ಮುಜಾಫರ್‌ಪುರ (ಬಿಹಾರ):ಹೊಟ್ಟೆ ನೋವು ಮತ್ತು ಮಲಬದ್ಧತೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬನ ಹೊಟ್ಟೆಯ ಸ್ಕ್ಯಾನಿಂಗ್‌ ಮಾಡಿದಾಗ ವೈದ್ಯರೇ ಶಾಕ್‌ ಆಗಿರುವ ಘಟನೆ ಬಿಹಾರದ ಪುಜಾಫರ್‌ಪುರದ ಮಾದಿಪುರ ಪ್ರದೇಶದಲ್ಲಿ ನಡೆದಿದೆ. ಇದಕ್ಕೆ ಕಾರಣ ಹೊಟ್ಟೆಯಲ್ಲಿ ಅವರಿಗೆ ಗಾಜಿನ ಟಂಬ್ಲರ್‌ ಕಂಡಿದೆ!
ಪಕ್ಕದ ವೈಶಾಲಿ ಜಿಲ್ಲೆಯ ಮಹುವಾದ 55 ವರ್ಷದ ವ್ಯಕ್ತಿ ಹೊಟ್ಟೆನೋವು ಮತ್ತು ಮಲಬದ್ಧತೆಯೆಂದು ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಟ್ರಾಸೌಂಡ್ ಮತ್ತು ಎಕ್ಸ್-ರೇ ಮಾಡಿದಾಗ ಕರುಳಿನಲ್ಲಿ ಒಂದು ವಸ್ತು ಕಂಡಿತು. ಆಮೇಲೆ ನೋಡಿದಾಗ ಅದು ಗಾಜಿನ ಟಂಬ್ಲರ್‌ ಎಂದು ತಿಳಿದು ಖುದ್ದು ವೈದ್ಯರೇ ಅಚ್ಚರಿ ಪಟ್ಟಿದ್ದಾರೆ.ಡಾ. ಮಖ್ದುಲುಲ್ ಹಕ್ ಅವರ ನೇತೃತ್ವದಲ್ಲಿ ಶಸ್ತ್ರಚಿಕಿತ್ಸೆ ಮಾಡಿ ಗಾಜಿನ ಟಂಬ್ಲರ್‌ ತೆಗೆಯಲಾಗಿದೆ. ಆದರೆ ಅದು ಹೊಟ್ಟೆಯೊಳಕ್ಕೆ ಹೋದದ್ದು ಹೇಗೆ ಎಂಬುದು ಮಾತ್ರ ನಿಗೂಢವಾಗಿದೆ. ಆ ವ್ಯಕ್ತಿಯನ್ನು ಕೇಳಿದಾಗ ಆತ ತಾನು ಟೀ ಕುಡಿಯುವಾಗ ಅದರ ಜತೆ ಗಾಜಿನ ಟಂಬ್ಲರ್‌ ಕೂಡ ನುಂಗಿದೆ ಎಂದಿದ್ದಾನೆ. ಆದರೆ ಇದನ್ನು ನಂಬಲು ಸಾಧ್ಯವಿಲ್ಲ ಎಂದಿದ್ದಾರೆ ವೈದ್ಯರು. ಇದನ್ನು ಸುಲಭದಲ್ಲಿ ಒಪ್ಪಿಕೊಳ್ಳುವುದು ಕಷ್ಟ. ಯಾವ ವ್ಯಕ್ತಿ ಈ ರೀತಿ ಮಾಡಲು ಸಾಧ್ಯ ಎಂದು ಪ್ರಶ್ನಿಸಿರುವ ವೈದ್ಯರು ಇದು ಹೇಗೆ ದೇಹ ಹೊಕ್ಕಿತು ಎಂಬ ಬಗ್ಗೆ ಇನ್ನೂ ತಲೆಕೆಡಿಸಿಕೊಳ್ಳುತ್ತಿದ್ದಾರೆ.
ವೈದ್ಯರ ಪ್ರಕಾರ, ಗಾಜಿನ ಟಂಬ್ಲರ್ ಈ ಭಾಗದಲ್ಲಿ ಸೇರಿಕೊಳ್ಳಲು ಇರುವ ಒಂದೇ ಒಂದು ಸಾಧ್ಯತೆ ಎಂದರೆ ಅದು ಗುದದ್ವಾರ. ಮನುಷ್ಯನ ದೇಹ ರಚನೆಯ ಪ್ರಕಾರ ಈ ಜಾಗ ಬಿಟ್ಟು, ಬೇರೆ ಯಾವ ಭಾಗದಿಂದಲೂ ಹೊಟ್ಟೆಯ ಆ ಕರುಳಿನಲ್ಲಿ ಸೇರಿಕೊಳ್ಳಲು ಸಾಧ್ಯವಿಲ್ಲ. ಆದರೆ ಈ ಬಗ್ಗೆ ನಾವು ರೋಗಿಯಲ್ಲಿ ಇನ್ನಷ್ಟು ಕೇಳಿ ಅದನ್ನು ಬಹಿರಂಗಪಿಡಿದರೆ ಆತನ ಖಾಸಗೀತನಕ್ಕೆ ಧಕ್ಕೆ ಮಾಡಿದಂತೆ. ವೈದ್ಯರಾಗಿ ನಾವು ಅವರ ಗೋಪ್ಯತೆ ಕಾಪಾಡಬೇಕಾಗುತ್ತದೆ ಎಂದಿದ್ದಾರೆ ವೈದ್ಯರು.
ಆರಂಭದಲ್ಲಿ ಎಂಡೋಸ್ಕೋಪಿಕ್ ವಿಧಾನದ ಮೂಲಕ ಗುದನಾಳದಿಂದ ಗಾಜನ್ನು ಹೊರತೆಗೆಯಲು ಪ್ರಯತ್ನಿಸಲಾಯಿತು. ಆದರೆ ಅದು ಸಾಧ್ಯವಾಗಲಿಲ್ಲ. ಆದ್ದರಿಂದ ಹೊಟ್ಟೆ ಕುಯ್ದು ಕರುಳಿನ ಭಾಗವನ್ನು ಛೇದಿಸಿ ಟಂಬ್ಲರ್ ಹೊರತೆಗೆಯಲಾಗಿದೆ. ರೋಗಿಯು ಸದ್ಯ ಆರೋಗ್ಯವಾಗಿದ್ದಾನೆ.
ಶಸ್ತ್ರಚಿಕಿತ್ಸೆಯ ನಂತರ ಕೊಲೊನ್ ಅನ್ನು ಹೊಲಿಯಲಾಗುತ್ತದೆ. ರೋಗಿ ಚೇತರಿಸಿಕೊಳ್ಳಲು ತುಂಬಾ ಸಮಯ ಹಿಡಿಯಬಹುದು ಎಂದಿದ್ದಾರೆ ಡಾ. ಹಕ್.
ಜನ ಬದಲಾವಣೆ ಬಯಸ್ತಿದ್ದಾರೆ, ನನ್ನ ಮಗ ಇದಾಗಲೇ ಸಿಎಂ ಆಗಿಬಿಟ್ಟ ಎಂದ ಭಗವಂತ್ ಮಾನ್ ತಾಯಿ

ಪುನೀತ್ ಸಾವಿನಿಂದ ಚೇತರಿಸಿಕೊಳ್ಳುವ ಮುನ್ನವೇ ಪತ್ನಿಗೆ ಮತ್ತೊಂದು ಆಘಾತ: ಅಶ್ವಿನಿ ತಂದೆ ಇನ್ನಿಲ್ಲ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 3 =
Remember me
