ನವದೆಹಲಿ:ದೋಸೆಯಲ್ಲಿ ಇರುವ ವೆರೈಟಿಗಳಿಗೆ ಲೆಕ್ಕವೇ ಇಲ್ಲ. ಒಂದೊಂದು ಪ್ರದೇಶಗಳಲ್ಲಿ ಒಂದೊಂದು ತೆರನಾದ ದೋಸೆಗಳು ಇವೆ. ಅದರಲ್ಲಿಯೂ ಕೆಲವೊಂದು ದೋಸೆಗಳನ್ನು ತಿಂದರೆ ಮತ್ತೆ ಮತ್ತೆ ತಿನ್ನಬೇಕು ಎನ್ನುವ ಹಂಬಲ ಉಂಟಾಗುವುದಂತೂ ನಿಜ. ಕುರುಂಕುರುಂ ಎನ್ನಿಸುವ ಟೇಸ್ಟಿ ಟೇಸ್ಟಿ ದೋಸೆಯನ್ನೂ ತಿನ್ನಿ, ಅದರ ಜತೆಗೆ 71 ಸಾವಿರ ರೂಪಾಯಿ ಬಹುಮಾನವನ್ನೂ ಗೆಲ್ಲಿ ಎಂದರೆ ನಂಬುವಿರಾ?
ನಂಬಲೇ ಬೇಕು. ಇಂಥದ್ದೊಂದು ಆಫರ್‌ ಕೊಟ್ಟಿದೆ ಡೆಲ್ಲಿ ಟಮ್ಮಿ (@delhi_tummy) ಎಂಬ ಇನ್‌ಸ್ಟಾಗ್ರಾಂ ಖಾತೆದಾರರು. ದೋಸೆ ತಿಂದರೆ ಬಹುಮಾನ ಕೊಡುತ್ತಾರೆ ಎಂದರೆ ದೋಸೆ ಚೆನ್ನಾಗಿಲ್ಲದೇ ಇರಬಹುದು ಎಂದುಕೊಂಡರೆ ಅದು ತಪ್ಪು. ದೋಸೆಯೇನೋ ತುಂಬಾ ಟೇಸ್ಟಿಯಾಗಿದೆ. ಆದರೆ ಅದರ ಉದ್ದ ಮಾತ್ರ 10 ಅಡಿ! ಈ 10 ಅಡಿಯಷ್ಟು ಇರುವ ದೋಸೆಯನ್ನು ಒಬ್ಬರೇ ಸಂಪೂರ್ಣವಾಗಿ ತಿಂದರೆ, ಈ ಬಹುಮಾನ ನೀಡಲಾಗುವುದಂತೆ!
ಈ ಕುರಿತು ಇನ್‌ಸ್ಟಾಗ್ರಾಂ ಖಾತೆಯಲ್ಲಿ ಮಾಹಿತಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ 10 ಅಡಿ ಉದ್ದದ ದೋಸೆ ತಯಾರಿಸುತ್ತಿರುವುದನ್ನು ನೋಡಬಹುದು. ದೋಸೆ ಕಾವಲಿಯಲ್ಲಿ ದೋಸೆ ಹಿಟ್ಟನ್ನು ಹಾಕುತ್ತಾ ಅದನ್ನು 10 ಅಡಿ ಉದ್ದದ ದೋಸೆಯಾಗಿ ಮಾಡುವುದನ್ನು ಇಲ್ಲಿ ನೋಡಬಹುದು. ದೋಸೆಯ ಮೇಲೆ ಎಣ್ಣೆ ಹಾಕಿ ನಂತರ ಆಲೂಗಡ್ಡೆ ಪಲ್ಯ ಹಾಗೂ ಕೆಲ ಮಸಾಲೆಯನ್ನು ಹಾಕುವುದನ್ನು ಇದರಲ್ಲಿ ಕಾಣಬಹುದು. ನಂತರ ಅದನ್ನು ಸುರುಳಿಯಂತೆ ಮಡಚಿ 10 ಅಡಿ ಉದ್ದದ ಪ್ಲೇಟ್‌ನಲ್ಲಿ ಹತ್ತಾರು ಬಗೆಯ ಚಟ್ನಿಯ ಜೊತೆ ಸರ್ವ್‌ ಮಾಡುತ್ತಾರೆ. ಕೊನೆಯಲ್ಲಿ ದೋಸೆಯ ಮೇಲೆ ಚೀಸ್‌ನ್ನು ಹಾಕುತ್ತಾರೆ. ಇದನ್ನು ಸ್ವಲ್ಪವೂ ಬಿಡದೇ ತಿನ್ನುವವರಿಗೆ ಬಹುಮಾನ ಕೊಡುತ್ತಾರಂತೆ.
ಇಲ್ಲಿದೆ ನೋಡಿ 10 ಅಡಿ ಉದ್ದದ ದೋಸೆ


A post shared by Bhawna 💫 (@delhi_tummy)


ಗುಟ್ಟಾಗಿ ಕಾಲ್‌ ಮಾಡ್ತಾರೆ, ಕೂಡ್ಲೇ ನಂಬರ್‌ ಮಾಯ ಆಗತ್ತೆ! ಕೇಳಿದ್ರೆ ಸಂಶಯದ ಪಿಶಾಚಿ ಅಂತಾರೆ… ಏನ್‌ ಮಾಡ್ಲಿ ಮೇಡಂ?

ಪೊಲೀಸ್‌ ಠಾಣೆ ಮೆಟ್ಟಿಲೇರಿದ ಐಎಎಸ್‌ ದಂಪತಿ ಫಸ್ಟ್‌ನೈಟ್ ಕೇಸ್‌! 32 ವರ್ಷಗಳ ಬಳಿಕ ದೂರು

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:eighteen − one =
Remember me
