ಕೊಯಮತ್ತೂರು:ಐವರು ಶಾಲಾ ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರ ಎಸಗಿದ್ದ ಶಿಕ್ಷಕನಿಗೆ 79 ವರ್ಷಗಳ ಕಠಿಣ ಶಿಕ್ಷೆ ವಿಧಿಸಿ ಕೇರಳದ ಪೋಕ್ಸೋ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ) ನ್ಯಾಯಾಲಯ ಆದೇಶಿಸಿದೆ.
ಕಣ್ಣೂರು ಜಿಲ್ಲೆಯ ಪಯ್ಯನೂರಿನ ಆಲಪಡಂಬು ನಿವಾಸಿ ಪಿ.ಇ.ಗೋವಿಂದನ್ ನಂಬೂದರಿ ಎಂಬಾತನಿಗೆ ಈ ಶಿಕ್ಷೆಯನ್ನು ಕೋರ್ಟ್​ ವಿಧಿಸಿದೆ, ಜತೆಗೆ ಈತನಿಗೆ 2.70 ಲಕ್ಷ ರೂಪಾಯಿ ದಂಡವನ್ನೂ ವಿಧಿಸಿದೆ.
2013-2014ರ ಅವಧಿಯಲ್ಲಿ ಈತ ತರಗತಿಯಲ್ಲಿಯೇ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ. ವಿದ್ಯಾರ್ಥಿನಿಯೊಬ್ಬಳ ಪಾಲಕರು ಮಗಳ ನಡವಳಿಕೆಯಿಂದ ಸಂದೇಹಗೊಂಡಾಗ ವಿಷಯ ಬಹಿರಂಗವಾಗಿದೆ. ಈ ಬಗ್ಗೆ ಶಾಲೆಯ ಆಡಳಿತ ಮಂಡಳಿಯ ಗಮನಕ್ಕೆ ತಂದರೂ ಪ್ರಯೋಜನ ಆಗಲಿಲ್ಲ ಎಂದು ಅವರು ಪೊಲೀಸರಲ್ಲಿ ದೂರಿದ್ದರು.
ಈ ಹಿನ್ನೆಲೆಯಲ್ಲಿ ಶಿಕ್ಷಕ ಸೇರಿದಂತೆ ಶಾಲೆಯ ಮುಖ್ಯೋಪಾಧ್ಯಾಯಿನಿ ಮತ್ತು ಹೆಲ್ಪ್ ಡೆಸ್ಕ್ ಪ್ರಭಾರಿ ಅವರ ವಿರುದ್ಧವೂ ಕೇಸ್​ ದಾಖಲಾಗಿತ್ತು. ಘಟನೆಗಳು ಬೆಳಕಿಗೆ ಬಂದ ನಂತರ ಗೋವಿಂದನ್ ಅವರನ್ನು ವಜಾಗೊಳಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಶಾಲೆಯ ಮುಖ್ಯೋಪಾಧ್ಯಾಯಿನಿ ಮತ್ತು ಹೆಲ್ಪ್ ಡೆಸ್ಕ್ ಪ್ರಭಾರಿ ಅವರನ್ನು ಕೋರ್ಟ್​ ಬಿಡುಗಡೆ ಮಾಡಿದೆ.(ಏಜೆನ್ಸೀಸ್​)
ಬೆಲ್ಟ್​, ಕ್ಯಾಪ್​ ತೆಗೆಸಿ ಆರೋಪಿಗಳ ಜತೆ ಪೊಲೀಸರನ್ನು ಕುಳ್ಳರಿಸಿದ ಕೋರ್ಟ್​! ಏಕಿಂತ ಶಿಕ್ಷೆ ಅಂತೀರಾ?

ತ್ರಿವಳಿ ತಲಾಖ್​, ಲೈಂಗಿಕ ದೌರ್ಜನ್ಯದಂಥ ಐತಿಹಾಸಿಕ ತೀರ್ಪು ನೀಡಿದ ನ್ಯಾ.ಲಲಿತ್​ ಮುಂದಿನ ಸಿಜೆಐ?

ಸಿದ್ದರಾಮೋತ್ಸವದ ಸಂಭ್ರಮದಲ್ಲಿದ್ದ ಶಾಸಕ ಪಾಟೀಲ್​ಗೆ ಆಘಾತ: ವಾಪಸ್​ ಬರುವಾಗ ಕಾಲು ಮುರಿತ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six − 5 =
Remember me
