ದಿನ ಬಿಟ್ಟು ಕನ್ನಡಿ ನೋಡಿಕೊಂಡಾಗ ಮುಖ ಊದಿಕೊಳ್ಳುತ್ತಿರುವುದು ಕಂಡಿದೆ. ಕಣ್ಣಿನ ಕೆಳ ಭಾಗ ಸಂಪೂರ್ಣವಾಗಿ ಊದಿಕೊಂಡಿತ್ತು. ನಂತರ ಚಿಕಿತ್ಸೆ ನೀಡಿದ ವೈದ್ಯರಿಗೆ ಕರೆ ಮಾಡಿದರೆ ಅವರು ಕಾಲ್​ ಸ್ವೀಕರಸಲಿಲ್ಲ.​ ಆಸ್ಪತ್ರೆಗೆ ಕರೆ ಮಾಡಿದರೆ ವೈದ್ಯರು ಊರಿನಲ್ಲಿಲ್ಲ ಎನ್ನುವ ಉತ್ತರ ಬಂತು ಎಂದು ನಟಿ ಹೇಳಿಕೊಂಡಿದ್ದಾರೆ. ಅನೇಕ ಮಂದಿ ಈ ಸಮಸ್ಯೆ ಎದುರಿಸುತ್ತಿದ್ದು, ಕ್ಲಿನಿಕ್​ಗೆ ಯಾವ ರೀತಿ ಬುದ್ಧಿ ಕಲಿಸಬೇಕು ಎಂದು ನಟಿ ಯೋಚಿಸುತ್ತಿದ್ದಾರೆ.
ನೀನು ಸತ್ತ ಮೇಲೆ ಮಗ ನನ್ನ ಜತೆ ಇರಬೇಕು ಅಂತಿದ್ದಾರೆ ವಿಚ್ಛೇದಿತ ಪತಿ- ಹೀಗೆ ಕಂಡೀಷನ್​ ಹಾಕ್ಬೋದಾ?

ತಾಯಿಯ ಮೇಲಿನ ಸಿಟ್ಟಿಗೆ ಮೂರು ತಿಂಗಳ ಮಗುವನ್ನು ಜೀವಂತವಾಗಿ ಹೂತುಹಾಕಿದ ಚಿಕ್ಕಮ್ಮ!

ಎಚ್​ಎಂಟಿಗೆ ಬೇಕಾಗಿದ್ದಾರೆ ಪ್ರತಿಭಾನ್ವಿತರು: ವಿವಿಧ ಹುದ್ದೆಗಳಿಗೆ ಆಹ್ವಾನ- ಬೆಂಗಳೂರಿನಲ್ಲಿ ಕೆಲಸ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:seventeen − nine =
Remember me
