ತಂಜಾವೂರು:ಅತ್ತ ಅಮೆರಿಕದಲ್ಲಿ ಚುನಾವಣಾ ಫಲಿತಾಂಶ ಹೊರಬರುತ್ತಿದ್ದಂತೆಯೇ, ಇತ್ತ ತಮಿಳುನಾಡಿನ ತಿರುವರೂರು ಜಿಲ್ಲೆಯ ತುಳಸೇಂದ್ರಪುರಂ ಪೈಂಗನಾಡು ಗ್ರಾಮದಲ್ಲಿ ದೀಪಾವಳಿ ಸಂಭ್ರಮ ಮನೆ ಮಾಡಿದೆ. ದೀಪಾವಳಿ ಹಬ್ಬದ ವಾರದ ಮೊದಲೇ ಇಲ್ಲಿ ಸಡಗರವೋ ಸಡಗರ!ಅಷ್ಟಕ್ಕೂ ಅಮೆರಿಕ ಚುನಾವಣೆಯಗೂ, ಇಲ್ಲಿಯ ಸಂಭ್ರಮಕ್ಕೂ ಕಾರಣವಿದೆ. ಅದೇನೆಂದರೆ ಕಮಲಾ ಹ್ಯಾರಿಸ್.
ಕಮಲಾ ಹ್ಯಾರಿಸ್ ಅವರ ತಾಯಿಯವರ ಮೂಲ ತುಳಸೇಂದ್ರಪುರಂ ಪೈಂಗನಾಡು. ಹೀಗಾಗಿ ಇಲ್ಲಿಯ ಜನರು ತಮ್ಮ ಊರಿನ ಹೆಣ್ಣುಮಗಳು ಇಂದು ವಿಶ್ವದ ಆರ್ಥಿಕ ಬಲಿಷ್ಠ ದೇಶದ ಮೊದಲ ಉಪಾಧ್ಯಕ್ಷೆಯಾಗಿ ಅಧಿಕಾರ ವಹಿಸಿಕೊಳ್ಳುತ್ತಿದ್ದಾರೆ ಎಂದು ಸಂತಸಪಟ್ಟುಕೊಂಡಿದ್ದು, ಸಂಭ್ರಮಿಸುತ್ತಿದ್ದಾರೆ. ಗ್ರಾಮದಲ್ಲಿ ಪಟಾಕಿ ಹಚ್ಚಿ, ಸಿಹಿತಿಂಡಿ ಹಂಚಿ, ಕಮಲಾ ಹ್ಯಾರಿಸ್ ಫೋಟೋದೊಂದಿಗೆ ಭಿತ್ತಿಪತ್ರ ಹಿಡಿದು ಸಂಭ್ರಮಪಟ್ಟರು, ಮಾತ್ರವಲ್ಲದೇ ಮನೆಯ ಮುಂದೆ ರಂಗೋಲಿ ಹಾಕಿದ್ದಾರೆ.
ಇದನ್ನೂ ಓದಿ:ದ್ವಿತೀಯ ಪತ್ನಿಯೀಗ ಅಮೆರಿಕದ ಪ್ರಥಮ ಮಹಿಳೆ- ಇವರ ಇಂಟರೆಸ್ಟಿಂಗ್‌ ಸ್ಟೋರಿ ಇಲ್ಲಿದೆ…
ಕಮಲಾ ಹ್ಯಾರಿಸ್ ಹುಟ್ಟಿದ್ದು ಅಮೆರಿಕದ ಕ್ಯಾಲಿಫೋರ್ನಿಯಾದ ಓಕ್ಲಾಂಡ್ ನಲ್ಲಿ, ಅವರ ತಾಯಿ ಶ್ಯಾಮಲಾ ಗೋಪಾಲನ್ ಚೆನ್ನೈಯಲ್ಲಿ ಜನಿಸಿದ್ದರು. ನಮ್ಮ ಗ್ರಾಮದ ಮಗಳು ಕಮಲಾ ಹ್ಯಾರಿಸ್ ಇಲ್ಲಿಗೆ ಭೇಟಿ ಕೊಡಬೇಕು ಎಂದು ನಾವು ಬಯಸುತ್ತೇವೆ ಎನ್ನುತ್ತಾರೆ ಗ್ರಾಮಸ್ಥರು.
ಗ್ರಾಮದೇವತೆ ಶ್ರೀಧರ್ಮ ಶಾಸ್ತ ಅಯ್ಯನರ್‌ಗೆ ಸಲ್ಲಿಸಿದ ಪ್ರಾರ್ಥನೆ ಫಲ ಕೊಟ್ಟಿದೆ ಎನ್ನುತ್ತಾರೆ ಗ್ರಾಮದ ಮುಖ್ಯಸ್ಥ ಸುಧಾಕರ್. ಕಮಲಾ ಹ್ಯಾರಿಸ್ ಅವರ ತಾಯಿಯ ತಂದೆ, ಅಜ್ಜ ಪಿ.ವಿ. ಗೋಪಾಲನ್ ಅವರು ಕಟ್ಟಿಸಿದ ಕುಲ ದೇವಸ್ಥಾನದಲ್ಲಿ ಇಂದು ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸಲಾಯಿತು.
ಲವ್‌ ಮಾಡಿದ್ದು 13 ವರ್ಷ: ಗರ್ಭಪಾತ ಮಾಡಿಸಿ ಮದ್ವೆ ದಿನ ಎಸ್ಕೇಪ್‌- ಉಡುಪಿ ಯುವತಿಯ ಪ್ರತಿಭಟನೆ

ಪೊಲೀಸ್‌ಗೆ ‘ಪುಲಿಷ್’ ಎಂದು ಬರೆದು ಸಿಕ್ಕಿಬಿದ್ದ ಕೊಲೆಗಾರ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:19 − 17 =
Remember me
