ರಾಯ್ಪುರ (ಛತ್ತೀಸಗಢ):ನನ್ನ ಹೆಸರು ಮಹೇಂದ್ರ ಸಿಂಗ್‌ ಧೋನಿ. ನನಗೆ ಶಿಕ್ಷಕನಾಗುವ ಎಲ್ಲಾ ಅರ್ಹತೆ ಇದ್ದು, ನನಗೆ ಹುದ್ದೆ ನೀಡಿ ಎಂಬ ಅರ್ಜಿಯೊಂದು ಛತ್ತೀಸಘಡ ಸರ್ಕಾರಕ್ಕೆ ಬಂದಿದ್ದು, ಇದರಲ್ಲಿ ಸಚಿನ್‌ ತೆಂಡೂಲ್ಕರ್‌ ಅವರ ಹೆಸರೂ ಸೇರಿಸಲಾಗಿದೆ. ಈ ಅರ್ಜಿಯಲ್ಲಿ ತಂದೆಯ ಜಾಗದಲ್ಲಿ ಸಚಿನ್‌ ತೆಂಡೂಲ್ಕರ್‌ ಹೆಸರು ಹಾಕಲಾಗಿದ್ದು, ವಿಚಿತ್ರ ಎಂದರೆ ಈ ಅರ್ಜಿಯು ಷಾರ್ಟ್‌ಲಿಸ್ಟ್‌ನಲ್ಲಿ ಕೂಡ ಆಯ್ಕೆಯಾಗಿಬಿಟ್ಟಿದೆ!
ಛತ್ತೀಸಘಡದಲ್ಲಿ 14,850 ಶಿಕ್ಷಕರ ನೇಮಕಾತಿ ಪ್ರಕ್ರಿಯೆ ನಡೆಯುತ್ತಿತ್ತು. ಲಕ್ಷಾಂತರ ಮಂದಿ ಅರ್ಜಿ ಸಲ್ಲಿಸಿದ್ದರು. ಈ ಸಂದರ್ಭದಲ್ಲಿ ಇಂಥದ್ದೊಂದು ಅರ್ಜಿ ಕೂಡ ಬಂದಿದ್ದು, ಅದನ್ನು ಆಯ್ಕೆ ಮಾಡಲು ಷಾರ್ಟ್‌ಲಿಸ್ಟ್‌ನಲ್ಲಿ ಹಾಕಲಾಗಿದೆ. ಅಲ್ಲಿಯವರೆಗೂ ಈ ಅರ್ಜಿಯ ಬಗ್ಗೆ ಯಾರೂ ತಲೆಕೆಡಿಸಿಕೊಂಡಿಯೇ ಇರಲಿಲ್ಲ. ಆದರೆ ಸಂದರ್ಶನ ನಡೆಯುವ ಸಮಯದಲ್ಲಿ ಮಹೇಂದ್ರ ಸಿಂಗ್ ಧೋನಿ ಎಂಬ ಅಭ್ಯರ್ಥಿಯನ್ನು ಅಧಿಕಾರಿಗಳು ಕರೆದಿದ್ದಾರೆ. ಆದರೆ ಆಗ ಯಾರೂ ಬರಲಿಲ್ಲ. ಈ ಸಮಯದಲ್ಲಿ ಅರ್ಜಿಯನ್ನು ನೋಡಿದಾಗ ಏನೋ ಸಂದೇಹ ಶುರುವಾಗಿದೆ.
ಧೋನಿಯ ಜತೆಗೆ ತೆಂಡೂಲ್ಕರ್‌ ಹೆಸರೂ ಇದ್ದುದನ್ನು ಕಂಡ ಅಧಿಕಾರಿಗಳು ಆ ಅರ್ಜಿಯ ಮೇಲೆ ಇದ್ದ ದೂರವಾಣಿ ಸಂಖ್ಯೆಗೆ ಕರೆ ಮಾಡಿದ್ದಾರೆ. ನಂತರ ಇದು ನಕಲಿ ಎಂದು ತಿಳಿದಿದೆ. ಈಗ ಈ ನಕಲಿ ಅರ್ಜಿ ಸಲ್ಲಿಸಿರುವ ವ್ಯಕ್ತಿಯ ಹುಡುಕಾಟದಲ್ಲಿ ತೊಡಗಿದ್ದಾರೆ ಅಧಿಕಾರಿಗಳು. ಈತನ ವಿರುದ್ಧ ಎಫ್‌ಐಆರ್‌ ದಾಖಲಿಸಲು ಮುಂದಾಗಿದ್ದಾರೆ. ಆದರೆ ಈ ಅರ್ಜಿ ನಕಲಿಯಾದರೆ ಮಹೇಂದ್ರಸಿಂಗ್‌ ಧೋನಿ ಹೆಸರಿನಲ್ಲಿ ಅಲ್ಲಿ ಇರುವ ಸರ್ಟಿಫಿಕೇಟ್‌ಗಳೂ ನಕಲಿಯೆಂದೇ ಆಗಿದೆ. ಹಾಗಿದ್ದರೆ ಈತನನ್ನು ಷಾರ್ಟ್‌ಲಿಸ್ಟ್‌ ಮಾಡಿದ್ದು ಹೇಗೆ ಎಂಬ ಪ್ರಶ್ನೆಗೆ ಅಧಿಕಾರಿಗಳಲ್ಲಿ ಉತ್ತರವಿಲ್ಲ. ಸದ್ಯ ಜಾಲತಾಣದಲ್ಲಿ ಇದು ವೈರಲ್‌ ಆಗಿದ್ದು, ನಗೆಗಡಲಿನಲ್ಲಿ ತೇಲಿಸಿದೆ.
ಮಗನ ವಯಸ್ಸಿನವನ ಜತೆ ಪತ್ನಿಯ ಕಾಮದಾಟಕ್ಕೆ ಬಲಿಯಾದ ಮಂಡ್ಯದ ಉಪ ಪ್ರಾಂಶುಪಾಲ! ಕೊಲೆ ರಹಸ್ಯ ಬಯಲು..

ಗೂಗಲ್‌ನಲ್ಲಿ ಪುರುಷರು ಅತೀ ಹೆಚ್ಚಾಗಿ ಹುಡುಕುವುದು ಇವಂತೆ- ಸಮೀಕ್ಷೆ ಏನು ಹೇಳಿದೆ ನೋಡಿ…

ಬೆಳಗಾವಿ ಬೀದಿ ಕಾಮಣ್ಣನಿಗೆ ಮಹಿಳೆಯಿಂದ ಗೂಸಾ: ಚಪ್ಪಲಿ ಏಟು ತಿಂದವ ಏನ್‌ ಮಾಡಿದ ನೋಡಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four + seventeen =
Remember me
