ತೆಲಂಗಾಣ:ಚಹದಲ್ಲಿ ಇರುವಷ್ಟು ವೆರೈಟ್‌ ಇನ್ನಾವ ಪಾನೀಯದಲ್ಲಿಯೂ ಇಲ್ಲವೆನ್ನಬಹುದೇನೋ. ಒಂದೊಂದು ಪ್ರಾಂತ್ಯ, ಒಂದೊಂದು ರಾಜ್ಯ ಅಷ್ಟೇ ಏಕೆ ಒಂದೊಂದು ದೇಶದಲ್ಲಿ ಒಂದೊಂದು ಬಗೆಯ ಚಹಾಗಳು ಸಿಗುತ್ತವೆ. ಅದರಲ್ಲಿಯೂ ಚೀನಾದಲ್ಲಿಯೇ ನೂರಾರು ಬಗೆಯ ವೆರೈಟಿಗಳು ಚಹಾದಲ್ಲಿವೆ.
ನಿಮಗೂ ಅಪರೂಪದ ಸ್ವಾದಿಷ್ಟವಾಗಿರುವ ಚಹಾ ಮಾಡಲು ಬರುತ್ತದೆಯೆ? ಹಾಗಿದ್ದರೆ ನಿಮಗೆ ಒಂದು ಲಕ್ಷ ರೂಪಾಯಿ ಬಹುಮಾನ ಗೆಲ್ಲುವ ಅವಕಾಶವನ್ನು ಹೈದರಾಬಾದ್​ನಲ್ಲಿ ಟೀ ಕಂಪೆನಿಯೊಂದು ನೀಡಿದೆ. ಇದೇ ಮೊದಲ ಬಾರಿಗೆ ಟೀ ಚಾಂಪಿಯನ್​ಶಿಪ್ ಆಯೋಜನೆ ಮಾಡಲು ಸಿದ್ಧವಾಗಿದ್ದು, ಈ ಚಾಂಪಿಯನ್​​ಶಿಪ್​ನಲ್ಲಿ ಗೆಲುವು ಸಾಧಿಸಿದವರಿಗೆ ಒಂದು ಲಕ್ಷ ರೂಪಾಯಿ ಬಹುಮಾನ ಸಿಗಲಿದೆ.
ಅಂದಹಾಗೆ ಇದು ಮಹಿಳೆಯರಿಗೆ ಮಾತ್ರ. ಅಂತಾರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಮಾರ್ಚ್ 6ರಂದು ಮಹಿಳೆಯರಿಗಾಗಿ ಈ ಚಾಂಪಿಯನ್ ಶಿಪ್ ಅನ್ನು ಆಯೋಜನೆ ಮಾಡಲಾಗಿದೆ. ಮೊದಲ ಬಹುಮಾನ ಒಂದು ಲಕ್ಷ ರೂ. ಎರಡು ಮತ್ತು ಮೂರನೇ ಬಹುಮಾನ ಕ್ರಮವಾಗಿ 50 ಸಾವಿರ ಮತ್ತು 25 ಸಾವಿರ ರೂಪಾಯಿಗಳು ಇರಲಿವೆ.
ಈ ಚಾಂಪಿಯನ್​​ಶಿಪ್​ ಹೈದರಾಬಾದ್‌ನ ಹೈಟೆಕ್ ಸಿಟಿಯ ನೋವಾಟೆಲ್ ಹೋಟೆಲ್‌ನಲ್ಲಿ ನಡೆಯಲಿದೆ. ಮಾರ್ಚ್ 6ರ ಮಧ್ಯಾಹ್ನ 3.00 ಗಂಟೆಗೆ ಸ್ಪರ್ಧೆ ಆರಂಭವಾಗಲಿದೆ. ಆಸಕ್ತ ಮಹಿಳೆಯರು ತಾವು ತಯಾರಿಸುವ ಚಹಾದ ಬಗ್ಗೆ ಒಂದು ನಿಮಿಷದ ವಿಡಿಯೋವನ್ನು ವಾಟ್ಸ್​​ಆ್ಯಪ್​ ಸಂಖ್ಯೆ 8340974747 ನಂಬರ್​ಗೆ ಕಳುಹಿಸಬೇಕು. ಈ ರೀತಿಯಾಗಿ ವಿಡಿಯೋ ಕಳುಹಿಸಿದ ನೂರು ಮಂದಿಯನ್ನು ಆಯೋಜಕರು ಚಾಂಪಿಯನ್​ಶಿಪ್​ಗೆ ಆಯ್ಕೆ ಮಾಡುತ್ತಾರೆ.
ಆಯ್ಕೆಯಾದ ಸ್ಪರ್ಧಿಗಳು ಮಾರ್ಚ್ 6ರಂದು ನೊವಾಟೆಲ್ ಹೋಟೆಲ್‌ಗೆ ಆಗಮಿಸಿ, ಚಹಾವನ್ನು ತಯಾರಿಸಬೇಕು. ಅಲ್ಲಿಗೆ ಬರುವ ಅತಿಥಿಗಳಲ್ಲಿ ಕೆಲವರು ಚಹಾವನ್ನು ರುಚಿ ನೋಡುತ್ತಾರೆ. ಅವರ ಸ್ವಾದಿಷ್ಟಕ್ಕೆ ಅನುಗುಣವಾಗಿ ಯಾರಿಗೆ ಬಹುಮಾನ ಎಂದು ಘೋಷಣೆ ಮಾಡಲಾಗುತ್ತದೆ.
ಕಾರು ಚಲಾಯಿಸಲು ಬರುತ್ತಾ? ಅಂಚೆ ಇಲಾಖೆಯಲ್ಲಿದೆ 46 ಹುದ್ದೆಗಳು- 63 ಸಾವಿರ ರೂ.ವರೆಗೆ ಸಂಬಳ

ಕೆಂಪುಕೋಟೆ ಘಟನೆಯಲ್ಲಿ ಸಿಕ್ಕಿಬಿದ್ದದ್ದೇ ದೀಪ್‌ ಸಿಧು ಸಾವಿಗೆ ಕಾರಣವಾಯ್ತಾ? ಬೀದಿದೀಪ ಇಲ್ಲದ ಕಡೆ ಅಪಘಾತ! ಪೊಲೀಸರು ಹೇಳಿದ್ದೇನು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven − 7 =
Remember me
