ಚೆನ್ನೈ:ಮದುವೆ ಮಂಟಪಕ್ಕೆ ಬರುವ ವೇಳೆ ವಧು ಡಾನ್ಸ್ ಮಾಡಿದಳು ಎನ್ನುವ ಕಾರಣಕ್ಕೆ ವರ ಮಹಾಶಯ ಆಕೆಯ ಕೆನ್ನೆಗೆ ಹೊಡೆದು, ಅವಳೂ ಅವನ ಕೆನ್ನೆಗೆ ಬಾರಿಸಿ ಮದುವೆಯನ್ನೇ ಕ್ಯಾನ್ಸಲ್‌ ಮಾಡಿರುವ ಘಟನೆ ತಮಿಳುನಾಡಿನ ಪನ್ರುತಿಯಲ್ಲಿ ನಡೆದಿದೆ.
ತಮಿಳುನಾಡಿನ ಉದ್ಯಮಿ, ಸ್ನಾತಕೋತ್ತರ ಪದವೀಧರೆಯ ವಿವಾಹ ಚೆನ್ನೈನಲ್ಲಿ ಇಂಜಿನಿಯರ್​ ಆಗಿರುವ ವರನ ಜತೆ ನಿಶ್ಚಯವಾಗಿತ್ತು. ಪನ್ರುತಿಯ ಖಾಸಗಿ ಮದುವೆ ಹಾಲ್​ವೊಂದರಲ್ಲಿ ಆಯೋಜಿಸಲಾಗಿತ್ತು. ಜನವರಿ 20ರಂದು ಮದುವೆಯಿತ್ತು. ಜ.19ರಂದು ರಾತ್ರಿ ಅದೇ ಮಂಟಪದಲ್ಲಿ ನಿಶ್ಚಿತಾರ್ಥವಿತ್ತು. ಆ ಸಂದರ್ಭದಲ್ಲಿ ವಧು ಸಿನಿಮಾದಿಂದ ಪ್ರೇರೇ‍ಪಣೆಗೊಂಡು ನಿಶ್ಚಿತಾರ್ಥ ಮಾಡಿಕೊಳ್ಳಲು ಮಂಟಪಕ್ಕೆ ಬರುವಾಗ ಡಾನ್ಸ್‌ ಮಾಡುತ್ತಾ ಬಂದಿದ್ದಾಳೆ. ಇದು ವರನ ಕೆಂಗಣ್ಣಿಗೆ ಗುರಿಯಾಗಿದೆ. ಮಂಟಪಕ್ಕೆ ಬರುತ್ತಿದ್ದಂತೆಯೇ ಸಿಟ್ಟಿನಿಂದ ವರ ಆಕೆಗೆ ಕಪಾಳಮೋಕ್ಷ ಮಾಡಿದ್ದಾನೆ. ಇಷ್ಟು ಆಗುತ್ತಿದ್ದಂತೆಯೇ ವಧು ಏನೂ ಸುಮ್ಮನಾಗಲಿಲ್ಲ, ವಾಪಸ್‌ ಅವಳೂ ತಿರುಗಿ ಅವನ ಕೆನ್ನೆಗೆ ಹೊಡೆದಿದ್ದಾಳೆ.
ತನ್ನ ಮಗಳಿಗೆ ಆಗಿರುವ ಅವಮಾನವನ್ನು ಸಹಿಸದ ಆಕೆಯ ತಂದೆ, ವರನ ಕುಟುಂಸ್ಥರ ಜತೆ ಜಗಳ ತೆಗೆದು, ಈ ಅವಮಾನವನ್ನು ಸಹಿಸಲಾರೆ ಎಂದು ಮದುವೆಯನ್ನೇ ಕ್ಯಾನ್ಸಲ್‌ ಮಾಡಿದ್ದಾರೆ. ಪರಿಸ್ಥಿತಿ ನಿಯಂತ್ರಣಕ್ಕೆ ತರಲು ವರನ ಕುಟುಂಬದವರು ಯತ್ನಿಸಿದರೂ ಸಾಧ್ಯವಾಗಲಿಲ್ಲ. ಕೊನೆಗೆ ಮದುವೆ ಮುರಿದುಹೋಗಿದೆ.
ಆದರೆ ಇಷ್ಟಕ್ಕೆ ವಧುವಿನ ಅಪ್ಪ ಸುಮ್ಮನಾಗಲಿಲ್ಲ. ವಿಲ್ಲುಪುರಮ್​ನ ಸಂಬಂಧಿಕರ ವರನೊಂದಿಗೆ ಅದೇ ದಿನ ಅದೇ ಮಂಟಪದಲ್ಲಿ ಮಗಳ ಮದುವೆಯನ್ನೂ ಮಾಡಿಸಿದ್ದಾರೆ.
ಇದರಿಂದ ಅವಮಾನಗೊಂಡ ವರ ಪನ್ರುತಿ ಪೊಲೀಸ್​ ಠಾಣೆಯಲ್ಲಿದೂರು ನೀಡಿದ್ದಾನೆ. ನಿಶ್ಚಿತಾರ್ಥಕ್ಕೆ ಖರ್ಚು ಮಾಡಿರುವ 7 ಲಕ್ಷ ರೂಗಳನ್ನು ವಾಪಸ್​ ನೀಡುವಂತೆ ಕೇಳಿದ್ದಾನೆ. ಸದ್ಯ ವಿವಾದ ಠಾಣೆಯಲ್ಲಿ ಇದೆ.
ಗೂಗಲ್‌ ನೋಡಿ ದರೋಡೆ ಕಲಿತ ಬೆಂಗಳೂರಿನ ಇಂಜಿನಿಯರ್‌! ಆದ್ರೆ ಉಳಿದದ್ದು ಗೊತ್ತಾಗದೇ ಸಿಕ್ಕಿಬಿದ್ದ

ಆಕೆಯ ಜತೆ ದೈಹಿಕ ಸಂಪರ್ಕ ಮಾಡುವಾಗ ತಾಯಿ ನೆನಪಾಗಲಿಲ್ಲವೆ? ಈಗ ಮದುವೆಗೆ ಹಿಂದೇಟು ಹಾಕಿದ್ರೆ ಹೇಗೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × two =
Remember me
