ಅರವಕುರಿಚಿ (ತಮಿಳುನಾಡು):ಕರ್ನಾಟಕದ ಸಿಂಗಂ ಎಂದೇ ಪ್ರಖ್ಯಾತಿ ಪಡೆದಿದ್ದ ಐಪಿಎಸ್‌ ಅಧಿಕಾರಿ ಅಣ್ಣಾಮಲೈ ಅವರು ಸ್ಪರ್ಧಿಸಿರುವ ಅರವಕುರಿಚಿ ಕ್ಷೇತ್ರದಲ್ಲಿ ಕ್ಷಣಕ್ಷಣಕ್ಕೂ ಕುತೂಹಲ ಮನೆ ಮಾಡಿದೆ.ತಮ್ಮ ಹುದ್ದೆ ರಾಜೀನಾಮೆ ನೀಡಿದ ಬಿಜೆಪಿಗೆ ಸೇರ್ಪಡೆಗೊಂಡಿದ್ದ ಅಣ್ಣಾಮಲೈ ಅವರನ್ನು ಅವರದ್ದೇ ಸ್ವಕ್ಷೇತ್ರವಾಗಿರುವ ಅರವಕುರಿಚಿಯಿಂದ ಕಣಕ್ಕೆ ಇಳಿಸಿದೆ. ಇದು ಅವರ ರಾಜಕೀಯ ಪಯಣದ ಆರಂಭಿಕ ಚುನಾವಣೆ.
ಈ ಚುನಾವಣೆಯಲ್ಲಿ ಇದುವರೆಗೆ ನಡೆದಿರುವ ಫಲಿತಾಂಶದಲ್ಲಿ ಅಣ್ಣಾಮಲೈ ಅವರು ಮುನ್ನಡೆ ಸಾಧಿಸಿದ್ದಾರೆ. ಮೊದಲ ಎರಡು ಹಂತದ ಮತ ಎಣಿಕೆಯಲ್ಲಿ ಅವರಿಗೆ ಆಘಾತವಾಗಿತ್ತು. ಏಕೆಂದರೆ ಮೊದಲು ಅಣ್ಣಾಮಲೈ ಹಿನ್ನಡೆ ಅನುಭವಿಸಿದ್ದರೆ, ಡಿಎಂಕೆಯ ಮೊಂಜಾನೂರ್‌ ಎಲಂಗೋ ಅವರು ಮುನ್ನಡೆ ಸಾಧಿಸಿದ್ದರು.
ಆದರೆ ಇದೀಗ ಮೂರನೆಯ ಹಂತದ ಮತ ಎಣಿಕೆ ಕಾರ್ಯ ಮುಗಿದಿದ್ದು, ಈ ಹಂತದಲ್ಲಿ ಡಿಎಂಕೆಯ ಎಲಂಗೋ ಅವರು 2,995 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದರೆ, ಅಣ್ಣಾಮಲೈ ಅವರು 3.034 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದ್ದಾರೆ. ಇಬ್ಬರ ನಡುವೆ ಅಂತರ ಕಡಿಮೆ ಎದ್ದು ಕೊನೆಯ ಕ್ಷಣದವರೆಗೂ ಏನಾಗುವುದೋ ಎಂಬ ಕುತೂಹಲವಿದೆ.
ತಮಿಳುನಾಡಲ್ಲಿ ಸೂರ್ಯೋದಯ? ಸಿಎಂ ಖುರ್ಚಿಯತ್ತ ಸ್ಟಾಲಿನ್‌- ಮ್ಯಾಜಿಕ್‌ ನಂಬರ್‌ ದಾಟಿದ ಡಿಎಂಕೆ

ಕೇರಳದ ಸಿಎಂ ಮೊಗದಲ್ಲಿ ಭಾರಿ ಹರ್ಷ: ಎಲ್‌ಡಿಎಫ್‌ ಮೈತ್ರಿಕೂಟ 78 ಕ್ಷೇತ್ರಗಳಲ್ಲಿ ದಾ‍ಪುಗಾಲು

ತಮಿಳುನಾಡು ಫೈಟ್‌: ಕೊಳತ್ತೂರಿನಲ್ಲಿ ಸ್ಟಾಲಿನ್‌ ಮುನ್ನಡೆ, ಕೊಯಮತ್ತೂರಿನಲ್ಲಿ ಕಮಲ್‌ ಹಾಸನ್‌ ಹಿನ್ನಡೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × one =
Remember me
