ಚೆನ್ನೈ:ತಮಿಳುನಾಡಿನ ಮೀನುಗಾರಿಕೆ ಮತ್ತು ಮೀನುಗಾರರ ಕಲ್ಯಾಣ ಮತ್ತು ಪಶುಸಂಗೋಪನಾ ಸಚಿವ ಅನಿತಾ ರಾಧಾಕೃಷ್ಣನ್ ಅವರ ವಿಡಿಯೋ ಒಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ. ಅದೇನೆಂದರೆ ಮೀನುಗಾರಿಕೆ ಸಚಿವರಾಗಿರುವ ಇವರು, ಸಮುದ್ರದಲ್ಲಿ ಬೂಟು ಒದ್ದೆಯಾಗುತ್ತದೆ ಎಂದು ಚಡಪಡಿಸಿದ ವಿಡಿಯೋ ಇದು!
ಸಮುದ್ರ ಕೊರೆತದ ಬಗ್ಗೆ ತನಿಖೆ ನಡೆಸಲು ಡಿಎಂಕೆ ಸಚಿವರು ಪಾಲವರ್ಕಡಿಗೆ ಹೋಗಿದ್ದರು. ದೋಣಿ ವಿಹಾರ ಮುಗಿಸಿ ಬಂದ ಮೇಲೆ ದೋಣಿಯ ದಡಕ್ಕೆ ಬಂದಿದೆ. ದಡದಿಂದ ಸ್ವಲ್ಪ ದೂರ ಈಚೆಗೆ ಬರಬೇಕಲ್ಲ, ಆಗ ಈ ಮೀನುಗಾರಿಕೆ ಸಚಿವರಿಗೆ ಚಡಪಡಿಕೆ ಶುರುವಾಗಿದೆ. ಅದಕ್ಕೆ ಕಾರಣ, ಅವರ ಬಿಳಿದಾದ ಬೂಟ್‌ ಎಲ್ಲಿ ನೀರಿನಲ್ಲಿ ಒದ್ದೆಯಾಗಿ ಬಿಡುತ್ತದೆಯೋ ಎಂಬ ಭಯ!
ಅದೇ ವೇಳೆ, ಮೀನುಗಾರರು ಸಚಿವರು ದೋಣಿಯಿಂದ ಇಳಿಯುವಂತೆ ಕುರ್ಚಿಯನ್ನು ಇರಿಸಿದ್ದಾರೆ. ಆದರೆ ಬೂಟೂಗಳು ಒದ್ದೆಯಾಗುತ್ತದೆ ಎಂದು ಸಚಿವರು ಚಡಪಡಿಸುವುದನ್ನು ನೋಡಲಾಗದೇ ಕೊನೆಗೆ ಮೀನುಗಾರರು ಅವರ ಭುಜದ ಮೇಲೆ ಕುರಿಸಿಕೊಂಡು ಎತ್ತಿಕೊಂಡು ಬಂದಿದ್ದು, ಅದೀಗ ವೈರಲ್‌ ಆಗಿದೆ.
ಈ ವಿಡಿಯೋ ಇದೀಗ ಸಾಕಷ್ಟು ವೈರಲ್‌ ಆಗಿದ್ದು, ಸಚಿವರ ವಿರುದ್ಧ ಗರಂ ಆಗಿದ್ದಾರೆ ಕಮೆಂಟಿಗರು. ಇದಕ್ಕೆ ಪ್ರತಿಕ್ರಿಯೆ ನೀಡಿರು ಸಚಿವರು, ಏನು ತಪ್ಪಿದೆ? ಅವರು ಪ್ರೀತಿಯಿಂದ ಕೇಳಿದ್ದಕ್ಕೆ ನಾನು ಅವರ ಹೆಗಲ ಮೇಲೆ ಹತ್ತಿದೆ ಎಂದಿದ್ದಾರೆ!
ಇಲ್ಲಿದೆ ನೋಡಿ ವಿಡಿಯೋ
ஏன் ஷூவை கழட்டி வெறும் கால்ல நடந்தா என்ன வந்துரப்போவுது? இதுக்கு முன்ன தண்ணியில காலே வச்சதில்லையோ?#AnithaRadhakrishnan#DMKpic.twitter.com/E0M07CUfqB
— ıllıllı⭐🌟 𝐌𝐚𝐬𝐬 𝐌𝐚𝐡𝐚𝐫𝐚𝐣𝐚 🌟⭐ıllıllı (@Mass_Maharaja)July 8, 2021

ಬಾಡಿಗೆ ಕೊಡೋದು ಬೇಡ, ಗಂಡ ಇಲ್ಲದಾಗ ಕಿಸ್‌ ಮಾಡ್ತಿರು ಎಂದ ಮಾಲೀಕ: ಮುಂದಾದದ್ದು ದುರಂತ

VIDEO: ಸೃಜನ್‌ ಖುಷಿಗಾಗಿ ನಾನು ಮದುವೆ ಮುರಿದೆ: ಯಾವ ಬೀದಿಗೆ ಬಂದೆ ಅಂತ ಹೇಳ್ತೀರಾ? ನಟಿ ವಿಜಯಲಕ್ಷ್ಮಿ ಕಣ್ಣೀರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × five =
Remember me
