ಇಂಡೋನೇಷ್ಯಾ:ಕರೊನಾದ ಈ ಕಾಲದಲ್ಲಿ ಎಲ್ಲಾ ವಿದ್ಯಾರ್ಥಿಗಳಿಗೂ ಸ್ಮಾರ್ಟ್‌ಫೋನ್‌ ಕಡ್ಡಾಯವಾಗಿದೆ. ದೇಶ ಯಾವುದೇ ಇರಲಿ, ವಿದ್ಯಾರ್ಥಿಗಳು ಫೋನ್‌ ದಾಸರಾಗಿದ್ದಾರೆ. ಇದೀಗ ಆನ್‌ಲೈನ್‌ ಕ್ಲಾಸ್ ಮುಗಿದು ಶಾಲೆ ಶುರುವಾದರೂ ಮಕ್ಕಳಿಗೆ ಫೋನ್‌ ಬೇಕಾಗಿದೆ. ಎಷ್ಟೋ ಶಾಲೆಗಳಲ್ಲಿ ಮೊಬೈಲ್‌ಫೋನ್‌ ಶಾಲೆಗೆ ತರುವುದನ್ನು ಬ್ಯಾನ್‌ ಮಾಡಿದ್ದರೂ, ಮಕ್ಕಳು ತೆಗೆದುಕೊಂಡು ಹೋಗುತ್ತಿದ್ದಾರೆ.
ಇದರಿಂದ ಸಿಟ್ಟುಗೊಂಡ ಶಿಕ್ಷಕಿಯೊಬ್ಬರು ತಮ್ಮ ವಿದ್ಯಾರ್ಥಿಗಳು ಕ್ಲಾಸ್​ರೂಂನೊಳಗೆ ಮೊಬೈಲ್‌ ಫೋನ್‌ ತಂದಿದ್ದನ್ನು ನೋಡಿ ಕೋಪಗೊಂಡು ಆ ಸ್ಮಾರ್ಟ್​​ಫೋನ್​​ಗಳನ್ನು ಸುಟ್ಟು ಹಾಕಿದ್ದು, ಅದರ ವಿಡಿಯೋ ಭಾರೀ ವೈರಲ್ ಆಗಿದೆ. ಇಂಡೋನೇಷ್ಯಾದಲ್ಲಿ ಈ ಘಟನೆ ನಡೆದಿದೆ.
ಶಾಲಾ ಶಿಕ್ಷಕರ ಗುಂಪೊಂದು ಕ್ಲಾಸ್​ ರೂಂನಲ್ಲಿ ಮಕ್ಕಳಿಂದ ಸ್ಮಾರ್ಟ್‌ಫೋನ್‌ಗಳನ್ನು ಕಿತ್ತುಕೊಂಡಿದೆ. ನಂತರ ಶಿಕ್ಷಕಿಯೊಬ್ಬರು ಬೆಂಕಿಯಲ್ಲಿ ಅದನ್ನು ಹಾಕಿದ್ದಾರೆ. ವಿದ್ಯಾರ್ಥಿಗಳು ತಮ್ಮ ಮೊಬೈಲ್ ವಾಪಾಸ್ ನೀಡಬೇಕೆಂದು ಮನವಿ ಮತ್ತು ಅತ್ತರೂ ಶಿಕ್ಷಕರು ಕೇಳದೆ ಆ ಮೊಬೈಲ್​ಗಳನ್ನು ಸುಟ್ಟು ಹಾಕಿ, ಶಿಕ್ಷೆಯನ್ನು ನೀಡಿದ್ದಾರೆ.
ಇದಕ್ಕೆ ಜಾಲತಾಣದಲ್ಲಿ ಪರ-ವಿರೋಧಗಳ ನಿಲುವು ವ್ಯಕ್ತವಾಗಿದೆ.
ಇಲ್ಲಿದೆ ನೋಡಿ ವಿಡಿಯೋ:
A post shared by Fakta Indo | Berita Indonesia (@fakta.indo)

ಹೈಕೋರ್ಟ್‌ ನ್ಯಾಯಮೂರ್ತಿಯಾದ ಕಾನೂನು ಕಾರ್ಯದರ್ಶಿ: ಎರಡೆರಡು ಬಾರಿ ಇತಿಹಾಸ ಸೃಷ್ಟಿ!

ಎಂಬಿಬಿಎಸ್‌ ಕಲಿಯಲು ಯೂಕ್ರೇನ್‌, ರಷ್ಯಕ್ಕೆ ಹೋಗುವುದೇಕೆ? ಭಾರತದಲ್ಲಿ ಇಲ್ಲದ್ದು ಅಂಥದ್ದೇನಿದೆ ಅಲ್ಲಿ ಗೊತ್ತಾ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × three =
Remember me
